ಮಡಿಕೇರಿ(ಕುಲಾಲ ವರ್ಲ್ಡ್ ಡಾಟ್ ಕಾಮ್): ಕೊಡಗು ಜಿಲ್ಲಾ ಕುಲಾಲ/ಕುಂಬಾರರ ಸಂಘ (ರಿ) ಮಡಿಕೇರಿ ನೇತೃತ್ವದಲ್ಲಿ ಜಿಲ್ಲಾ ಯುವ ಘಟಕ ಮತ್ತು ಜಿಲ್ಲಾ ಮಹಿಳಾ ಘಟಕದ ಆಯೋಜನೆಯೊಂದಿಗೆ ಕೊಡಗು ಜಿಲ್ಲಾ ಕುಲಾಲ ಕುಂಬಾರ ಬಾಂಧವರ ಕ್ರೀಡೋತ್ಸವ ಬಹಳ ವಿಜೃಂಭಣೆಯಿಂದ ಏಪ್ರಿಲ್ 26 ಶನಿವಾರ ಮತ್ತು 27 ಆದಿತ್ಯವಾರ ಜರುಗಿತು.
ಏಪ್ರಿಲ್ 26 ಶನಿವಾರದಂದು ಓಂಕಾರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕ್ರೀಡಾ ಜ್ಯೋತಿಯನ್ನು ಕೆ .ಎಮ್ .ಚಿನ್ನಪ್ಪ ಮಡಿಕೇರಿ ನಿವೃತ್ತ ಯೋಧರು ಮತ್ತು ಮಾಜಿ ಉಪಾಧ್ಯಕ್ಷರು ಕುಲಾಲ ಸಮಾಜ ಬೆಂಗಳೂರು ಇವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಜಿಲ್ಲಾಧ್ಯಕ್ಷರಾದ ಕೆ ಕುಶಾಲಪ್ಪ ಮೂಲ್ಯ , ಉಪಾಧ್ಯಕ್ಷರಾದ ಕೆ ದಾಮೋದರ್ ಮಾಲೀಕರು ವೆಂಡಮ್ ಎಂಟರ್ಪ್ರೈಸಸ್ ಮಡಿಕೇರಿ,ಪ್ರಧಾನ ಕಾರ್ಯದರ್ಶಿಯವರಾದ ಅರುಣ್ ಕುಮಾರ್ ಕೂಡಿಗೆ, ಖಜಾಂಚಿಯವರಾದ ಕೆ ಎಸ್ ಗಿರೀಶ್ ಮಡಿಕೆಬೀಡು ಮತ್ತು ಯುವ ಘಟಕದ ಪದಾಧಿಕಾರಿಗಳು ಮತ್ತು ಮಹಿಳಾ ಘಟಕದ ಪದಾಧಿಕಾರಿಗಳು ಮತ್ತು ಜಿಲ್ಲೆಯಾದ್ಯಂತ ಬಂದಂತಹ ಕುಲಾಲ ಕುಂಬಾರ ಸಮಾಜದ ಕುಲಬಾಂಧವರು ನೂರಾರು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದು ಮೈದಾನದಲ್ಲಿ ಕ್ರೀಡೋತ್ಸವಕ್ಕೆ ಚಾಲನೆ ನೀಡಲಾಯಿತು.]
