ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಗಲ್ಫ್ ರಾಷ್ರ್ಟ ಕತಾರ್ ನ ಉದ್ಯಮಿ ಮತ್ತು ಸಮಾಜ ಸೇವಕ ನಾಗರಾಜ್ ಬಂಗೇರ (58 ವರ್ಷ) ಅವರು ಅ. 18ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ದುಡಿಮೆಯ ಬಹುಪಾಲನ್ನು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಬದುಕನ್ನು ಸಮರ್ಪಿಸಿದ ಕೊಡುಗೈ ದಾನಿಯಾಗಿ ಗುರುತಿಸಿಕೊಂಡಿದ್ದರು. ಮೂಲತಃ ಹಳೆಯಂಗಡಿ ಸಮೀಪದ ಪಕ್ಷಿಕೆರೆಯವರಾದ ನಾಗರಾಜ್ ಬಂಗೇರ ಉದ್ಯೋಗ ಅರಸಿ ಮುಂಬಯಿಗೆ ತೆರಳಿ ಅಲ್ಲಿನ ಗ್ಯಾರೇಜ್ ಮೆಕ್ಯಾನಿಕ್ ಆಗಿ ಕೆಲಸ ಮಾಡಿ, 35 ವರ್ಷಗಳ ಹಿಂದೆ ಗಲ್ಫ್ ರಾಷ್ರ್ಟ ಕತಾರ್ ಗೆ ತೆರಳಿ ಸ್ವಂತ ಗ್ಯಾರೇಜ್ ಆರಂಭಿಸಿ ಹಲವು ಮಂದಿಗೆ ಉದ್ಯೋಗದಾತರಾಗಿದ್ದರು. ಕುಲಾಲ ಸಂಘ, ಕರ್ನಾಟಕ ಸಂಘ, ತುಳುಕೂಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಅವರು ತಾಯಿ, ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಕತಾರ್ ಉದ್ಯಮಿ ನಾಗರಾಜ್ ಬಂಗೇರ ವಿಧಿವಶ
Kulal news
1 Min Read