ಪುತ್ತೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : ಲೇಖಕಿ, ಹವ್ಯಾಸಿ ಬರಹಗಾರ್ತಿ, ಕವಯತ್ರಿ, ಧಾರ್ಮಿಕ, ಸಾಮಾಜಿಕ ಹಾಗೂ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಹರ್ಷಿತಾ ಹರೀಶ್ ಕುಲಾಲ್ ಇವರು ಕಾವ್ಯಶ್ರೀ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ (ರಿ) ಕರ್ನಾಟಕ ಹಾಗೂ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಅ.19ರಂದು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಹರ್ಷಿತಾ ಅವರು ಕಾವು ಗ್ರಾಮದ ವೆಂಕಪ್ಪ ಕುಲಾಲ್ ಮತ್ತು ಶ್ರೀಮತಿ ಮೀನಾಕ್ಷಿಯವರ ಸುಪುತ್ರಿ. ವಿದ್ಯಾರ್ಥಿ ಜೀವನದಲ್ಲೇ ಕಲೆ ಸಾಹಿತ್ಯ ಪತ್ರಿಕಾರಂಗದಲ್ಲಿ ಆಸಕ್ತಿ ಹೊಂದಿದ್ದ ಹರ್ಷಿತಾ ಮುಂದೆ ಪತ್ರಕರ್ತೆಯಾಗಿ ಉದಯವಾಣಿ, ಹೊಸದಿಗಂತ, ಸುದ್ದಿ ಬಿಡುಗಡೆ, ವಿಜಯಕರ್ನಾಟಕ, ಪ್ರಜಾವಾಣಿ, ವಿಜಯವಾಣಿ, ಬಿಂಬ ಧ್ವನಿ ಮೊದಲಾದ ಪತ್ರಿಕೆಗಳಲ್ಲಿ ಅನೇಕ ಲೇಖನ, ಪ್ರತಿಭೆಗಳ ಪರಿಚಯ ಮಾಡುವುದರ ಮೂಲಕ ಓದುಗರ ಗಮನ ಸೆಳೆದವರು.
`ಕಾವ್ಯಶ್ರೀ’ ರಾಜ್ಯ ಪ್ರಶಸ್ತಿಗೆ ಹರ್ಷಿತಾ ಕುಲಾಲ್ ಆಯ್ಕೆ
womens corner
1 Min Read