ಕ್ರೀಡೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಮಯೂರ್ ಉಳ್ಳಾಲ್, ಅಧ್ಯಕ್ಷರು, ದ.ಕ.ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ(ರಿ)ಮಂಗಳೂರು ಇವರು ಮಾತನಾಡುತ್ತ ಕೊಡಗು ಜಿಲ್ಲಾ ಕುಲಾಲ ಕುಂಬಾರ ಬಾಂಧವರ ಕಷ್ಟಕಾರ್ಪಣ್ಯಕ್ಕೆ ನಾವೆಲ್ಲರೂ ಕೈಜೋಡಿಸುತ್ತೇವೆ. ಮಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ಪ್ರಾರಂಭವಾಗುವ ಮಹಿಳಾ ಹಾಸ್ಟೆಲ್ ನಲ್ಲಿ ಕೊಡಗಿನ ಮಹಿಳಾ ಕುಲಬಾಂಧವರಿಗೂ ಅವಕಾಶ ನೀಡಲಾಗುವುದು ಎಂದು ತಿಳಿಸಿದರು. ವೇದಿಕೆಯಲ್ಲಿ ಸದಾಶಿವ ಕುಲಾಲ್ ಅಧ್ಯಕ್ಷರು ಶ್ರೀದೇವಿ ದೇವಸ್ಥಾನ ಮಂಗಳೂರು, ಪ್ರದೀಪ್ ಅತ್ತಾವರ್ ಸೇವಾ ದಳಪತಿ
ದಕ್ಷಿಣ ಕನ್ನಡ ಮೂಲ್ಯ ರ ಯಾನೆ ಕುಲಾಲರ ಮಾತೃ ಸಂಘ ಮಂಗಳೂರು, ಕಿರಣ್ ಸಾಮಾಜಿಕ ಕಾರ್ಯಕರ್ತರು ಮಂಗಳೂರು ಇವರು ಉಪಸ್ಥಿತರಿದ್ದರು. ಅದೇ ದಿನ ಕೊಡಗು ಜಿಲ್ಲಾ ಕುಲಾಲ ಕುಂಬಾರ ಬಾಂಧವರ ಪುರುಷರ ಕ್ರಿಕೆಟ್ ಪಂದ್ಯಾಟ ಜರುಗಿತು.
ಏಪ್ರಿಲ್ 27 ಬೆಳಿಗ್ಗೆ 9:00 ಯಿಂದ ಕೊಡಗು ಜಿಲ್ಲಾ ಕುಲಾಲ ಕುಂಬಾರ ಬಾಂಧವರ ಆಟೋಟ ಸ್ಪರ್ಧೆಗಳು ನಡೆಯಿತು. ಜಿಲ್ಲೆಯ ಮೂಲೆ ಮೂಲೆಯಿಂದಲೂ ಸಾವಿರಾರು ಸಂಖ್ಯೆಯಲ್ಲಿ ಬಂದ ಕುಲಬಾಂಧವರು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ಪುಳಕಿತರಾದರು. ಎರಡು ದಿನ ಕಾಫಿ ತಿಂಡಿ ಊಟ ಉಪಚಾರದ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು. ನಂತರ ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಿತು. ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಜಿಲ್ಲಾಧ್ಯಕ್ಷರಾದ ಕೆ ಕುಶಾಲಪ್ಪ ಮೂಲ್ಯ ಸಭಾಧ್ಯಕ್ಷತೆಯಲ್ಲಿ ನಡೆದ ಸಮಾರಂಭವು ಮುತ್ತಮ್ಮ ಕೋಟಿ ಅವರ ಗೌರವ ಉಪಸ್ಥಿತಿ ಇದ್ದರು.
