ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಪುರಾಣ ಕಾಲದಲ್ಲಿ ಕುಲಾಲ ಸಮುದಾಯದ ಹಿರಿಯರು ಮಾಡಿದ ಸೇವೆಗೆ ಪ್ರತಿಯಾಗಿ ಇಂದಿಗೂ ತಮ್ಮ ವಾರ್ಷಿಕ ಜಾತ್ರೆಯ ಸಂದರ್ಭ ವಿಶೇಷ ಮರ್ಯಾದೆಯನ್ನು ನೀಡುತ್ತಾ ಬಂದಿರುವ ಕ್ಷೇತ್ರವೊಂದಿದೆ. ಅದುವೇ ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ. ತುಳುನಾಡಿನ ಧಾರ್ಮಿಕ, ಸಾಂಸ್ಕೃತಿಕ ಹಿನ್ನೆಲೆಯುಳ್ಳ ಮಣ್ಣಿನ ಮೂಲ ಆರಾಧನೆಗೆ ವೈದಿಕ ಮೆರುಗನ್ನು ನೀಡಿದ ಈ ದೇವಳದ ಷಷ್ಠಿ ಹಾಗೂ ವಾರ್ಷಿಕ ಮಹೋತ್ಸವದ ದಿನ ಕುಲಾಲ-ಮೂಲ್ಯ ಸಮುದಾಯದ ಗ್ರಾಮಸ್ಥರಿಗೆ ವಿಶೇಷ ಗೌರವವನ್ನು ಇಂದಿಗೂ ನೀಡುತ್ತಾ ಬಂದಿದೆ. ಹಿಂದಿನ ಕಾಲದಲ್ಲಿ ತೋಕೂರು ಆಸುಪಾಸಿನ ಹತ್ತೊಂಬತ್ತು ಗ್ರಾಮಗಳಲ್ಲಿ ಕುಂಬಾರಿಕೆಯನ್ನೇ ನೆಚ್ಚಿಕೊಂಡು ಬದುಕುತ್ತಿದ್ದ ಹಲವಾರು ಕುಲಾಲ ಕುಟುಂಬಗಳು ಇದ್ದವು. ಆದ್ದರಿಂದ ಇಲ್ಲಿಯ ಕುಂಬಾರಿಕೆಗೂ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಅವಿನಾಭಾವ ಸಂಬಂಧವಿದೆ.
ಪ್ರತಿವರ್ಷ ಷಷ್ಠಿಯ ಪರ್ವ ಉತ್ಸವದಂದು ರಾತ್ರಿ ದೇವರ ಬಲಿಸೇವೆ ನಡೆಸುವ ಸೌಭಾಗ್ಯ ನಮ್ಮ ಸಮುದಾಯಕ್ಕೆ ಒದಗಿ ಬಂದಿರುವುದು ನಮ್ಮ ಹಿರಿಯರ ಭಕ್ತಿ, ಸತ್ಯ-ಧರ್ಮಕ್ಕೆ ಸಿಕ್ಕ ಫಲ! ನಮ್ಮ ಸಮುದಾಯಕ್ಕೆ ದೇವರ ಆರಾಧ್ಯ ಸನ್ನಿಧಾನ ಎಂಬುದು ಕೂಡ ದಿಟ. ಇದು ನಮ್ಮ ಸಮುದಾಯಕ್ಕೂ ದೇವಳಕ್ಕೂ ನಿಕಟ ಸಂಬಂಧವನ್ನು ಬಿಂಬಿಸುವಂತಿದೆ.
