ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : ದೀಕ್ಷಿತಾ ಕುಲಾಲ್ ಅವರು ಮಂಡಿಸಿದ ‘ಮೈಕ್ರೋಬಿಯಲ್ ಮಿಡಿಯೆಟೆಡ್ ಸಿಂಥೆಸಿಸ್ ಆಫ್ ವಿಸಿಬಲ್ ಲೈಟ್ ಆ್ಯಕ್ಟಿವ್ ಸಿಲ್ವರ್ ಬೇಸ್ಟ್ ಟೈಟಾನಿಯಾ ನ್ಯಾನೊಕಾಂಪೊಸಿಟ್ಸ್ ಆ್ಯಂಡ್ ದೆಯರ್ ಪೋಟೋಕ್ಯಾಟಲಿಟಿಕ್ ಅಪ್ಲಿಕೇಷನ್ ಇನ್ ಡಿಗ್ರೇಡೇಶನ್ ಆಫ್ ಅಜೋ ಡೈಸ್’ ಮಹಾಪ್ರಬಂಧಕ್ಕೆ ಸುರತ್ಕಲ್ ನ್ಯಾಶನಲ್ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ ಕರ್ನಾಟಕ (ಎನ್ಐಟಿಕೆ) ಪಿಎಚ್.ಡಿ ಪದವಿ ನೀಡಿದೆ. ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಿಕೆ ಡಾ. ವಿದ್ಯಾ ಶೆಟ್ಟಿ. ಕೆ. ಅವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಮಂಡಿಸಿದ್ದಾರೆ.
ಬೊಕ್ಕಪಟ್ಟದ ದಿ. ಗಣೇಶ್ ರಾಮ್ ಕುಲಾಲ್ ಮತ್ತು ಮಾಲತಿ ದಂಪತಿ ಪುತ್ರಿಯಾಗಿರುವ ದೀಕ್ಷಿತಾ ಕುಲಾಲ್ ಅವರು ಯೇನಪೊಯಾ ರಿರ್ಸರ್ಚ್ ಸೆಂಟರ್ (ಡೀಮ್ಸ್ ಟು ಬಿ ಯುನಿರ್ಸಿಟಿ) ದೇರಳಕಟ್ಟೆಯಲ್ಲಿ ರಿಸರ್ಚ್ ಅಸೋಸಿಯೆಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.