ಕುಲಾಲ ಸಮುದಾಯದ ಜನಪ್ರಿಯ ಸುದ್ದಿ ಮಾಧ್ಯಮ ಕುಲಾಲ್ ವರ್ಲ್ಡ್ ಡಾಟ್ ಕಾಮ್ ಫೇಸ್ ಬುಕ್ ಪುಟವನ್ನು ರಿಪೋರ್ಟ್ ಮಾಡುವ ಮೂಲಕ ಕೆಲ ದುಷ್ಟ ಶಕ್ತಿಗಳು ನಮ್ಮನ್ನು ಹತ್ತಿಕ್ಕುವ ಹುನ್ನಾರ ನಡೆಸಿ ಯಶಸ್ವಿಯಾಗಿದೆ. ಈ ಸಂಚಿನ ವಿರುದ್ಧ ಎಲ್ಲ ಸ್ವಜಾತಿ ಬಾಂಧವರು ಒಗ್ಗೂಡಿ ಬೆಂಬಲ ಸೂಚಿಸಬೇಕಿದೆ..
ಕಳೆದ ಮೂರು ವರ್ಷಗಳಿಂದ ಪ್ರಕಟವಾಗುತ್ತಿರುವ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ನ ಫೇಸ್ ಬುಕ್ ಪುಟದಲ್ಲಿ ಸುದ್ದಿಗಳನ್ನು ಶೇರ್ ಮಾಡುವ ಸೌಲಭ್ಯವನ್ನು ನಿನ್ನೆಯಿಂದ (ಫೆ. 12) ಫೇಸ್ಬುಕ್ ಬ್ಲಾಕ್ ಮಾಡಿದೆ. ಬಾರಿಯೂ ವೆಬ್ ಸೈಟ್ ನ ಫೇಸ್ಬುಕ್ ಪೇಜ್ನಲ್ಲಿ, ‘‘ನಿಮ್ಮ ಪೇಜ್ ನ್ಯೂಸ್ ಲಿಂಕ್ ಶೇರ್ ಮಾಡದಂತೆ ತಡೆಹಿಡಿಯಲಾಗಿದೆ. ಫೇಸ್ಬುಕ್ ನಿಯಮಾವಳಿಗೆ ನಿಮ್ಮ ಪುಟದ ಚಟುವಟಿಕೆಗಳು ಬದ್ಧವಾಗಿಲ್ಲದ ಕಾರಣದಿಂದ ಹೀಗೆ ಆಗಿರಬಹುದು’’ ಎಂಬ ಎಚ್ಚರಿಕೆ ಸಂದೇಶ ಬಂದಿದೆ. ಅಲ್ಲದೆ ನಮ್ಮ ಈ ಹಿಂದಿನ ಎಲ್ಲಾ ವೆಬ್ ಸೈಟ್ ಲಿಂಕ್ ನ ಪೋಸ್ಟ್ ಗಳನ್ನು ಫೇಸ್ ಬುಕ್ ನಿಂದ ತೆಗೆದು ಹಾಕಲಾಗಿದೆ.
ವೆಬ್ ಸೈಟ್ ಪ್ರಾರಂಭವಾದ ದಿನದಿಂದ ನಿರಂತರಾಗಿ ಕೆಲ ವಿಘ್ನ ಸಂತೋಷಿಗಳು ನಮ್ಮ ಪ್ರಯತ್ನಕ್ಕೆ ಒಂದಿಲ್ಲೊಂದು ರೀತಿಯ ಕಿರುಕುಳಗಳನ್ನು ನೀಡುತ್ತಾ ಬಂದಿದ್ದಾರೆ. ಅದರ ಮುಂದುವರಿದ ಭಾಗವಾಗಿ ಫೇಸ್ ಬುಕ್ ನಲ್ಲಿ ಸುದ್ದಿ ಹಂಚದಂತೆ ತಡೆಯೊಡ್ಡಿದ್ದಾರೆ. ಕುಲಾಲ ಸಮುದಾಯ ಹಾಗೂ ತುಳುನಾಡಿನ ಸಂಸ್ಕೃತಿಗೆ ಸಂಬಂಧಿಸಿದ ಸುದ್ದಿಗಳನ್ನು ಮಾತ್ರ ಹಂಚುತ್ತಿರುವ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಇದುವರೆಗೆ ಇತರ ಯಾವುದೇ ವ್ಯಕ್ತಿ ಅಥವಾ ಸಂಘ-ಸಂಸ್ಥೆಗಳ ಕುರಿತಂತೆ ವೈಯಕ್ತಿಕವಾಗಿ ನಕಾರಾತ್ಮಕ ಅಥವಾ ಇತರರಿಗೆ ನೋವು ತರುವ ಸುದ್ದಿಯನ್ನು ಪ್ರಕಟಿಸಿಲ್ಲ. ಆದರೂ ಫೇಸ್ಬುಕ್ಗೆ ನಮ್ಮ ವಿರುದ್ಧ ವರದಿ ಮಾಡಲು ಕಾರಣಗಳೇನಿರಬಹುದು ಎಂಬುದನ್ನು ನಮ್ಮ ಓದುಗರು, ಸಮುದಾಯದ ಹಿತ ಚಿಂತಕರು ಗಂಭೀರವಾಗಿ ಚಿಂತಿಸಬೇಕಾಗಿದೆ.