ಕಳೆದ ಷಷ್ಠಿಯ ಸಂದರ್ಭ ದೇವರ ಬಲಿ ನಡೆಯುತ್ತಿರುವಂಥ ವೇಳೆಯಲ್ಲಿ ಆಡಳಿತ ಮಂಡಳಿಯ ಸದಸ್ಯರೊಬ್ಬರು, ಕುಲಾಲ ಸಮುದಾಯದ ವತಿಯಿಂದ ದೇವರಿಗೆ ಸೇವೆಯ ರೂಪದಲ್ಲಿ ಏನಾದರೂ ಕೊಡುಗೆ ಆಗಬೇಕು ಎಂಬ ವಿನಯಪೂರ್ವಕ ಬೇಡಿಕೆಯನ್ನು ಪರಿಗಣಿಸಿದ ನಮ್ಮ ಸಮುದಾಯದ ಹಿರಿಯರು ದೇವರ ಇಚ್ಛೆ ಎಂಬ ಮಾತನ್ನು ಹೇಳಿದ್ದು, ಅದಕ್ಕೆ ಪೂರಕವಾಗಿ ದೇವರ ಗರ್ಭಗುಡಿಯ ಮೇಲ್ಬಾಗಕ್ಕೆ ತಗಡಿನ ಚಪ್ಪರ ನಿರ್ಮಿಸುವ ಸಂಕಲ್ಪ ಮಾಡಲಾಗಿದೆ. ಈ ಪುಣ್ಯಕಾರ್ಯದಲ್ಲಿ ಊರ ಪರವೂರ ಸಮಸ್ತ ಭಕ್ತ ಜನರ ಸಹಭಾಗಿತ್ವವೂ ಇರಬೇಕೆಂದು ದೈವ ಸಂಕಲ್ಪವಾಗಿದೆ. ಈ ಸೇವೆಗೆ ಅಂದಾಜು ರೂ. 25 ಲಕ್ಷಕ್ಕೂ ಮಿಕ್ಕಿ ಸಂಪನ್ಮೂಲ ಕ್ರೋಡೀಕರಣವಾಗಬೇಕಿದ್ದು. ಇವೆಲ್ಲವನ್ನೂ ನಿಭಾಯಿಸಲು ಭಗವದ್ಭಕ್ತರ ಉದಾರ ದೇಣಿಗೆಯೇ ಶ್ರೀರಕ್ಷೆಯಾಗಿದ್ದು ಸುಬ್ರಹ್ಮಣ್ಯ ದೇವರ ಸೇವೆಗೈಯ್ಯುವ ಅಪೂರ್ವ ಅವಕಾಶಗಳೊಂದಿಗೆ ನಮ್ಮೆಲ್ಲ ಸಜ್ಜನ ಮನಸ್ಸುಗಳು ಒಟ್ಟಾಗಿ, ಒಗ್ಗಟ್ಟಾಗಿ ಈ ಸೇವೆಯಲ್ಲಿ ತನು ಮನ ಧನಗಳೊಂದಿಗೆ ಸಹಕರಿಸಿ, ಶ್ರೀದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಲಾಗಿದೆ.
ದೇವಸ್ಥಾನದ ಈ ಸೇವಾ ಕೈಂಕರ್ಯಕ್ಕಾಗಿ ಕುಲಾಲ ಸಮುದಾಯ ತೋಕೂರು ಎಂಬ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನು ಶ್ರೀ ಬಪ್ಪನಾಡು ಸೌಹಾರ್ದ ಸಹಕಾರಿ ಬ್ಯಾಂಕ್ ಇಲ್ಲಿ ತೆರೆಯಲಾಗಿದೆ. ಆದರೆ ಇದರಲ್ಲಿ Ifsc code ಮತ್ತು SCANER (OR CODE) ಲಭ್ಯವಿಲ್ಲದ ಕಾರಣ, ಆ ಬ್ಯಾಂಕ್ ನ ಖಾತೆಯನ್ನು ಯೂನಿಯನ್ ಬ್ಯಾಂಕಿನಲ್ಲಿ ತೆರೆಯಲಾಗಿದೆ. ಆ ಖಾತೆಯನ್ನು ನಮ್ಮ ಈ ಸೇವಾ ಕೈಂಕರ್ಯಕ್ಕಾಗಿ ಮಾತ್ರ ಕಾಯ್ದಿರಿಸಲಾಗಿದೆ.
Sri Bappanadu Souharda Sahakari Sangha (N)
Union Bank Of India
Current A/c Num: 51010100168 3062
IFSC code: UBIN0901971
Mulky Branch
ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ 9901208611, 9845577719, 9845575979, 9480922412