ಕಾರ್ಕಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಆಗಿ ಕುಲಾಲ ಸಮಾಜದ ವಸಂತ್ ಕುಮಾರ್ ರನ್ನು ಸಂಘದ ರಾಜ್ಯ ಅಧ್ಯಕ್ಷ ಜಿ ಎಂ ರಾಜಶೇಖರ್ ಆಯ್ಕೆ ಮಾಡಿದ್ದಾರೆ.
ಪತ್ರಿಕಾ ರಂಗದಲ್ಲಿ ಸುಮಾರು 31 ವರ್ಷಗಳ ಸುದೀರ್ಘ ಅನುಭವ ಇರುವ ಇವರು ಕಾರ್ಕಳ ಕೇಂದ್ರೀಕೃತ ವಾಗಿಸಿ 6 ತಾಲೂಕುಗಳಲ್ಲಿ ಪತ್ರಿಕೆ, ವೆಬ್ಸೈಟ್, ನ್ಯೂಸ್ ಚಾನೆಲ್, ಲೈವ್ ಹೀಗೆ ಪತ್ರಿಕಾ ಸೇವೆ ಮಾಡುತ್ತಿದ್ದಾರೆ. ಕಳೆದ ತಿಂಗಳಲ್ಲಿ ಅವರಿಗೆ ರಾಜ್ಯ ಪತ್ರಕರ್ತರ ಸಂಘದಿಂದ ಡಿ ವಿ ಜಿ ಪ್ರಶಸ್ತಿ ನೀಡಲಾಗಿತ್ತು.
ವಸಂತ್ ಕುಮಾರ್ ಪರಿಚಯ
ಹುಟ್ಟೂರು : ಬೆಳ್ತಂಗಡಿ. ವಾಸ್ತವ್ಯ: ಕಾರ್ಕಳದ ಮಿಯ್ಯಾರು
ತಂದೆ : ಬಾಬು ಮೂಲ್ಯ, ತಾಯಿ : ಕಮಲ ಮೂಲ್ಯ
ಹುಟ್ಟಿದ ದಿನಾಂಕ : 25.4.1974
ಪತ್ರಿಕಾ ರಂಗ ಆರಂಭ : ಬೆಳ್ತಂಗಡಿಯ ಸುದ್ದಿ ಬಿಡುಗಡೆಯ ಪತ್ರಿಕಾ ವಿತರಕ ಹಾಗೂ ವರದಿಗಾರನಾಗಿ 1994ರಿಂದ
ಬಿಂಬ ಪ್ರಕಾಶನ: 1996 ನೇ ಸಾಲಿನಲ್ಲಿ ಬಿಂಬ ಪ್ರಕಾಶನದ ಮೂಲಕ ಪಾಲುದಾರಿಕೆಯಲ್ಲಿ ಕಾರ್ಕಳದಲ್ಲಿ ಪತ್ರಿಕೆ ಆರಂಭ.
ಮಾಧ್ಯಮ ಬಿಂಬ ಪತ್ರಿಕೆ 2018ರಿಂದ ಕಾರ್ಕಳ ದಲ್ಲಿ ಮಾಧ್ಯಮ ಬಿಂಬ ಪತ್ರಿಕೆ ತನ್ನ ಮಾಲಕತ್ವದಲ್ಲಿ ಪ್ರಾರಂಭ.
ಸ್ವಯಂ ಟೈಮ್ಸ್
2020 ನೇ ಸಾಲಿನಲ್ಲಿ ಕಾರ್ಕಳ ಕೇಂದ್ರೀಕೃತವಾಗಿಸಿ ಸ್ವಯಂ ಟೈಮ್ಸ್ ವಾರ್ತಾ ವಾಹಿನಿ, ಸ್ವಯಂ ಟೈಮ್ಸ್ ಲೈವ್ ಆರಂಭ.
ಮಲ್ನಾಡ್ ಶಾಡೋ ಡಿಜಿಟಲ್
2023 ನೇ ಸಾಲಿನಿಂದ ಸಕಲೇಶಪುರ, ಆಲೂರು, ಕಟ್ಟಾಯದಲ್ಲಿ ಮಲ್ನಾಡ್ ಶಾಡೋ ಡಿಜಿಟಲ್ ಮಾಧ್ಯಮ ಆರಂಭ
ಅಧ್ಯಯನ
2002ನೇ ಸಾಲಿನಿಂದ 2012ನೇ ಸಾಲಿನವರೆಗೆ ಪಶ್ಚಿಮ ಘಟ್ಟದಲ್ಲಿನ ನಕ್ಸಲ್ ಸಮಸ್ಯೆಯ ನಿರಂತರ ವರದಿ. ನಕ್ಸಲ್ ಶರಣಾಗತಿ ಪ್ರಕ್ರಿಯೆಯಲ್ಲಿ ಪ್ರಯತ್ನ.
