ಬೆಳ್ಮಣ್ಣು(ಮೇ.೧೭, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಇತ್ತೀಚಿಗೆ ಶ್ರೀಲಂಕಾದಲ್ಲಿ ನಡೆದ ಅಂತರಾಷ್ಟ್ರೀಯ ಜೂನಿಯರ್ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಬೆಳ್ಮಣ್ಣು ನಾನಿಲ್ತಾರಿನ ಇಬ್ಬರು ವಿದ್ಯಾರ್ಥಿನಿಯರು ತಮ್ಮ ಸಾಧನೆ ಮೆರೆದು ಊರಿನ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿ ಜಿಲ್ಲೆಗೆ ಕೀರ್ತಿ ತರುವ ಸಾಧನೆ ಮಾಡಿದ್ದಾರೆ.

ನಾನಿಲ್ತಾರಿನ ಹರಿಶ್ಚಂದ್ರ ಸಾಲ್ಯಾನ್ ಮತ್ತು ಸುಮಿತ್ರಾ ದಂಪತಿಗಳ ಪುತ್ರಿ ಹರ್ಷಿತಾ ಜೂನಿಯರ್ ಕರಾಟೆ ಕುಮಿಟೆ ಹಾಗೂ ಕಟಾ ವಿಭಾಗದಲ್ಲಿ 1 ಚಿನ್ನದ ಪದಕ ಮತ್ತು 1 ಕಂಚಿನ ಪದಕವನ್ನು ಪಡೆದರೆ, ಇದೇ ಊರಿನ ಶ್ರೀಧರ್ ಮೂಲ್ಯ ಮತ್ತು ಜಯ ದಂಪತಿಗಳ ಸುಪುತ್ರಿ ಸಾನಿಯಾ ಅವರು 2 ಬೆಳ್ಳಿಯ ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಇವರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಮುಂಡ್ಕೂರಿನ ಕರಾಟೆ ಶಿಕ್ಷಕ ಸತೀಶ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.

ಇವರಿಬ್ಬರೂ ಬೆಳ್ಮಣ್ಣಿನ ಲಕ್ಷ್ಮೀ ಜನಾರ್ಧನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರಾಗಿದ್ದು, ಹರ್ಷಿತಾ ಪ್ರಥಮ ಪಿಯುಸಿಯಲ್ಲಿ ಹಾಗೂ ಸಾನಿಯಾ ಏಳನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.