ಮಂಗಳೂರು ತಾಲೂಕು ಪಕ್ಷಿಕೆರೆ ಸಮೀಪದ ಪಂಜ ನಿವಾಸಿಯಾಗಿರುವ ಕಸ್ತೂರಿ ಅವರು ಹುಟ್ಟಿದ್ದು ಫೆಬ್ರವರಿ 26, 1967ರಂದು. ತಂದೆ ಕರಿಯ ಮೂಲ್ಯ. ತಾಯಿ ಮೀನಾ ಮೂಲ್ಯ. ಕಸ್ತೂರಿ ಅವರು ಎಸ್ಎಸ್ಎಲ್ಸಿ ಶಿಕ್ಷಣ ಪಡೆದಿದ್ದಾರೆ. 1993ರಿಂದ ರಾಜಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವರು ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯೆ, 16 ವರ್ಷ ಕೆಮ್ರಾಲ್ ಗ್ರಾ.ಪಂ. ಸದಸ್ಯೆಯಾಗಿ (ಎರಡೂವರೆ ವರ್ಷ ಉಪಾಧ್ಯಕ್ಷೆಯಾಗಿ) ಜಿಲ್ಲಾ ಕೆಡಿಪಿ ಸದಸ್ಯೆಯಾಗಿ, ಟೆಲಿಕಾಂ ಸಲಹಾ ಸಮಿತಿ ಸದಸ್ಯೆಯಾಗಿ, ಮಂಗಳೂರು ಯೋಜನಾ ಪ್ರಾಧಿಕಾರದ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದರು. ಪಂಜ ಕೊಯಿಕುಡೆ ನವಜ್ಯೋತಿ ಯುವತಿ ಮಂಡಲದ ಅಧ್ಯಕ್ಷೆಯಾಗಿ, ಬಪ್ಪನಾಡು ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಸದಸ್ಯೆಯಾಗಿ, ಧರ್ಮಸ್ಥಳ ಸ್ವಸಹಾಯ ಸಂಘ ಪಡುಪಣಂಬೂರು ಒಕ್ಕೂಟದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದಾರೆ.
ಬಿಜೆಪಿಯಲ್ಲಿ ಮೂಡಬಿದಿರೆ ಮಹಿಳಾ ಮೋರ್ಚಾ ಅಧ್ಯಕ್ಷೆ, ಜಿಲ್ಲಾ ಕಾರ್ಯದರ್ಶಿ, ಜಿಲ್ಲಾ ಉಪಾಧ್ಯಕ್ಷೆ ಸೇರಿದಂತೆ ವಿವಿಧ ಪದವಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಮಂಗಳೂರು ಆಕಾಶಾವಾಣಿ ಕಲಾವಿದೆ, ಕವಯಿತ್ರಿ ಕೂಡ ಆಗಿದ್ದಾರೆ. ಪತಿ ಹೇಮಾಚಂದ್ರ ಅವರು ನಿವೃತ್ತ ಬ್ಯಾಂಕ್ ಮ್ಯಾನೇಜರ್.
ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ (ಬಿಜೆಪಿ ಪಕ್ಷದಿಂದ )ಸ್ಪರ್ಧಿಸಿ ಕಟೀಲು ಜಿ.ಪಂ. ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 857 ಮತಗಳ ಅಂತರದಿಂದ ಗೆಲುವು ಸಾಧಿಸಿ ಆಯ್ಕೆಯಾಗಿದ್ದರು. ಇವರು 2016ರ ಏಪ್ರಿಲ್ ತಿಂಗಳಲ್ಲಿ ದ.ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ದ.ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ
PERSONALITIES
1 Min Read