ಕುಂಬಾರ ಜನಾಂಗದ ಪರಂಪರೆಯ ಬಗ್ಗೆ ಉಪಯುಕ್ತ ಸಮಗ್ರ ಮಾಹಿತಿಯನ್ನು ಸುಲಭದಲ್ಲಿ ಲಭ್ಯವಾಗುವಂತೆ ಮಾಡುವುದು kulalaworld.com ಉದ್ದೇಶ. ಇದರ ವ್ಯಾಪಕತೆ ಹಾಗೂ ಒಪ್ಪವನ್ನು ಹೆಚ್ಚಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ವೇದಿಕೆಯಿಂದ ನಮ್ಮ ಸಮಾಜಕ್ಕೆ ಒಂದಷ್ಟು ಪ್ರಯೋಜನವಾದರೆ ಅದೇ ಸಾರ್ಥಕತೆ. ನಮ್ಮ-ನಿಮ್ಮ ಬಾಂಧವ್ಯದ ಕೊಂಡಿ ಅಂತರಜಾಲದ ಅಕ್ಷರ ಲೋಕದ ಮೂಲಕ ಸದಾ ಹಸನಾಗಿರಲಿ. ತಪ್ಪುಗಳಿದ್ದರೆ ಮನ್ನಿಸಿ. ಈ ನಮ್ಮ ವೆಬ್ಸೈಟ್ ಸಮಗ್ರ ಮಾಹಿತಿಯೊಂದಿಗೆ ಎಲ್ಲರ ಗಮನಸೆಳೆದು ಜನಪ್ರಿಯವಾಗ ಬೇಕಾದರೆ ನೀವು ನಮ್ಮೊಂದಿಗೆ ಕೈಜೋಡಿಸಬೇಕಾದ ಅಗತ್ಯವಂತೂ ಇದ್ದೇ ಇದೆ. ನಿಮ್ಮ ಸುತ್ತಮುತ್ತ ನಡೆಯುವ ಕಾರ್ಯಕ್ರಮ, ನಿಮ್ಮ ಮನೆಯಲ್ಲಿ, ಕುಟುಂಬ, ಬಂಧುಮಿತ್ರರು, ಗೆಳೆಯ, ಗೆಳತಿಯರು ಒಂದಲ್ಲಾ ಒಂದು ರೀತಿಯ ವಿಶಿಷ್ಟ ಸಾಧನೆ ಮಾಡುತ್ತಿದ್ದರೆ (ಕಲೆ, ಸಾಹಿತ್ಯ, ಕೃಷಿ, ಇತರೆ) ಅವರ ವಿವರವನ್ನು ಚಿತ್ರ ಸಹಿತ ಕಳುಹಿಸಿಕೊಡುವ ಮೂಲಕ, ನೀವು ಬರಹಗಾರರಾಗಿದ್ದಲ್ಲಿ, ಅಥವಾ ಬರವಣಿಗೆಯಲ್ಲಿ ಆಸಕ್ತಿಯಿದ್ದರೆ ಕಥೆ, ಕವಿತೆ, ಲೇಖನವನ್ನು, ನಿಮ್ಮ ಸುತ್ತಮುತ್ತ ಇರುವ ಕುಲಾಲ/ಕುಂಬಾರ ಸಮಾಜದ ಮಾಹಿತಿಯನ್ನು ಕೂಡ ನೀಡಬಹುದಾಗಿದೆ. ನೀವು ಕಳುಹಿಸುವ ಬರಹಗಳನ್ನು ಪರಿಶೀಲಿಸಿ ಸೂಕ್ತವಾಗಿದ್ದಲ್ಲಿ ಪ್ರಕಟಣೆ ಮಾಡುವ ಜವಾಬ್ದಾರಿ ನಮ್ಮದಾಗಿದೆ. ವೆಬ್ ಅನ್ನು ನಮ್ಮ ಜನಾಂಗದ ಗೆಳೆಯ-ಗೆಳತಿಯರಿಗೆ ಪರಿಚಯಿಸಿ-ಬೆಳೆಸಿ ಇದು ನಮ್ಮ ವೇದಿಕೆ. ಎಲ್ಲವೂ ಸಾಕಾರಗೊಳ್ಳಬೇಕಾದರೆ ನೀವು ನಮ್ಮೊಂದಿಗೆ ಕೈಜೋಡಿಸಲೇ ಬೇಕು. ಅದನ್ನು ನೀವು ಮಾಡುತ್ತೀರೆಂಬ ವಿಶ್ವಾಸದಲ್ಲಿ ನಾವಿದ್ದೇವೆ.
