ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಮಂಗಳಾದೇವಿಯಲ್ಲಿ ನ. 23ರಂದು ನಡೆಯಲಿರುವ ನೂತನವಾಗಿ ನಿರ್ಮಾಣಗೊಂಡ `ಕುಲಾಲ ಭವನ’ ಇದರ ಲೋಕಾರ್ಪಣೆ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಸಂತಾಕ್ರೂಸ್ ಪೂರ್ವ ಪ್ರಭಾತ್ ಕಾಲನಿಯ ಪೇಜಾವರ ಮಠದಲ್ಲಿ ಕುಲಾಲ ಸಂಘ ಮುಂಬಯಿ ಅಧ್ಯಕ್ಷರಘು ಮೂಲ್ಯ ಪಾದಬೆಟ್ಟು ಅಧ್ಯಕ್ಷತೆಯಲ್ಲಿ ನಡೆಯಿತು.
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಇಸ್ಸಾರ್ಫೈನಾನ್ಸಿಯಲ್ ಪ್ರೈವೇಟ್ ಲಿಮಿಟೆಡ್ ನ ಸಿ.ಎಂ.ಡಿ. ಹಾಗೂ ಬಂಟರ ಸಂಘ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್.ಕೆ. ಶೆಟ್ಟಿ ಮಾತನಾಡಿ, ಸಂಘದ ಮುಂದಿನ ಯೋಜನೆಯು ಸಮಾಜದ ಮಕ್ಕಳನ್ನು ಉತ್ತಮ ಶಿಕ್ಷಣದ ಮೂಲಕ ದೇಶದ ಉತ್ತಮ ನಾಗರಿಕರನ್ನಾಗಿ ಮಾಡಲು ಸಂಘದ್ದೇ ಆದ ಶಿಕ್ಷಣ ಸಂಸ್ಥೆ ಸ್ಥಾಪನೆಯಾಗಲಿ. ಭವನ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಲಿ ಎಂದು ಶುಭ ಹಾರೈಸಿದರು. ಸಂತಾಕ್ರೂಸ್ ಮಂತ್ರದೇವತೆ ಚಾರಿಟೆಬಲ್ ಟ್ರಸ್ಟ್ ನ ಆಡಳಿತ ಮೊಕ್ತಸರ ವಾಸುದೇವ ಕೆ. ಬಂಜನ್ ಶುಭಹಾರೈಸಿ, ಕುಲಾಲ ಭವನ ಮಂಗಳೂರು ನಮ್ಮ ಕಾಲದಲ್ಲಿ ಲೋಕಾರ್ಪಣೆಗೊಳ್ಳುತಿರುವುದು ನಮ್ಮ ಸೌಭಾಗ್ಯ. ಭವನ ಭಗವಂತನ ವನವಾಗಿದ್ದು ಬೃಂದಾವನವಾಗಲಿ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ, ಕಟ್ಟಡದ ಸಮಿತಿಯ ಕಾರ್ಯಧ್ಯಕ್ಷ ಹಾಗೂ ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್, ಕಟ್ಟಡದ ಸಮಿತಿಯ ಉಪ ಕಾರ್ಯಧ್ಯಕ್ಷ ಸುನಿಲ್ ಆರ್. ಸಾಲ್ಯಾನ್, ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತ ಡಿ. ಬಂಜನ್ ಮಾತನಾಡಿದರು.
ಜಗದೀಶ್ ಆರ್ ಬಂಜನ್ , ಅಮರನಾಥ್, ಡಿ ಐ ಮೂಲ್ಯ, ಕರುಣಾಕರ್ ಬಿ. ಸಾಲ್ಯಾನ್, ಆನಂದ್ ಕೆ. ಕುಲಾಲ್, ಲಕ್ಷ್ಮಣ್ ಸಿ. ಮೂಲ್ಯ, ಸದಾನಂದ ಎಸ್ ಕುಲಾಲ್, ವಿಶ್ವನಾಥ್ ಬಂಗೇರ, ಉದಯ ಅತ್ತಾವರ್, ಮೋಹನ್ ಬಂಜನ್, ಆನಂದ ಬಿ ಮೂಲ್ಯ, ಬಿ. ದಿನೇಶ್ ಕುಲಾಲ್, ಜಯ್ ರಾಜ್ ಪಿ. ಸಾಲ್ಯಾನ್, ಆರತಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಸಂಘದ ಮಾಜಿ ಅಧ್ಯಕ್ಷ ದಿ. ಪಿ. ಕೆ. ಸಾಲ್ಯಾನ್ ಅವರ ಪತ್ನಿ ಸಾವಿತ್ರಿ ಪಿ. ಕೆ. ಸಾಲ್ಯಾನ್ ಅವರನ್ನು ಸಮ್ಮಾನಿಸಲಾಯಿತು. ಪಿ. ದೇವದಾಸ್ ಎಲ್. ಕುಲಾಲ್ ಸ್ವಾಗತಿಸಿ, ಪ್ರಸ್ತಾವಿಸಿದರು. ಉಮೇಶ್ ಎಂ. ಬಂಗೇರ, ಕವಿತಾ ಹಾಂಡ ನಿರೂಪಿಸಿದರು. ಜಯ ಎಸ್ ಅಂಚನ್ ವಂದಿಸಿದರು.