ಸೇವಾ ಸಂಸ್ಥೆಗಳ ಮಹಾ ಸಂಗಮ ಇವರ ವತಿಯಿಂದ ಕಾವೂರಿನ ಸಪ್ತಗಿರಿ ಸಭಾಭವನದಲ್ಲಿ ನಡೆದ ಸೇವಾ ಸಂಸ್ಥೆಗಳ ಮಹಾ ಸಮ್ಮಿಲನ ಕಾರ್ಯಕ್ರಮದಲ್ಲಿ `ಕುಲಾಲ್ ವರ್ಲ್ಡ್’ ನ ಕಿರು ಅಳಿಲು ಸೇವೆಯನ್ನು ಗುರುತಿಸಿ ಆತ್ಮೀಯತೆಯಿಂದ ಗೌರವಿಸಿದ ಸಂಘಟಕ ಮಿತ್ರರಿಗೆ ಹೃದಯಾಂತರಾಳದ ಕೃತಜ್ಞತೆಗಳು. ನಮ್ಮ ಸೇವೆಯಲ್ಲಿ ನಮಗೆ ಸಹಕಾರ ನೀಡಿ, ಪ್ರೋತ್ಸಾಹಿಸಿ, ಹುರಿದುಂಬಿಸಿ ಬೆನ್ನೆಲುಬಾಗಿ ನಿಂತ ಕುಲಾಲ್ ವರ್ಲ್ಡ್ ನ ಸಮಸ್ತ ಸದಸ್ಯರಿಗೆ ಈ ಗೌರವವನ್ನು ಪ್ರೀತಿಯಿಂದ ಸಮರ್ಪಿಸುತ್ತಿದ್ದೇವೆ.
ಮಂಗಳೂರು(ಮಾ.೧೬, ಕುಲಾಲ್ ವರ್ಲ್ಡ್ ಡಾಟ್ ಕಾಮ್) :ಸೇವಾ ಸಂಸ್ಥೆಗಳ ಮಹಾ ಸಂಗಮ ಇವರ ವತಿಯಿಂದ ಕಾವೂರಿನ ಸಪ್ತಗಿರಿ ಸಭಾಭವನದಲ್ಲಿ ನಡೆದ ಸೇವಾ ಸಂಸ್ಥೆಗಳ ಮಹಾ ಸಮ್ಮಿಲನ ಕಾರ್ಯಕ್ರಮದಲ್ಲಿ `ಕುಲಾಲ್ ವರ್ಲ್ಡ್’ ನ ಸಮಾಜಸೇವೆಯನ್ನು ಗುರುತಿಸಿ ಗೌರವಿಸಲಾಯಿತು. `ಕುಲಾಲ್ ವರ್ಲ್ಡ್’ ನ ಪರವಾಗಿ ಗ್ರೂಪ್ ನ ನಿರ್ವಾಹಕರಾದ ರಂಜಿತ್ ಕುಮಾರ್ ಮೂಡಬಿದ್ರೆ ಅವರು ಗೌರವ ಸ್ವೀಕರಿಸಿದರು.
`ಕುಲಾಲ್ ವರ್ಲ್ಡ್’ ವಾಟ್ಸಾಪ್ ಬಳಗವು ಹಲವು ಬಡ ರೋಗಿಗಳನ್ನು ಗುರುತಿಸಿ ಲಕ್ಷಾಂತರ ರೂ. ಧನ ಸಂಗ್ರಹಿಸಿ ನೀಡಿದೆ. ಸೇವಾ ಸಂಸ್ಥೆಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಇತರ ಹಲವು ಸೇವಾ ಸಂಸ್ಥೆಗಳನ್ನು ಗುರುತಿಸಿ ಸನ್ಮಾನಿಸುವುದರ ಜೊತೆಗೆ ಸೇವಾ ಧನ ವಿತರಣೆಯನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಕಳ ವಿಜೇತ ವಿಶೇಷ ಶಾಲೆಯ ಸಂಸ್ಥಾಪಕಿ ಡಾ. ಕಾಂತಿ ಹರೀಶ್, ಹ್ಯೂಮಾನಿಟಿ ಟ್ರಸ್ಟ್ ನ ರೋಷನ್ ಬೆಳ್ಮಣ್, ಸಾಮಾಜಿಕ ಕಾರ್ಯಕರ್ತ ಸೌರಾಜ್ ಕುಡ್ಲ, ಸಂಘಟಕ ಚಂದ್ರಶೇಖರ್ ಪೂಜಾರಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.