ಯದುವೀರ್ ಕೃಷ್ಣದತ್ತ ಒಡೆಯರ್ ಸಂಸದರು ಲೋಕಸಭಾ ಕ್ಷೇತ್ರ ಮೈಸೂರು ಕೊಡಗು ಜಿಲ್ಲೆ ಇವರು ಮಾತನಾಡಿ ಮೈಸೂರು ಕೊಡಗು ಜಿಲ್ಲೆ ಸ್ಪರ್ಧಿಸಿರುವುದು ನನಗೆ ಒಂದು ಹೆಮ್ಮೆಯ ವಿಷಯ. ನನ್ನ ಈ ಕ್ಷೇತ್ರದ ಜನರಿಗಾಗಿ ನಾನು ಸದಾ ಮುಂದೆ ಇರುತ್ತೇನೆ. ಕೊಡಗು ಜಿಲ್ಲಾ ಕುಲಾಲ ಕುಂಬಾರ ಬಂದವರ ಕಷ್ಟ ಕಾರ್ಪಣ್ಯಕ್ಕೆ ನೆರವಾಗುತ್ತೇನೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಗೌರವ ಉಪಸ್ಥಿತಿಯಲ್ಲಿದ್ದ ಎ. ಎಸ್. ಪೊನ್ನಣ್ಣ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ಶಾಸಕರು ವಿರಾಜಪೇಟೆ ಕ್ಷೇತ್ರ ಇವರು ಮಾತನಾಡಿ ಕೊಡಗಿನ ಕುಂಬಾರ ಬಾಂಧವರ ಈ ರೀತಿಯ ಒಗ್ಗಟ್ಟು ಎಲ್ಲರಿಗೂ ಮಾದರಿ. ಮುಂದಿನ ದಿನಗಳಲ್ಲಿ ನಿಮ್ಮ ಯಾವ ಇಂತಹ ಕಾರ್ಯಕ್ರಮಗಳು ನನ್ನ ಪೂರ್ಣ ರೀತಿಯ ಬೆಂಬಲವಿದೆ. ಹಿಂದುಳಿದ ವರ್ಗದ ಬೆಂಬಲಕ್ಕೆ ಶಾಸಕನಾಗಿ ನಾನು ಸದಾ ಕಟಿಬದ್ಧರಾಗಿದ್ದೇನೆ. ಇಂಥ ಅದ್ದೂರಿ ಕಾರ್ಯಕ್ರಮಕ್ಕೆ ನನ್ನ ಶುಭಾಶಯಗಳು ಎಂದು ಹಾರೈಸಿದರು. ಡಾ. ಎಮ್ ಪಿ ವರ್ಷ ರಾಜ್ಯಾಧ್ಯಕ್ಷರು ಅಖಿಲ ಭಾರತೀಯ ಗ್ರಾಹಕರ ಕಲ್ಯಾಣ ಪರಿಷತ್ತು ಇವರು ಮಾತನಾಡಿ ಕುಂಬಾರಿಕೆಯ ಮತ್ತು ಕುಂಬಾರರ ಇತಿಹಾಸವನ್ನು ಸವಿಸ್ತಾರವಾಗಿ ಮುಂದಿಟ್ಟರು. ಐಎಎಸ್- ಐಪಿಎಸ್ ಮಾಡಲು ಉತ್ಸುಕರಾಗಿರುವ ಕೊಡಗು ಜಿಲ್ಲಾ ಕುಲಾಲ ಕುಂಬಾರ ಮಕ್ಕಳಿಗೆ ತನ್ನ ಕಡೆಯಿಂದ 25,000ಗಳನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು. ಆ ಬಳಿಕ ಮಾತನಾಡಿದ ರೇಣುಕಾಂಬ ನ್ಯಾಯಾಧೀಶರು ಗ್ರಾಹಕರ ನ್ಯಾಯಾಲಯ ಕೊಡಗು ಜಿಲ್ಲೆ ಇವರು ಕೊಡಗು ಜಿಲ್ಲಾ ಕುಲಾಲ ಕುಂಬಾರ ಬಾಂಧವರ ಈ ರೀತಿಯ ಒಗ್ಗಟ್ಟು ಬಾಂಧವ್ಯ ಸಮಾಜಕ್ಕೆ ಒಂದು ಮಾದರಿ ಎಂದು ಶ್ಲಾಘಿಸಿದರು. ಇಂತಹ ಕಾರ್ಯಕ್ರಮ ಮುನ್ನಿನ ದಿನಗಳಲ್ಲೂ ನಡೆಯಲಿ ಎಂದು ಹಾರೈಸಿದರು..
ವೇದಿಕೆಯಲ್ಲಿ ಹಾಜರಿದ್ದ ಶ್ರೀ ಮಂಜಪ್ಪ ಶರಣರು ಅಧ್ಯಕ್ಷರು ಸರ್ವಜ್ಞ ಸಂಶೋಧನಾ ಪೀಠ ದಾವಣಗೆರೆ ಇವರು ಕೊಡಗಿನ ಕುಲಬಾಂಧವರ ಬಾಂಧವ್ಯ ಬೆಸೆಯುವ ಇಂತಹ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಿದ್ದನ್ನು ಕೊಂಡಾಡಿದರು. ಸರ್ವಜ್ಞ ಸಂಶೋಧನಾ ಪೀಠದಿಂದ ಕುಲಬಾಂಧವರಿಗೆ ನೀಡುವ ಸೌಲಭ್ಯಗಳು ಮತ್ತು ವಿಶ್ವವಿದ್ಯಾನಿಲಯದಿಂದ ಸರ್ವಜ್ಞನ ಮತ್ತು ಕುಂಬಾರ ಸಮಾಜದ ಬಗ್ಗೆಗಿನ ಅಧ್ಯಯನ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಕೆ ಎಂ ಚಿನ್ನಪ್ಪ ಮಡಿಕೇರಿ ಅವರು ಮಾತನಾಡಿ ಇಂತಹ ಕಾರ್ಯಕ್ರಮವು ಕೊಡಗು ಜಿಲ್ಲೆಯಲ್ಲಿ ಒಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು ತನ್ಮೂಲಕ ಕುಲಾಲ ಕುಂಬಾರ ಬಾಂಧವರ ಬಾಂಧವ್ಯಕ್ಕೆ ಇಂತಹ ಕ್ರೀಡೋತ್ಸವವೂ ಅಡಿಪಾಯವಾಗಿರಲಿ. ಮುಂದಿನ ದಿನಗಳಲ್ಲಿ ಇಂತಹ ಒಳ್ಳೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಿ. ಆ ಮೂಲಕ ಕೊಡಗು ಜಿಲ್ಲೆ, ಕುಲಾಲ ಕುಂಬಾರ ಬಾಂಧವರು ಒಗ್ಗಟ್ಟಾಗಿ ಸಂಘಟಿತರಾಗಿ ನಿಲ್ಲಿ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ಬಹುಭಾಷಾ ಚಲನಚಿತ್ರ ನಟಿ ಹರ್ಷಿಕಾ ಪೂಣಚ್ಚ ಅವರು ಕುಲಾಲ ಕುಂಬಾರ ಬಾಂಧವರ ಸಾಮಾಜಿಕ ಬದ್ಧತೆ, ಸೌಜನ್ಯತೆ ಪ್ರಾಮಾಣಿಕತೆಯನ್ನು ಕೊಂಡಾಡಿದರು. ತಮ್ಮ ಶೈಲಿಯಲ್ಲಿ ಹಾಡನ್ನು ಹಾಡಿ ಎಲ್ಲರನ್ನೂ ರಂಜಿಸಿದರು. ಕುಂಬಾರ ಬಾಂಧವರು ಮಣ್ಣಿನಲ್ಲಿ ತಯಾರು ಮಾಡಿದ ಪರಿಕರಗಳನ್ನು ಉಡುಗೊರೆಯಾಗಿ ಇವರಿಗೆ ನೀಡಲಾಯಿತು.
ಸಭಾಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಜಿಲ್ಲಾಧ್ಯಕ್ಷರಾದ ಕೆ ಕುಶಾಲಪ್ಪ ಮೂಲ್ಯ ಅವರು ಮಾತನಾಡಿ, ಕೊಡಗು ಜಿಲ್ಲಾ ಸಂಘವು ಜಿಲ್ಲೆಯ ಕುಲಾಲ ಕುಂಬಾರ ಬಾಂಧವರ ಕಷ್ಟಕಾರ್ಪಣ್ಯಕ್ಕೆ ಸದಾ ಸಿದ್ಧವಿದೆ. ಸರಳತೆ ಸಮಾನತೆ ಮಾನವೀಯತೆಯ ಮೂಲಕ ಜಿಲ್ಲಾ ಸಂಘವು ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಕುಲಾಲ ಕುಂಬಾರ ಬಾಂಧವರಿಗೆ ಹಲವು ರೀತಿಯ ಯೋಜನೆಗಳು ಸಂಘದ ಮುಂದಿದೆ ಅದನ್ನು ಕಾರ್ಯಕರ್ತ ಗೊಳಿಸಲು ನಿಮ್ಮೆಲ್ಲರ ಸಹಕಾರ ಅವಶ್ಯಕ. ಕೊಡಗಿನ ಕುಲಾಲ ಕುಂಬಾರ ಬಾಂಧವರು ನೀಡಿದ ಅಭೂತಪೂರ್ವ ಸಹಕಾರ ಸಹಾಯಕ್ಕ್ಕೆ ಜಿಲ್ಲಾ ಸಂಘವು ಸದಾ ಚಿರಋಣಿಯಾಗಿರುತ್ತದೆ. ಎಲ್ಲರ ಸಹಕಾರ ಸಹಾಯದಿಂದ ಈ ರೀತಿಯ ಅದ್ದೂರಿ ಕಾರ್ಯಕ್ರಮ ನಡೆಯಲು ಸಾಧ್ಯವಾಯಿತು. ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮವಹಿಸಿದ ಎಲ್ಲರಿಗೂ ಶುಭವಾಗಲಿ ಎಂದು ನುಡಿದರು.
ವೇದಿಕೆಯಲ್ಲಿ ಮೂಡಿಗೆರೆ ಕುಲಾಲ ಕುಂಬಾರ ಸಂಘದ ಅಧ್ಯಕ್ಷರಾದ ವಿಶ್ವನಾಥ್ ಕುಲಾಲ್ ಕುಲಾಲ ಸಮಾಜ ಬೆಂಗಳೂರು , ಸತೀಶ್ ಸಂಪಾಜೆ ಸಂಘಟನಾ ಕಾರ್ಯದರ್ಶಿ ಕುಲಾಲ ಸಂಘ ಬಂಟ್ವಾಳ, ವೆಂಕಟೇಶ ಅಧ್ಯಕ್ಷರು ಶಾಲಿವಾಹನ ಗುಡಿ ಕೈಗಾರಿಕೆ ಮೈಸೂರು ಇವರು ಉಪಸ್ಥಿತರಿದ್ದರು. ನಂತರ ಕ್ರೀಡೆಯಲ್ಲಿ ವಿಜೇತರಾದ ಕುಲಾಲ ಕುಂಬಾರ ಬಾಂಧವರಿಗೆ ಬಹುಮಾನ ವಿತರಿಸಲಾಯಿತು. ಯಶಸ್ವಿನಿ ಪ್ರಾರ್ಥಿಸಿದರು . ರಮೇಶ್ ಮಡಿಕೆಬೀಡು ಸ್ವಾಗತಿಸಿದರು. ಹೇಮಲತಾ ಪ್ರಕಾಶ್ ಧನ್ಯವಾದ ಸಮರ್ಪಿಸಿದರು. ಎರಡು ದಿವಸಗಳ ಕ್ರೀಡೋತ್ಸವ ಸಮ್ಮಿಲನ 2025
ಕಾರ್ಯಕ್ರಮದ ಕ್ರೀಡಾಧಿಕಾರಿಯಾಗಿ ಕೆ.ಡಿ .ಶಾಂತಕುಮಾರ್ ಮಡಿಕೆಬೀಡು, ಆಹಾರ ಸಮಿತಿ ಮುಖ್ಯಸ್ಥರಾಗಿ ಸುರೇಶ್ ಕುಲಾಲ್ ಮಡಿಕೇರಿ,
ಸ್ವಾಗತ ಸಮಿತಿ ಮುಖ್ಯಸ್ಥರಾಗಿ ರಮೇಶ್ ಮಡಿಕೆ ಬೀಡು ಇವರ ತಂಡದ ಅವಿರತಶ್ರಮವು ಕಾರ್ಯಕ್ರಮದ ಯಶಸ್ವಿಗೆ ಕಾರಣವಾಯಿತು.
ನವೀನ್ ಕುಲಾಲ್ ಪುತ್ತೂರು ಇವರ ನಿರಂತರ ಎರಡು ದಿನದ ನಿರೂಪಣೆಯು ಜನರ ಮೆಚ್ಚುಗೆ ಪಡೆಯಿತು. ಪವನ್ ಕುಲಾಲ್ ಹಾಗೂ ರಮೇಶ್ ಮಡಿಕೆ ಬೀಡು ಸಾಥ್ ನೀಡಿದರು.