ಮಂಗಳೂರು : ತೀರಾ ಬಡತನದಲ್ಲಿರುವ ಬೋಳಿಯಾರು ಗ್ರಾಮದ ಸಂಕೇಸ ಎಂಬಲ್ಲಿಯ ನಿವಾಸಿ ಕೃಷ್ಣಪ್ಪ ಮೂಲ್ಯ ಅವರ ಕುಟುಂಬಕ್ಕೆ ಮನೆ ನಿರ್ಮಿಸಲು ಸಜೀಪನಡು ಮೆರ್ಸಲಚ್ಚಿಲ್ ಶ್ರೀ ಶಿವಾಜಿ ಬಳಗ ನೆರವಾಗುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬೋಳಿಯಾರಿನಲ್ಲಿ ಸುಮಾರು 25 ವರ್ಷದಿಂದ ವಾಸವಿರುವ ದಿವಂಗತ ರಾಮ ಮೂಲ್ಯ ಎಂಬವರ ಅವರ ಮಗ ಕೃಷ್ಣಪ್ಪ ಮೂಲ್ಯ ಕುಟುಂಬ ವಿದ್ಯುತ್ ಸಂಪರ್ಕ, ಶೌಚಾಲಯ ಇತ್ಯಾದಿಗಳು ಯಾವುದೂ ಇಲ್ಲದೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿತ್ತು. ಕಡು ಬಡತನದಲ್ಲಿರುವ ಈ ಕುಟುಂಬದಲ್ಲಿ ಐವರು ಸದಸ್ಯರು. ಈ ಪೈಕಿ 4 ಹೆಣ್ಣು ಮಕ್ಕಲಾಗಿದ್ದು ಇವರೆಲ್ಲರೂ ಅವಿವಾಹಿತರಾಗಿದ್ದು, ಕೃಷ್ಣಪ್ಪ ಮೂಲ್ಯರೇ ಹಿರಿಯರು. ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿರುವ ಇವರಿಗೆ ವಾಸ್ತವ್ಯಕ್ಕೆ ಮನೆ ನಿರ್ಮಿಸಲು ಸ್ವಂತ ಜಾಗ ಇಲ್ಲ. ಸಂಬಂಧಿಕರ ಜಾಗದಲ್ಲಿ ಮಣ್ಣಿನ ಗೋಡೆಯಿಂದ ನಿರ್ಮಿಸಿದ ಚಿಕ್ಕ ಮನೆಯಲ್ಲಿ ಮಾಸ್ತವ್ಯವಿದ್ದರು. ಇವರ ಸ್ಥಿತಿಯನ್ನು ಕಂಡ ಮೆರ್ಸಲಚ್ಚಿಲ್
ಶ್ರೀ ಶಿವಾಜಿ ಬಳಗಡಾ ಸದಸ್ಯರು ಕುಟುಂಬಕ್ಕೆ ಅಗತ್ಯವಿರುವ ಸ್ನಾನಗೃಹ ಹಾಗೂ ಶೌಚಾಲಯವನ್ನು ಸುಮಾರು 25,000 ರೂ ವೆಚ್ಚದಲ್ಲಿ ನಿರ್ಮಿಸಿ, ರೋಟರಿ ಕ್ಲಬ್ ಸಹಕಾರದಿಂದ ಮನೆಗೆ ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡಿ, ಸಮಾಜದ ಹಿರಿಯರಾದ ದೇಜಪ್ಪ ಕುಲಾಲ್ ಮೂಲಕ ಹಸ್ತಾಂತರಿಸಲಾಯಿತು. ಮುಡಿಪುವಿನ ದೀಕ್ಷಿತ್ ಶೆಟ್ಟಿ ಮತ್ತು ಅವರ ಸ್ನೇಹಿತರ ಬಳಗ ಈ ಕಾರ್ಯಕ್ಕೆ ಹೆಚ್ಚಿನ ಮುತುವರ್ಜಿ ನಡೆಸಿದ್ದರು.
ಹಸ್ತಾಂತರ ಸಂದರ್ಭ ತಾಲೂಕು ಪಂಚಾಯತ್ ಸದಸ್ಯರಾದ ನವೀನ್ ಪೂಜಾರಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಸಂತೋಷ್ ಕುಮಾರ್ ರೈ
ರಾಷ್ಟ್ರೀಯ ಸ್ವಯಂ ಸೇವಕ ಸಂಘ ವಿಭಾಗ ಸ್ವಸಹಾಯ ಸಂಘದ ಪ್ರಮುಖ್ ಅರುಣ್ ಕುಮಾರ್ , ಬಂಟ್ವಾಳ ಮಾನವ ಹಕ್ಕು ಹಿತರಕ್ಷಣಾ ವೇದಿಕೆ ಮತ್ತು ಬಂಟ್ವಾಳ ತಾಲೂಕು ಹಸಿರು ಸೇನೆ ರೈತರ ಸಂಘ ಶರತ್ ಕುಮಾರ್ , ಶ್ರೀ ಶಿವಾಜಿ ಬಳಗದ ಅಧ್ಯಕ್ಷ ಸತೀಶ್ ಶಿವಾಜಿ ನಗರ, ಸಂಚಾಲಕ ಪಾಲಾಕ್ಷ ಎಮ್, ಕಾರ್ಯದರ್ಶಿ ಹರೀಶ್ ಕುಲಾಲ್ ಮತ್ತು ಸರ್ವಸದಸ್ಯರು ಮತ್ತು ಸ್ನೇಹಿತರು ಹಾಜರಿದ್ದರು.
ಬೋಳಿಯಾರಿನ ಬಡ ಕುಟುಂಬಕ್ಕೆ ಮನೆ ನಿರ್ಮಿಸಲು ಸಜೀಪನಡು ಶ್ರೀ ಶಿವಾಜಿ ಬಳಗದಿಂದ ನೆರವು
Special Reports
1 Min Read





