ಮುಂಬಯಿ : ಕುಂದಾಪುರದಿಂದ ಮುಂಬಯಿಗೆ ಮಗನ ಮನೆಗೆ ತೆರಳಿದ ವ್ಯಕ್ತಿಯೊಬ್ಬರು ಕಾಣೆಯಾದ ಬಗ್ಗೆ ವರದಿಯಾಗಿದೆ. ಕುಂದಾಪುರದ ಪೇತ್ರಿ ನಿವಾಸಿ ಶೀನ ಕುಲಾಲ್ (೫೮) ಕಾಣೆಯಾದವರು.
ಜುಲೈ ೨ರಂದು ಕುಂದಾಪುರದ ಪೇತ್ರಿಯಿಂದ ಮುಂಬಯಿಯಲ್ಲಿರುವ ತಮ್ಮ ಮಗ, ಸಯನ್ ಕೋಲಿವಾಡದ ಮಹಾಲಕ್ಷ್ಮೀ ಜ್ಯೂಸ್ ಸೆಂಟರಿನ ಸಂತೋಷ ಕುಲಾಲ್ ಅವರ ಮನೆಗೆಂದು ಆಗಮಿಸಿದ್ದರು . ಆಕಸ್ಮಾತ್ ದಾರಿ ತಪ್ಪಿ ಹೋದ ಇವರು ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಕನ್ನಡ ಭಾಷೆ ಮಾತ್ರ ಗೊತ್ತಿರುವ ಇವರು, ಕಾಣೆಯಾದ ಸಂದರ್ಭ ಬಿಳಿ ಪಂಚೆ ಮತ್ತು ಬಿಳಿ ಅಂಗಿ ಧರಿಸಿದ್ದರು. ಇವರನ್ನು ಯಾರಾದರೂ ಕಂಡಲ್ಲಿ ಕೋಲಿವಾಡ ಪೊಲೀಸ್ ಠಾಣೆ ಅಥವಾ ಮೊಬೈಲ್ ಸಂಖ್ಯೆ : 9220824244 — 8879808284 ಗೆ ಮಾಹಿತಿ ನೀಡಲು ಕುಟುಂಬಸ್ಥರು ವಿನಂತಿಸಿದ್ದಾರೆ.
ಮುಂಬಯಿಗೆ ಹೋದ ಕುಂದಾಪುರ ಶೀನ ಕುಲಾಲ್ ಕಾಣೆ : ಹುಡುಕಿಕೊಡಲು ಮನವಿ
Special Reports
1 Min Read
