ಬಂಗಾರುಮಕ್ಕಿ ಕುಂಭಮೇಳದಲ್ಲಿ ಸಂಸ್ಕೃತಿ ಅನಾವರಣ
ಬಂಗಾರಮಕ್ಕಿ : ಕುಂಬಾರರು ರಿಕ್ತರಲ್ಲ ಶಕ್ತರು. ನಮ್ಮ ಭಾರತೀಯ ಸಂಸ್ಕತಿ ವಿಕಸನದ ಮೂಲಜರು. ಅವರ ಸ್ಥಾನ ಬ್ರಹ್ಮನದು. ಈ ಬ್ರಹ್ಮಾಂಡದ ಸೃಷ್ಠಿಕರ್ತ ಬ್ರಹ್ಮನಂತೆ ಅವರು ನಾಗರಿಕತೆಯ ಮೂಲವಾದ ಕುಂಭದ ಸೃಷ್ಠಿಕರ್ತರು. ಕುಂಭ ಖಾಲಿಯಿರುವಾಗ ಬೆಲೆಯಿಲ್ಲ, ಪೂರ್ಣ ಕುಂಭವಾದಾಗ ಬೆಲೆ. ಇಂತಹ ಗೌರವದ ಸ್ಥಾನ ಕುಂಬರರಿಗೆ ಸಿಗಬೆಕಾಗಿದೆ, ಇದಕ್ಕಾಗಿ ಇಲ್ಲಿ ವಿಶ್ವ ಕುಂಬಾರರ ಸಮ್ಮೇಳನ ಸೇರಿದಂತೆ ಎಲ್ಲಾ ರೀತಿಯ ನೆರವಿಯಲು ಕ್ಷೇತ್ರ ಸಿದ್ದವಿದೆಯೆಂದು ಶ್ರೀ ಬಂಗಾರಮಕ್ಕಿ ಕ್ಷೇತ್ರದ ಧರ್ಮಾದಿಕಾರಿ ಶ್ರೀ ಮಾರುತಿ ಗುರೂಜಿ ಹೇಳಿದ್ದಾರೆ.
ಅವರು ಶ್ರೀ ಕ್ಷೇತ್ರ ಬಂಗಾರಮಕ್ಕಿ ಸಿಲೆಕ್ಟ್ ಫೌಂಡೇಶನ್, ಸಂಸ್ಕøತಿ ಕುಂಭ ಮಲೆನಾಡ ಉತ್ಸವ 2016 ಹಾಗೂ ಕರ್ನಾಟಕ ರಾಜ್ಯ ಮಹಾ ಸಂಘ ಬೆಂಗಳೂರು, ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಮಂಗಳೂರು, ಉ.ಕ. ಗುನಗ ಸಮಾಜ ಇವರ ಸಹಯೋಗದಲ್ಲಿ ಭಾನುವಾರ ನಡೆದ ಸಮ್ಮೇಳನದಲ್ಲಿ ಆಶೀರ್ವಚನ ನೀಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕುಂಬಾರರ ಮಹಾ ಸಂಘದ ರಾಜ್ಯಾಧ್ಯಕ್ಷ ಶಿವಕುಮಾರ ಚೌಡಶೆಟ್ಟಿ ಮಾತನಾಡಿ, ಭಾರತೀಯ ಕಾಲಮಾನದಲ್ಲಿ ಬರುವ ಶಕಪುರುಷ ಶಾಲಿವಾಹನ ಹಾಗೂ ಸರ್ವಜ್ಞನಂತಹ ಮಹಾಮೇಧಾವಿಗಳ ಪರಂಪರೆಯವರು ನಾವು. ಇಂದು ಕುಂಬಾರರ ಪರಂಪರೆ ನಶಿಸುತಿದ್ದು ರಾಜ್ಯದಲ್ಲಿ ಶೇ. 1-2ರಷ್ಟು ಮಾತ್ರ ಕುಂಬಾರಿಕೆಯಲ್ಲಿ ತೊಡಗಿದ್ದು, ಕುಂಬಾರರಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಅಗತ್ಯ ಇದೆ. ಯಡಿಯೂರಪ್ಪನವರ ಸರ್ಕಾರ ಇದ್ದಾಗ ಕುಂಬಾರರ ಅಭಿವೃದ್ದಿ ಮಂಡಳಿಗೆ ನೆರವು ನೀಡಿದ್ದರು. ಈಗ ರಾಷ್ಟ್ರೀಯ ಕುಂಬಾರರ ಅಭಿವೃದ್ದಿ ಮಂಡಳಿ ರಚಿಸುವ ಅಗತ್ಯವಿದ್ದು ಈ ನಿಟ್ಟಿನಲ್ಲಿ ಕುಂಬಾರರ ವಿಶ್ವಸಮ್ಮೇಳನ ನಡೆಸಲು ಯೋಜಿಸಲಾಗುತ್ತಿದೆ. ಇದಕ್ಕೆ ಇಲ್ಲಿ ಗುರೂಜಿಯವರು ಸರ್ವರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿರುವುದು ನಮಗೆ ಭೀಮ ಬಲ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮುಖ್ಯ ಅತಿಥಿ ರಾಜ್ಯ ಕಾರ್ಯಾಧ್ಯಕ್ಷ ಡಾ|| ಅಣ್ಣಯ್ಯ ಕುಲಾಲ್ ಮಾತನಾಡಿ ನಾಗರಿಕತೆ ಬೆಳೆಸುವಲ್ಲಿ ಮಹತ್ತರ ಕೊಡುಗೆಯಿತ್ತ ಸಮುದಾಯ ಕುಂಬಾರರದು. ಕುಂಭದಿಂದಲೆ ಎಲ್ಲ. ಎಲ್ಲಾ ದೇವತಾ ಕಾರ್ಯದಲ್ಲಿ ಕುಂಬಾರರಿಗೆ ಮನ್ನಣೆ. ವಿಶ್ವ ಭ್ರಾರ್ತೃತ್ವಕ್ಕೆ ಕುಂಬಾರರ ಕೊಡುಗೆ ಮಹತ್ವದ್ದು. ಜಾತಿ ಒಡೆಯುವುದಕ್ಕೆ ಇರುವುದಲ್ಲ, ಜೋಡಿಸುವುದಕ್ಕೆ. ಶ್ರೇಷ್ಟ ಹಿಂದೂ ಸಂಸ್ಕತಿ ಎಲ್ಲವನ್ನು ಸಮನ್ವಯಗೊಳಿಸುವ ಮಹಾನ ಸಂಸ್ಕøತಿ. ಕುಂಬಾರರು ಪಂಚಭೂತವನ್ನು ಆದರಿಸಿ ಕಸುಬನ್ನು ಬೆಳೆಸಿದವರು. ಇಂತಹ ಕುಂಬಾರರಿಗೆ ಇಲ್ಲಿ ವೇದಿಕೆ ಒದಗಿಸಿ ಗೌರವ ನೀಡಿರುವುದು ಅನನ್ಯ ಎಂದರು.
ಈ ಸಂದರ್ಭ ಹಲವು ನಿರ್ಣಯಗಳನ್ನು ಕೈಗೊಂಡು ಸರ್ಕಾರದ ಗಮನ ಸೆಳೆಯಲು ತೀರ್ಮಾನಿಸಲಾಯಿತು. ಈಸಂದರ್ಭ ಡಾ|| ಅಣ್ಣಯ್ಯ ಕುಲಾಲ್, ಕುಮಟದ ಅರ್ಚಕ ಗಣಪಯ್ಯ ತಿಮ್ಮಪ್ಪ ಗುನಗ, ಎರಡೂ ಕಣ್ಣುಗಳನ್ನು ಕಳೆದುಕೊಂಡರೂ ಕುಂಬಾರಿಕೆಯನ್ನು ಮುಂದುವರೆಸಿರುವ ರಾಮಚಂದ್ರ ಗುನಗ, ಚಿತ್ರ ನಿರ್ದೇಶಕ ವೆಂಕಟೇಶ, ಚಿತ್ರ ನಟ ವಿದ್ಯಾಭರಣ ಅವರನ್ನು ಗುರೂಜಿಯವರು ಸನ್ಮಾನಿಸಿದರು.
ಹಿಂದೂಗಳ ಕಾಲಮಾನದ ಲೆಕ್ಕಾಚಾರದಲ್ಲಿ ಬರುವ ಶಕಪುರುಷ ಶಾಲಿವಾಹನ ಸರ್ವಜ್ಞ ಕುಂಬಾರರ ಸಮುದಾಯಕ್ಕೆ ಸೇರಿವರೆಂಬುದು ಹೆಮ್ಮೆಯ ವಿಷಯ.
ಹಿರಿಯರಾದ ದತ್ತಾತ್ರೇಯ ಗುನಗಾ ಉದ್ಘಾಟಿಸಿದರು. ಗಣಪತಿ ಕೃಷ್ಣ ಗುನಗ, ಅರುಣ ಕೃಷ್ಣ ಗುನಗ ಉಪಸ್ಥಿತರಿದ್ದರು. ಜಯರಾಮ ಗುನಗ ಸ್ವಾಗತಿಸಿದರು, ತುಳಸಿದಾಸ ಸುಬ್ರಾಯ ಗುನಗ ವಂದಿಸಿದರು.