ಕುಂಬಾರ /ಕುಲಾಲ ಸಮಾಜದ ಪ್ರತಿಬಿಂಬವಾಗಿರುವ `ಕುಲಾಲ ವರ್ಲ್ಡ್ ಡಾಟ್ ಕಾಮ್’ ವೆಬ್ ಸೈಟ್ ರೂಪ ಈಗ ಬದಲಾಗಿದ್ದು, ಹೊಸ ವಿನ್ಯಾಸದೊಂದಿಗೆ ವೆಬ್ಸೈಟ್ ನಿಮ್ಮ ಮುಂದಿದೆ. ಇದು ಮೊಬೈಲ್ ಯುಗ. ಆ ಮೂಲಕ ಹೊಸತನವನ್ನು ಬಯಸುವ ಇಂದಿನ ಯುವ ಸಮೂಹದಿಂದ ಮೊದಲುಗೊಂಡು ಎಲ್ಲಾ ವಯೋಮಾನದ ಅಗತ್ಯತೆಗಳಿಗೆ ತಕ್ಕಂತೆ, ಅನುಕೂಲತೆಗಳಿಗೆ ಅನುಸಾರವಾಗಿ ವೆಬ್ಸೈಟ್ನ ಚಿತ್ರಣವನ್ನು ಮೊಬೈಲ್ ಸ್ನೇಹಿಯಾಗಿ ಬದಲಿಸಲಾಗಿದೆ. ಹೀಗಾಗಿ ಡೆಸ್ಕ್ಟಾಪ್, ಲ್ಯಾಪ್ ಟಾಪ್ ಬಳಸುವ ಸ್ನೇಹಿತರಿಗೆ ಕೊಂಚ ಬದಲಾವಣೆ ಕಂಡೀತು. ಪ್ರಮುಖ ಕಾಲಂನ ಸುದ್ದಿಗಳು, ವಿಶೇಷ ಲೇಖನಗಳು ಎಲ್ಲವೂ ಸಮಗ್ರವಾಗಿ ಒಂದೇ ಪುಟದಲ್ಲಿ ಕಾಣುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ವಿನ್ಯಾಸವಂತೂ ನಿಮಗೆ ಹೊಚ್ಚ ಹೊಸ ಅನುಭವ ನೀಡೋದು ಖಂಡಿತ. ಕುಂಬಾರ ಮಾಧ್ಯಮರಂಗದ ಇತಿಹಾಸದಲ್ಲೇ ಹೊಸ ಅಧ್ಯಾಯ ಬರೆದ ನಮ್ಮ ಅಂತರ್ಜಾಲ ವಾಹಿನಿ `ಕುಲಾಲವರ್ಲ್ಡ್ ಡಾಟ್ ಕಾಮ್’ ಜಾತಿ ಬಾಂಧವರ ಬೆಂಬಲವಿಲ್ಲದೇ ಮುಂದುವರಿಯುವುದು ಅಸಾಧ್ಯ. ಆದ್ದರಿಂದ ನಿಮ್ಮ ಕುಟುಂಬ, ಉದ್ಯಮ, ಸಂಘ-ಸಂಸ್ಥೆ ಅಥವಾ ಉತ್ಪನ್ನದ ಜಾಹೀರಾತು ನೀಡಿ ಪ್ರೋತ್ಸಾಹಿಸಿದರೆ ನಮ್ಮ ಉತ್ಸಾಹ ಇಮ್ಮಡಿಯಾಗುವುದು. ಅತೀ ಕಡಿಮೆ ಮೊತ್ತದಲ್ಲಿ ವಿಶ್ವದಾದ್ಯಂತ ಇರುವ ವಿವಿಧ ಸ್ತರದ ಜನತೆಗೆ ನಿಮ್ಮ ಅಥವಾ ನಿಮ್ಮ ಸಂಘ ಸಂಸ್ಥೆ, ಉತ್ಪನ್ನವನ್ನು ನಮ್ಮ ವೆಬ್ ಸೈಟ್ ಮೂಲಕ ಪರಿಚಯಿಸುವ ಸುವರ್ಣಾವಕಾಶವಿದೆ. ಜಾಹೀರಾತು ನೀಡುವ ಮೂಲಕ ಜನಾಂಗದ ಸೇವೆ ಮಾಡುತ್ತಿರುವ ಮೊಟ್ಟ ಮೊದಲ ಅಂತರ್ಜಾಲ ಪತ್ರಿಕೆಗೆ ನೈತಿಕ ಪ್ರೋತ್ಸಾಹ-ಬೆಂಬಲ ನೀಡಿದ ಹಿರಿಮೆಯೂ ನಿಮ್ಮದಾಗುತ್ತದೆ. ನೀವು ನೀಡುವ ಜಾಹೀರಾತು ನಮ್ಮ ಪ್ರಯತ್ನಕ್ಕೆ ಸಂಜೀವಿನಿಯಾಗುತ್ತದೆ. ಜಾಹೀರಾತು ನೀಡಬಯಸುವವರು ಸಂಪಕಿಸಬೇಕಾದ ಮೊಬೈಲ್ ಸಂಖ್ಯೆ : 0097433037723 ಅಥವಾ 00919148145598 ಇ-ಮೇಲ್ : dineshirvathur@gmail.com. ನಿಮೆಲ್ಲರ ಸಹಕಾರದ ನೀರಿಕ್ಷೆಯಲ್ಲಿ..
ದಿನೇಶ್ ಬಂಗೇರ ಇರ್ವತ್ತೂರು
ಸಂಪಾದಕರು