ಬಿ. ಎಸ್. ಕುಲಾಲ್ (ಬಂಟ್ವಾಳ ಶಂಕರನಾರಾಯಣ ಕುಲಾಲ್) ಇವರು ಮದ್ರಾಸ್ ಸರಕಾರದಡಿಯಲ್ಲಿ ಕಂದಾಯ ಇಲಾಖೆಗೆ ಕ್ಲರ್ಕ್ ಆಗಿ ಸೇರಿ ಮುಂಬಡ್ತಿ ಹೊಂದಿ ಅಪಾರ ಪಾಂಡಿತ್ಯದೊಂದಿಗೆ ಬೇರೆ ಬೇರೆ ಹುದ್ದೆಗಳನ್ನು ಅಲಂಕರಿಸಿ, ತಹಶೀಲ್ದಾರ್ ಹುದ್ದೆಯನ್ನೂ ನಿರ್ವಹಿಸಿದ, ವೃತ್ತಿ ಬದುಕಿನಲ್ಲಿ ಇರುವಾಗಲೇ ಹಲವಾರು ಸಂಘಟನೆಗಳಲ್ಲಿ, ನಾಟಕದಲ್ಲಿ ಕಿರುತೆರೆಯಲ್ಲಿ ನಟಿಸಿದವರು. ವೃತ್ತಿ ನಂತರ ತನ್ನ ಬದುಕನ್ನು ಸಮಾಜಸೇವೆಗೆ ಮುಡಿಪಾಗಿಟ್ಟು ಕುಲಾಲ ಸಮಾಜ ಸೇವಾ ಸಂಘ ಪುತ್ತೂರು ಇದರ ಅಧ್ಯಕ್ಷರಾಗಿ, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷರಾಗಿ ಸಹಕಾರ ಸಂಘದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿ ಪ್ರಕೃತ ನಿರ್ದೇಶಕರಾಗಿ ದುಡಿಯುತ್ತಿರುವವರು.
ಬಿ. ಎಸ್. ಕುಲಾಲ್ ಪುತ್ತೂರು
PERSONALITIES
1 Min Read