ಕಾರ್ಕಳ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಜಪಾನ್ನ ಟೋಕಿಯೊದಲ್ಲಿ ಇದೇ 15ರಿಂದ 21ರ ವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನ ಸಮ್ಮೇಳನದಲ್ಲಿ ಕಾರ್ಕಳದ ವಿದ್ಯಾರ್ಥಿನಿಯರು ಪಾಲ್ಗೊಳ್ಳಲಿದ್ದು ಇದರಲ್ಲಿ ಪ್ರಸ್ತುತ ಕಾರ್ಕಳ ಭುವನೇಂದ್ರ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ನಿಕಿತಾ ಮೂಲ್ಯ ಸೇರಿದ್ದಾರೆ. ನಿಕಿತಾ ಮೂಲ್ಯ ಅವರು ಬೈರಂಪಳ್ಳಿಯ ಕೃಷ್ಣ ಮೂಲ್ಯ ಮತ್ತು ವನಿತಾ ಮೂಲ್ಯ ದಂಪತಿಯ ಪುತ್ರಿಯಾಗಿದ್ದಾರೆ. ನಿಕಿತಾ ಮೂಲ್ಯ ಅವರ ರೋಪೋ ಮೀಟರ್ ಅನ್ವೇಷಣೆಯು 2024ರ ಸೆಪ್ಟೆಂಬರ್ 21 ರಂದು ದೆಹಲಿಯಲ್ಲಿ ನಡೆದಿದ್ದ ರಾಷ್ಟ್ರಮಟ್ಟದ ಇನ್ಸ್ಪೈರ್ ಸ್ಪರ್ಧೆಯಲ್ಲಿ ಆಯ್ಕೆಯಾಗಿತ್ತು. ಶಿಕ್ಷಕ ಸುರೇಶ್ ಮರಕಾಲ ಅವರು ಮಾರ್ಗದರ್ಶನ ನೀಡಿದ್ದರು.
‘ರೋಪೊ ಮೀಟರ್ ಎಲೆಕ್ಟ್ರಿಕಲ್ ಅಂಗಡಿಗಳಲ್ಲಿ ವಯರ್ ಅಳತೆ ಮಾಡಲು ಸಹಕಾರಿಯಾಗಿದೆ. ಇದು ವಯರ್ ಅನ್ನು ಕರಾರುವಕ್ಕಾಗಿ ಅಳತೆ ಮಾಡುತ್ತದೆ. ಈ ಅನ್ವೇಷಣೆಯು ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಗಮನ ಸೆಳೆದಿತ್ತು. ಮುಂದೆ ವೈದ್ಯೆಯಾಗುವಾಸೆ ಇದೆ’ ಎಂದು ನಿಕಿತಾ ಮೂಲ್ಯ ಹೇಳಿದ್ದಾರೆ.
ಜಪಾನ್ ಅಂತರರಾಷ್ಟ್ರೀಯ ವಿಜ್ಞಾನ ಸಮ್ಮೇಳನಕ್ಕೆ ಕಾರ್ಕಳದ ವಿದ್ಯಾರ್ಥಿನಿ ನಿಕಿತಾ ಮೂಲ್ಯ !
Students corner
1 Min Read