ಉಡುಪಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಉಡುಪಿ ಆದರ್ಶ ಚಾರಿಟೇಬಲ್ ಟ್ರಸ್ಟ್, ಆದರ್ಶ ಕಾಲೇಜ್ ಆಫ್ ನರ್ಸಿಂಗ್, ಆದರ್ಶ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್, ಆದರ್ಶ ಪ್ಯಾರಮೆಡಿಕಲ್ ಕಾಲೇಜು, ಆದರ್ಶ ಆಸ್ಪತ್ರೆಗಳ ಆಶ್ರಯದಲ್ಲಿ ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಶಿಕ್ಷಕರ ದಿನಾಚರಣೆ ಅಂಗವಾಗಿ ನೀಡಲಾಗುವ ಉಡುಪಿ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಮಂಜುನಾಥ ಕುಲಾಲ್ ಶಿವಪುರ ಪಡೆದುಕೊಂಡಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ರವಿವಾರ ಅಲೆವೂರು ಕೆಮ್ತೂರು ರಸ್ತೆಯ ಆದರ್ಶ ಸಮೂಹ ವಿದ್ಯಾಸಂಸ್ಥೆಗಳ ಸಂಕೀರ್ಣದಲ್ಲಿ ನಡೆಯಿತು.
ಮಂಜುನಾಥ ಕುಲಾಲ್ ಅವರು ಹೆಬ್ರಿ ಸರಕಾರಿ ಪದವಿಪೂರ್ವ ಕಾಲೇಜು ಇಲ್ಲಿನ ಪ್ರೌಢಶಾಲಾ ವಿಭಾಗದ ಕನ್ನಡ ಭಾಷಾ ಅಧ್ಯಾಪಕರಾಗಿದ್ದು, ಶಿವಪುರದ ಮುಳ್ಳುಗುಡ್ಡೆಯ ರೈತ ಶ್ರೀನಿವಾಸ್ ಕುಲಾಲ್ ಮತ್ತು ಸುಶೀಲಾ ದಂಪತಿಯ ಸುಪುತ್ರ.
ಶಿವಪುರ ಮಂಜುನಾಥ ಕುಲಾಲ್ ಅವರಿಗೆ ಉಡುಪಿ ಜಿಲ್ಲಾಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ
Kulal news
1 Min Read