ಪೆರ್ಡೂರು ಕುಲಾಲ ಸಂಘದ ವತಿಯಿಂದ ಹೆಮ್ಮೆಯ “ಸಂಭ್ರಮ ಗೌರವ ಪುರಸ್ಕಾರ” ವನ್ನು ಮಾಧ್ಯಮ ಹಾಗೂ ಸಾಮಾಜಿಕ ಸೇವೆಗಾಗಿ www.kulalworld.comಗೆ ಕೊಡಮಾಡಿದ್ದಾರೆ. ಹಗಲಿರುಳು ದುಡಿದ ನಮ್ಮ ತಂಡ ಈ ಪ್ರಶಸ್ತಿಗೆ ಅಸಲು ವಾರಸುದಾರರು. ಓದುಗ ಸ್ನೇಹಿತರ, ಪ್ರಜ್ಞಾವಂತರ ಸಲಹೆ ಸಹಕಾರ ಹಾಗೂ ನಿಮ್ಮೆಲ್ಲರ ಪ್ರೀತಿ ಮತ್ತು ಅಭಿಮಾನಕ್ಕೆ ಚಿರ ಋಣಿ. ಚೊಚ್ಚಲ ಪುರಸ್ಕಾರಕ್ಕೆ ಆಯ್ಕೆ ಮಾಡಿದ ಸಂಘದ ಆಡಳಿತ ಮಂಡಳಿಗೆ ಹೃದಯಪೂರ್ವಕ ಕೃತಜ್ಞತೆಗಳು.