ಬಂಟ್ವಾಳ : ಕರಾವಳಿ ಕುಲಾಲ/ ಕುಂಬಾರ ಯುವವೇದಿಕೆಯ ಬಂಟ್ವಾಳ ಘಟಕ ಹಾಗೂ ಕೇಂದ್ರ ಘಟಕದ ಮನವಿಯನ್ವಯ ಬಂಟ್ವಾಳ ಪುರಸಭೆ ವ್ಯಾಪ್ತಿಯ ಮೆಲ್ಕಾರ್ ವೃತ್ತಕ್ಕೆ ಸ್ವಾತಂತ್ರ್ಯಸೇನಾನಿ ಅಮ್ಮೆಂಬಳ ಬಾಳಪ್ಪ ಹೆಸರಿಡಲು ಬಂಟ್ವಾಳ ಪುರಸಭೆ ತೀರ್ಮಾನಿಸಿದೆ.
ಇತ್ತೀಚೆಗೆ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರಕ್ಕೆ ಸರ್ವಾನುಮತದ ಒಪ್ಪಿಗೆ ಲಭಿಸಿದೆ. ಕುಲಾಲ ಕುಂಬಾರ ಯುವವೇದಿಕೆಕೆ ಹಾಗೂ ಇತರ ಸ್ಥಳೀಯ ನಾಯಕರ ನೇತೃತ್ವದಲ್ಲಿ ಈ ಹಿಂದೆ ಪುರಸಭೆ ಪ್ರಮುಖರಿಗಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ್ ರೈ ಹಾಗೂ ಸಂಸದರಾದ ನಳೀನ್ ಕುಮಾರ ಕಟೀಲ್ ಅವರನ್ನು ಭೇಟಿಯಾಗಿ ಮೇಲ್ಕಾರು ವೃತ್ತಕ್ಕೆ ಬಾಳಪ್ಪನವರ ಹೆಸರಿಡಲು ಲಿಖಿತ ಮನವಿ ಸಲ್ಲಿಸಿದ್ದು, ಈ ಸಂದರ್ಭ ಅವರು ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದರು.


