ಕಾಸರಗೋಡು(ಕುಲಾಲ ವರ್ಲ್ಡ್ ಡಾಟ್ ಕಾಮ್): ಕಾಸರಗೋಡು ಜಿಲ್ಲಾ ಕುಲಾಲ ಸಂಘ ಕುಂಬಳೆ ಪಂಚಾಯತ್ ಸಮಿತಿಯ ವತಿಯಿಂದ ದಿವಂಗತ ನಾರಾಯಣ ಮಾಸ್ಟರ್ ಕಮಾರ್ತೆ ಸಂಸ್ಮರಣಾ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕಳತ್ತೂರಿನಲ್ಲಿ ಜರಗಿತು.
ಈ ಕಾರ್ಯಕ್ರಮದಲ್ಲಿ ಕುಂಬಳೆ ಪಂಚಾಯತ್ ವ್ಯಾಪ್ತಿಯಲ್ಲಿ ಶಿಕ್ಷಣ, ಕಲೆ, ಧಾರ್ಮಿಕ , ರಾಜಕೀಯ, ಹೀಗೆ ಹತ್ತು ಹಲವು ಕ್ಷೇತ್ರದಲ್ಲಿ ತನ್ನದೇ ಆದ ವರ್ಚಸ್ಸನ್ನು ಬೀರಿದ ಮಾತ್ರವಲ್ಲದೆ ಜಿಲ್ಲಾ ಮಟ್ಟದಲ್ಲಿ ಕುಲಾಲ ಸಮುದಾಯದ ಅಭ್ಯುದಯಕ್ಕೆ ಶ್ರಮಿಸಿದ ಮತ್ತು ಎಲ್ಲರಿಗೂ ಆದರ್ಶಪ್ರಾಯರಾಗಿದ್ದ ದಿವಂಗತ ನಾರಾಯಣ ಮಾಸ್ಟರ್ ಕಮಾರ್ತೆ ಇವರ ಸ್ಮರಣಾರ್ಥ ಕೊಡಲ್ಪಡುವ `ದಿ. ನಾರಾಯಣ ಮಾಸ್ಟರ್ ಸ್ಮಾರಕ ಕುಲಾಲ ತಿಲಕ’ ಪ್ರಶಸ್ತಿಯನ್ನು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ತಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ವೇದಾವತಿ ಎಸ್. ಅವರಿಗೆ ನೀಡಿ ಗೌರವಿಸಲಾಯಿತು. ಉಪ್ಪಳ ಬಳಿಯ ಐಲ ಗೇಟಿನ ಸಂಕಪ್ಪ ಕುಲಾಲ್-ವಸಂತಿ ದಂಪತಿಯ ಪುತ್ರಿಯಾದ ವೇದಾವತಿ ಅವರು ಡಾ.ಯು ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ದಪಡಿಸಿ ಮಂಡಿಸಿದ ”ನವ್ಯೋತ್ತರ ಕನ್ನಡ ಮಹಿಳಾ ಕಾವ್ಯದಲ್ಲಿ ಹೆಣ್ಣಿನ ಅಸ್ಮಿತೆಯ ಪ್ರತಿನಿಧಿತ್ವ” ಎಂಬ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವ ವಿದ್ಯಾಲಯ ಡಾಕ್ಟರೇಟ್ ಪದವಿಯನ್ನು ನೀಡಿತ್ತು.
ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಗಂಗಾಧರ ಕೆ ಟಿ ವಹಿಸಿದ್ದರು. ಕುಲಶೇಖರ ವೀರನಾರಾಯಣ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಪ್ರೇಮಾನಂದ ಕುಲಾಲ್ ಕೋಡಿಕಲ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್, ಗೀತಾ ಮನೋಜ್ ಮರೊಳಿ ಹಾಗೂ ಬಾಲಕೃಷ್ಣ ದೀಕ್ಷಾ ಕುಂಜತ್ತೂರು ಇವರು ಭಾಗವಹಿಸಿದರು. ಸಭೆಯಲ್ಲಿ ಭಾರತಿ ಉಳಕರೆ, ಸುಂದರಿ ಕಮಾರ್ತೆ , ದಯಾನಂದ ಮುಜಂಗಾವು, ಯು.ಎಂ. ಮೂಲ್ಯ ಕಿದೂರು ಉಪಸ್ಥಿತರಿದ್ದರು. ನಾರಾಯಣ ಕಳತ್ತೂರು ಸ್ವಾಗತಿಸಿ ಅಶೋಕ ಪುಣಿಯೂರು ಧನ್ಯವಾದ ಸಮರ್ಪಿಸಿದರು. ಕೃಷ್ಣ ಕಳತ್ತೂರು ಕಾರ್ಯಕ್ರಮವನ್ನು ನಿರೂಪಿಸಿದರು.
ಮದ್ಯಾಹ್ನ ಭೋಜನದ ಬಳಿಕ ಕುಲಾಲ ಪ್ರತಿಭೆಗಳಿಂದ ಕುಲಾಲ ಕುಸಲ್ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಜರಗಿತು.