ಬೆಂಗಳೂರು: ಇಲ್ಲಿನ ಕಬ್ಬನ್ ಪಾರ್ಕ್ ಟೆನಿಸ್ ಕ್ಲಬ್ ನಲ್ಲಿ ಕುಂಭ ವೈದ್ಯರ ವಾರ್ಷಿಕ ಸ್ನೇಹ ಕೂಟವು ಅದ್ಧೂರಿಯಾಗಿ ಇತ್ತೀಚೆಗೆ ನಡೆಯಿತು.
ಪ್ರಥಮ ಸ್ನೇಹಕೂಟದಲ್ಲಿ ಕುಂಬಾರ ಸಮುದಾಯದ ಹಿರಿಯ ವೈದ್ಯಹಾಗು ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯ ಹಿರಿಯ ಎಲುಬು ಹಾಗು ಕೀಲು ತಜ್ಞ ರಾದ ಡಾ. ರಾಮಚಂದ್ರ, ಬೆಂಗಳೂರಿನ ಆಕ್ಸಿಸ್ ಸಮೂಹ ಆಸ್ಪತ್ರೆ ಗಳ ಹಾಗು ಲಕ್ಷ್ಮಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಮಾಲಕರಾದ ಸಾಂಬ ಶಿವ, ಡಾ. ರಾಜಣ್ಣ ಡಾ. ಸಾಯಿ ಪ್ರಸಾದ್, ಮಲ್ಲಿಗೆ ಆಸ್ಪತ್ರೆಯಲ್ಲಿ ಕಾರ್ಡಿಯಾಲೊಜಿ ವಿಭಾಗವನ್ನ ನಡೆಸುತ್ತಿವಿರುವ ಡಾ. ಶ್ರೀನಿವಾಸ್ ವೇಲು, ಹಿರಿಯ ಅರಿವಳಿಕಾ ತಜ್ಞ, ಸಂಘಟಕ ಡಾ. ಕ್ಯಾಪ್ಟನ್ ರಾಜಶೇಖರ್, ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಉಪಾಧ್ಯಕ್ಷ ಖ್ಯಾತ ಮೆಡಿಕೋ ಲೀಗಲ್ ವಿಷಯಗಳ ತಜ್ಞ ಡಾ. ಶಿವ ಕುಮಾರ ಕುಂಬಾರ ,ಆಯುಷ್ ವಿಭಾಗದ ಹಿರಿಯ ಮಹಿಳಾ ವೈದ್ಯರಾದ ಡಾ. ಅಂಬುಜಾಕ್ಷಿ ಸಮುದಾಯದ ಮತ್ತೋರ್ವ ಸಂಘಟಕ, ಅರಿವಳಿಕಾ ತಜ್ಞ ವೈದ್ಯ ಡಾ. ಮಹೇಶ್ ಕೊಳ್ಳೇಗಾಲ, ಹಿರಿಯ ದಂತ ವೈದ್ಯರಾದ ಡಾ. ರೂಪಶ್ರೀ, ಹಿರಿಯ ಮಾರ್ಗದರ್ಶಕರಾದ ತುಮಕೂರಿನ ಶಸ್ತ್ರ ಚಿಕಿತ್ಸ ತಜ್ಞರಾದ ಡಾ. ಅಂಪಣ್ಣ, ಕುಂದಾಪುರದ ಮಂಜುನಾಥ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಕುಂಬಾರ ಸಮುದಾಯದ ಹಲವು ಸಂಘಾ ಸಂಸ್ಥೆಗಳ ಬೆನ್ನೆಲುಬಾಗಿರುವ ಡಾ. ಎಂ ವಿ ಕುಲಾಲ್ ಕುಂದಾಪುರ ,ಹಿರಿಯ ವೈದ್ಯಕೀಯ ತಜ್ಞರಾದ ಪ್ರೊಫ್ಸಾರ್ ಡಾ ಭಕ್ತವತ್ಸಲಂ , ಮುಂತಾದವರ ನೇತೃತ್ವ ದಲ್ಲಿ ನಾಡಿನ ಎಲ್ಲಾ ಜಿಲ್ಲೆ /ತಾಲೂಕುಗಳ ಮೆಡಿಕಲ್ ಡೆಂಟಲ್ ಆಯುಷ್ ಹೋಮಿಯೋಪತಿ ನೋಂದಾಯಿಸಲ್ಪಟ್ಟ ಸುಮಾರು 135 ಕ್ಕೂ ಅಧಿಕ ವೈದ್ಯರುಗಳ ವಾಟ್ಸಾಫ್ ಗುಂಪಿನ ಸುಮಾರು 80 ರಷ್ಟು ವೈದ್ಯರು ಯಾವುದೇ ಆಹ್ವಾನ ಪತ್ರಿಕೆ ಇಲ್ಲದೆ ಕೇವಲ ಸಂದೇಶಗಳ ಮೂಲಕ ಭಾಗವಹಿಸಿ ಚರಿತ್ರೆ ನಿರ್ಮಿಸಿ ಬಿಟ್ಟರು .