ಕುದುರೆಮುಖದಲ್ಲಿ ಹುಲಿ ಯೋಜನೆಯ ಸಂಪೂರ್ಣ ಮಾಹಿತಿ, ಕಸ್ತೂರಿ ರಂಗನ್ ವರದಿ ಬಗ್ಗೆ ನಿರಂತರ ವರದಿ.
ಮಲೆನಾಡಿನ ಆನೆ ಸಮಸ್ಯೆ ಬಗ್ಗೆ ಸಂಪೂರ್ಣ ವಿಚಾರ ವಿಮರ್ಶೆ ಹಾಗೂ ವರದಿ.
ಕೊಲ್ಲೂರು ಕೊಡಚಾದ್ರಿ ಉಳಿಸಿ ಹೋರಾಟದಲ್ಲಿ ಪಾಲ್ಗೊಂಡು ಅಲ್ಲಿನ ವಿಚಾರ ವಿಮರ್ಶೆ.
ಇನ್ನೂ ಹಲವಾರು ವಿಚಾರಗಳ ಬಗ್ಗೆ ನಿರಂತರ ಅಧ್ಯಯನ, ವರದಿಗಾರಿಕೆ.
ಪ್ರಶಸ್ತಿಗಳು
ಕೇರಳ, ಕರ್ನಾಟಕ ಸಹಭಾಗಿತ್ವದ “ಕರಾವಳಿ ಸಂಸ್ಕೃತಿ ಪ್ರತಿಷ್ಟಾನ ಪ್ರಶಸ್ತಿ”
ಕವಿ ಸಿದ್ದಯ್ಯ ಪುರಾಣಿಕ ಸ್ಮಾರಕ ಪ್ರಶಸ್ತಿ
ಮಂಗಳೂರು ಜಿಲ್ಲಾ ಸಾಧಕ ಪುರಸ್ಕಾರ
ಸಕಲೇಶಪುರ ತಾಲೂಕು ಆಡಳಿತದಿಂದ “ಕನ್ನಡ ರಾಜ್ಯೋತ್ಸವದ ಪ್ರಶಸ್ತಿ”
ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದಿಂದ ಕವಿ ಡಿ ವಿ ಜಿ ಪ್ರಶಸ್ತಿ
ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ
ಸಮಾಜ ಸೇವೆ
ಆಶ್ರಮದ ಮಕ್ಕಳ ಉಟೋಪಚಾರಕ್ಕೆ ಸಹಕಾರ, ಕಂಬಳ ಕ್ಷೇತ್ರದಲ್ಲಿ ಸಹಕಾರ, ಅನಾರೋಗ್ಯ ಪೀಡಿತರಿಗೆ ಲಕ್ಷಾಂತರ ಮೊತ್ತ ದಾನಿಗಳ ಸಹಕಾರದಿಂದ ನೀಡುವಿಕೆ, ಶಿಕ್ಷಣಕ್ಕಾಗಿ ನೂರಾರು ವಿದ್ಯಾರ್ಥಿಗಳಿಗೆ ಸಹಕಾರ,
ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗದಲ್ಲಿ ಸಕ್ರಿಯ
ಕರ್ನಾಟಕ ರಾಜ್ಯ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ
ಪತ್ರಿಕಾ ಅನುಭವ
30 ವರ್ಷ ಪತ್ರಿಕೆ ಮುನ್ನಡೆಸಿದ ಅನುಭವ. 3 ವರ್ಷ ಪತ್ರಿಕೆಯಲ್ಲಿ ಪಾರ್ಟ್ ಟೈಮ್ ಮಾಡಿ ಅನುಭವ.
ಪತ್ನಿ : ರೇಖಾ. ಕನ್ನಡ ಉಪನ್ಯಾಸಕರು
ಪುತ್ರರು : ವೈಭವ್. ವಿ. ಆರ್. 10 ನೇ ತರಗತಿ
ಶ್ರದ್ದಾನ್ ಸಾಯಿ ಕುಲಾಲ್ 4 ನೇ ತರಗತಿ.
ಕಾರ್ಯ ವ್ಯಾಪ್ತಿ
ಕಾರ್ಕಳ, ಮೂಡಬಿದ್ರಿ, ಹೆಬ್ರಿ
ಸಕಲೇಶಪುರ, ಆಲೂರು, ಕಟ್ಟಾಯ