ನಮ್ಮ ವರದಿಗಳ ವಿಚಾರದಲ್ಲಿ ಸಮಸ್ಯೆ ಇದ್ದರೆ ಆ ಕುರಿತು ನಮಗೆ ಮೊದಲು ಎಚ್ಚರಿಕೆ ನೀಡಬೇಕಿತ್ತು. ಪ್ರಜಾಸತ್ತಾತ್ಮಕ ವಿಧಾನದಲ್ಲಿ ಅದನ್ನು ಮಾಡಬೇಕಿತ್ತು. ಆದರೆ ಈ ಬಗ್ಗೆ ನಮ್ಮ ಗಮನಕ್ಕೆ ತಾರದೇ `ಗುಪ್ತವಾಗಿ’ ಕಾರ್ಯನಿರ್ವಹಿಸುವ ಕೆಲ ವ್ಯಕ್ತಿಗಳ ಬಗ್ಗೆ ನಮಗೆ ಬಲವಾದ ಸಂಶಯಗಳಿವೆ. ನಮ್ಮ ಪ್ರಚಾರ ವೈಖರಿಯನ್ನು ಕಂಡು ಮುಂಚಿನಿಂದಲೂ ಅಸೂಯೆಯನ್ನು ಹೊಂದಿರುವ ಕೆಲವು ಮಂದಿ ನಮ್ಮನ್ನು ಹೇಗಾದರೂ ಮಟ್ಟಹಾಕಬೇಕೆಂದು ಈ ಹಿಂದೆ ನಮ್ಮ ಫೇಸ್ ಬುಕ್ ಅಕೌಂಟ್ ಗೆ ರಿಪೋರ್ಟ್ ಮಾಡಿ ಮುಚ್ಚಲು ಯತ್ನಿಸಿ ವಿಫಲವಾಗಿತ್ತು. ಇದೀಗ ಈ ಗುಂಪು ಫೇಸ್ ಬುಕ್ ಗೆ ತಪ್ಪು ಸಂದೇಶ ಕಳಿಸಿ ವೆಬ್ ಸೈಟ್ ನ್ಯೂಸ್ ಲಿಂಕ್ ಹರಡದಂತೆ, ಪೇಜ್ ನಲ್ಲಿ ಯಾವುದೇ ಹರಡದಂತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಫೇಸ್ ಬುಕ್ ಗೆ ತಪ್ಪು ಸಂದೇಶ ನೀಡಿ ನ್ಯೂಸ್ ಫೀಡ್ ನಿಂದ ಬ್ಲಾಕ್ ಮಾಡಿರುವ ಕುರಿತು ಮಾಹಿತಿ ಕೇಳಲಾಗಿದ್ದು ಪ್ರತಿಕ್ರಿಯೆ ನಿರೀಕ್ಷಿಸುತ್ತಿದ್ದೇವೆ. ಕುಲಾಲ್ ವರ್ಲ್ಡ್ ಡಾಟ್ ಕಾಮ್ ನ ಅಭಿಮಾನಿಗಳು/ಹಿತೈಷಿಗಳು ಫೇಸ್ ಬುಕ್ ನ ಈ ನಿರ್ಧಾರದ ವಿರುದ್ಧ ಧ್ವನಿ ಎತ್ತಬೇಕಾಗಿ ಕಳಕಳಿಯ ವಿನಂತಿ.