ದುಬೈ(ಕುಲಾಲ ವರ್ಲ್ಡ್ ಡಾಟ್ ಕಾಮ್): ಮಿಸ್ ಯುಎಇ ಇಂಟರ್ ನ್ಯಾಷನಲ್ -2024 ಬ್ಯೂಟಿ ಸ್ಪರ್ಧೆಯಲ್ಲಿ ಮುಂಬಯಿ ಮೂಲದ ಉನ್ನತಿ ಕುಲಾಲ್ ಮೊದಲ ರನ್ನರ್ ಅಪ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಬೀಯಿಂಗ್ ಮುಸ್ಕಾನ್ ಈವೆಂಟ್ಸ್ ಈ ಸ್ಫರ್ಧೆಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಆಯೋಜಿಸಿತ್ತು. ಈ ಸ್ಪರ್ಧೆಯು ಯುಎಇಯಲ್ಲಿ ವಾಸಿಸುವ ಎಲ್ಲಾ ರಾಷ್ಟ್ರೀಯರಿಗೂ ಭಾಗವಹಿಸಲು ಮುಕ್ತವಾಗಿತ್ತು. ಮುಂಬೈನಲ್ಲಿ ಹುಟ್ಟಿ ಬೆಳೆದ ಉನ್ನತಿ ಕುಲಾಲ್ ಅವರ ಪೋಷಕರು ಮಂಗಳೂರು ಮೂಲದವರು. ಕಂಪ್ಯೂಟರ್ ಇಂಜಿನಿಯರಿಂಗ್ ಪದವೀಧರರಾದ ಅವರು ಯುಎಇಯ ಅತಿದೊಡ್ಡ ಹೆಲ್ತ್ಕೇರ್ ಕಂಪನಿಯಾದ ದಮನ್ ಇನ್ಶುರೆನ್ಸ್ನಲ್ಲಿ ವ್ಯಾಪಾರ ವಿಶ್ಲೇಷಕರಾಗಿ ದುಡಿಯುತ್ತಿದ್ದಾರೆ. ಉತ್ತಮ ನೃತ್ಯಗಾರ್ತಿಯಾಗಿಯೂ ಗುರುತಿಸಿಕೊಂಡಿರುವ ಉನ್ನತಿ ಕುಲಾಲ್ ಅವರನ್ನು ಯುಎಇ ಯ ಬಹು ಪ್ರತಿಷ್ಠಿತ ಬಂಟ್ಸ್ ಸಂಘದ ಸಮಾರಂಭದಲ್ಲಿ ಗುರುತಿಸಿ ಸನ್ಮಾನಿಸಲಾಯಿತು.