ಕರ್ನಾಟಕ ರಾಜ್ಯ ಕುಂಬಾರ ಸಂಘದ ಪದಾಧಿಕಾರಿಗಳು ,ಕರಾವಳಿ ಕುಲಾಲ/ ಕುಂಬಾರ ಯುವ ವೇಧಿಕೆಯ ಬೆಂಗಳೂರು ಘಟಕದ ಸದಾನಂದ ಕುಲಾಲ್ ಹಾಗು ನಾಯಕರು, ಬೆಂಗಳೂರು ಕುಲಾಲ ಸಂಘದ ಎರಡು ಸಂಯುಕ್ತ ಸಂಘಟನೆಗಳ ಭೋಜ ಕುಲಾಲ್ ,ರಾಜ್ಯ ಕುಂಬಾರ ಸರಕಾರೀ ನೌಕರರ ಸಂಘಟನೆಯ ನಾಯಕರುಗಳಾದ ಮುಖ್ಯ ಇಂಜಿನಿಯರ್ ಶ್ರೀನಿವಾಸ್ ಹಾಗು ಬಾಬುರಾವ್ ಕುಂಬಾರ ಹಾಗು ಅವರ ತಂಡ, ಮಲ್ಲೇಶ್ವರದ ಬಿಜೆಪಿ ಶಾಸಕ ಡಾ. ಅಶ್ವಥ್ ನಾರಾಯಣ ಮತ್ತು ತಂಡ, ರಾಜ್ಯ ಸರಕಾರೀ ವೈದ್ಯರ ಕೂಟದ ಪ್ರಧಾನ ಕಾರ್ಯದರ್ಶಿ ಡಾ. ಪ್ರಕಾಶ್ ಹಾಗು ಫೇಸ್ ಬುಕ್ ಮಿತ್ರರು ಗಳು ಬಂದು ಸಂಘಟನೆಗೆ ಶುಭ ಹಾರೈಸಿದರು.
ಸಮಾಜದ ಒಳಿತಿಗಾಗಿ ದುಡಿಯುತ ಮಾಹಿತಿ ಮಾರ್ಗದರ್ಶನ ಮುನ್ನಡೆ ಮನ್ನಣೆ ಗಾಗಿ ದುಡಿಯುವ ಅದಕ್ಕಾಗಿ ವೈದ್ಯರ ಕೂಟ ವನ್ನ ಮತ್ತಷ್ಟು ಗಟ್ಟಿಗೊಳಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು. ಇದೇ ವೇಳೆ 12 ಮಂದಿ ರಾಜ್ಯ ಸಂಘಟಕರನ್ನ ಆಯ್ಕೆ ಮಾಡಲಾಯಿತು.
ಕರ್ನಾಟಕ ಕುಂಭ ವೈದ್ಯರ ಕೂಟದ ಸಂಚಾಲಕ ಪ್ರಮುಖರಲ್ಲಿ ಪ್ರಮುಖರೂ ಕುಂಭ ವೈದ್ಯ ಕೂಟ ವಾಟ್ಸ್ಆಪ್ ಗುಂಪಿನ ಅಡ್ಮಿನ್ , ಕುಂಬಾರ ಸಮುದಾಯದ ಹಿರಿಯ ಮುಖಂಡ ,ಸಂಘಟಕ , ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಯ ಯೋಜನಾ ಆಯೋಗದ ಸ್ಥಾಯಿ ಸಮಿತಿಯ ಸದಸ್ಯ ಹಾಗು ಹಿರಿಯ ಆಸ್ಪತ್ರೆ ಹಾಗು ಆರೋಗ್ಯ ನಿರ್ವಹಣೆ ತಜ್ಞರಾಗಿರುವ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಎಲ್ಲರನ್ನ ಸ್ವಾಗತಿಸಿ ಪ್ರಸ್ತಾವನೆಗೈದರು. ಡಾ ಮಹೇಶ್ ಚಾಮರಾಜ ನಗರ, ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಡಾ. ತಿಮ್ಮರಾಜು ಕಾರ್ಯಕ್ರಮ ನಿರ್ವಹಿಸಲು ಸಹಕರಿಸಿ ವಂದಿಸಿದರು.
ಸ್ನೇಹಕೂಟದಲ್ಲಿ ಹಿರಿಯರ ಹಿತ ನುಡಿಗಳು..
ದೇವಸ್ಥಾನಗಳನ್ನ ಕಟ್ಟುವ ಬದಲು ಶಿಕ್ಷಣ ಸಂಸ್ಥೆ ಗಳನ್ನ ಕಟ್ಟಬೇಕು ದೇವಸ್ಥಾನ ಗಳ ಮೂಲಕ ಬಡವರಿಗೆ ಮಾಡುವ ಸೇವೆಗಳಿಗಿಂತ ಶಿಕ್ಷಣದ ಮೂಲಕ ಬಡವರನ್ನ ಮೇಲಕ್ಕೆ ಎತ್ತಿ ಸಹಕರಿಸಬಹುದು. ರಾಜಕೀಯದಲ್ಲಿ ಕಿಂಗ್ ಆಗಲು ಬಯಸಿ ಹೋರಾಡುವುದಕ್ಕಿಂತ ಕಿಂಗ್ ಮೇಕರ್ ಆಗಿ ಹೋರಾಡಿ ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡಬೇಕು.
-ಡಾ. ಎಂ. ವಿ. ಕುಲಾಲ್ ಕುಂದಾಪುರ
ಹತ್ತು ವರ್ಷಗಳ ಹಿಂದೆ ನಾನು ಈ ಸಂಘಟನೆಯ ಕನಸನ್ನ ಕಂಡು ಡಾ. ಅಣ್ಣಯ್ಯ ಕುಲಾಲ್ ಹಾಗು ಡಾ. ಅಂಬುಜಾಕ್ಷಿ ಯವರಿಗೆ ಹೇಳಿದ್ದೆ. ಆಗ ಅದು ಸಾಕಾರ ಆಗಿಲ್ಲ ಆದರೆ ಇಂದು ಡಾ ಅಣ್ಣಯ್ಯ ಕುಲಾಲ್ ಹಾಗು ಅವರ ತಂಡ ನನ್ನ ಕನಸನ್ನ ನನಸುಗೊಳಿಸಿದೆ ಅವರಿಗೆ ನಾನು ಆಭಾರಿ. ಸಂಘಟನೆ ಸಮಾಜಮುಖೀಯಾಗಲಿ..
–ಡಾ. ಅಂಪಣ್ಣ, ತುಮಕೂರು
ಸಣ್ಣ ಸಣ್ಣ ಶಿಕ್ಷಣ ಸಂಸ್ಥೆಗಳನ್ನ ಕಟ್ಟಿ ನಾವು ಬೆಳೆಯಬೇಕು.
-ಡಾ. ಭಕ್ತ ವತ್ಸಲಂ
