ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಟೈಗರ್ ಫಿಟ್ ಮುವಾಯ್ ಥಾಯ್ ಕ್ಲಬ್ ಇವರ ಆಶ್ರಯದಲ್ಲಿ ಕೇರಳದ ಕೊಚ್ಚಿಯಲ್ಲಿ ನಡೆದ 4ನೇ ದಕ್ಷಿಣ ಭಾರತ ಮುವಾಯ್ ಥಾಯ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ ಮಂಗಳೂರಿನ ಕುಲಾಲ ಸಮಾಜದ ಯುವಕ ಸುಕ್ರೀತ್ ಕೋಡಿಕಲ್ ಅವರು ಪ್ರಥಮ ಸ್ಥಾನ ಪಡೆದು ಚಿನ್ನದ ಗಳಿಸಿದ್ದಾರೆ.
ಜನವರಿ 10ರಿಂದ 12ರವರೆಗೆ ನಡೆದ ಈ ಕೂಟದಲ್ಲಿ ಮುವಾಯ್ ಬಾಕ್ಸಿಂಗ್ 81ರಿಂದ 86 ಕೆಜಿ ಸೀನಿಯರ್ ವಿಭಾಗದಲ್ಲಿ ಭಾಗವಹಿಸಿದ ಸುಕ್ರೀತ್ ಕೋಡಿಕಲ್ ಅವರು ಪದಕ ಪಡೆದರು. ಈ ಸ್ಪರ್ಧೆಯಲ್ಲಿ ದಕ್ಷಿಣ ಭಾರತದ ಹಲವು ಕ್ರೀಡಾಪಟುಗಳು ಭಾಗವಹಿಸಿದ್ದರು. ಸುಕ್ರೀತ್ ಅವರು ಕೋಡಿಕಲ್ ನ ಉಮಾನಾಥ್ ಬಂಗೇರ ಮತ್ತು ಯಶೋಧ ದಂಪತಿಯ ಸುಪುತ್ರರಾಗಿದ್ದು, ಬಿಎಸ್ಸಿ ಪದವೀಧರರಾಗಿದ್ದಾರೆ.
ಮುವಾಯ್ ಥಾಯ್ (Mauythai) ಎನ್ನುವುದು ಒಂದು ಜನಪ್ರಿಯ ಸಮರ ಕಲೆಯಾಗಿದ್ದು ಅದು ನಮ್ಮ ಆತ್ಮರಕ್ಷಣೆಯ ಅಸ್ತ್ರ ಕೂಡ ಹೌದು. ಥಾಯ್ಲೆಂಡ್ ನಲ್ಲಿ ಜನಪ್ರಿಯವಾಗಿರುವ ಮುವಾಯ್ ಥಾಯ್ ಎಂಬ ಸಮರಕಲೆ ಭಾರತ ಸೇರಿದಂತೆ ಇತರ ಕಡೆ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ.