ಭಾರತದ ಸಂವಿಧಾನವು ಇತರೆ ದೇಶಗಳಿಕ್ಕಿಂತ ವಿಶಿಷ್ಟವಾದ್ದು ಮತ್ತು ಇದಕ್ಕೆ ಒಂದು ಜೀವಂತಿಕೆ ಇದೆ. ಈ ಸಂವಿಧಾನವು ಕಾಲಕಾಲಕ್ಕೆ ತಕ್ಕಂತೆ ಪರಿಷ್ಕರಣೆಗೆ ಒಗ್ಗಿಕೊಂಡು ಅದು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳತ್ತ ಬಂದಿದೆ. ಬದಲಾವಣೆಗೆ ತೆರೆದುಕೊಳ್ಳುತ್ತಲೇ ಇದೆ. ಇಂತಹ ಸಂವಿಧಾನ ರಚನಾ ಕಾರ್ಯವನ್ನು ಸ್ಮರಿಸುವ, ಗೌರವಿಸುವ, ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರತಿವರ್ಷ ನವಂಬರ್ 26ರಂದು ‘ಸಂವಿಧಾನ ದಿನ’ ಆಚರಿಸಲಾಗುತ್ತದೆ ಎಂದು ಘೊಷಿಸಿರುವುದರಲ್ಲಿ ಜೌಚಿತ್ಯವಿದೆ.
ವಿಶ್ವದಲ್ಲಿಯೇ ಅತ್ಯಂತ ಸಮರ್ಥವಾದ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತಕ್ಕೆ ಮತ್ತು ಜಗತ್ತಿಗೆ ಮಾದರಿಯಾದ ಸಂವಿಧಾನವನ್ನು ರಚನೆಮಾಡಿಕೊಟ್ಟ ಭಾರತ ಸಂವಿಧಾನ ಕರುಡು ಸಮಿತಿಗೆ ನಾವು ಚಿರಋಣಿಯಾಗಿರಲೇ ಬೇಕು. ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ಕೆಲವೇ ಸದಸ್ಯರನ್ನೊಳಗೊಂಡ ಕರಡು ಸಮಿತಿ ರಚಿಸಲಾಯಿತು. ಅದರಂತೆ ಸಮಿತಿಯು ಸಾಮಾಜಿಕ ನ್ಯಾಯ ದೊರಕಿಸಿಕೊಡುವಲ್ಲಿ ಮತ್ತು ದೇಶಕ್ಕೆ ಒಂದು ಭದ್ರವಾದ ಸಂವಿಧಾನವನ್ನು ನೀಡುವಲ್ಲಿ ಯಶಸ್ವಿಯಾಯಿತು. ಈ ಕರುಡು ಸಮಿತಿಯಲ್ಲಿ ಮಹಾರಾಷ್ಟ್ರದ ದೇಶಬಂಧು ರತ್ನಪ್ಪ ಭರಮಪ್ಪ ಕುಂಬಾರ ಸಹ ಒಬ್ಬರು, ಇವರು ಹಿಂದೂಳಿದ ಜನಾಂಗದಲ್ಲಿ ಒಂದಾದ ಕುಂಬಾರ ಜನಾಂಗಕ್ಕೆ ಸೇರಿದ್ದರು ಎನ್ನುವುದು ನಮ್ಮ ಹೆಮ್ಮೆ.
ರತ್ನಪ್ಪ ಬರಮಪ್ಪ ಕುಂಬಾರ 1909ರ ಸೆಪ್ಟೆಂಬರ್ 15 ರಂದು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶೀರೊಲ್ ಹತ್ತಿರ ನೀಮಿಷೀರಗಾನ್ ಗ್ರಾಮದಲ್ಲಿ ಜನಿಸಿದರು, ಬಾಲ್ಯವನ್ನು ಮತ್ತು ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿಯೇ ಮುಗಿಸಿ, ಕೊಲ್ಹಾಪುರದ ರಾಜಾರಾಮ್ ಕಾಲೇಜಿನಲ್ಲಿ ಇಂಗ್ಷೀಷ್ನಲ್ಲಿ ಬಿ.ಎ ಮುಗಿಸಿದ ನಂತರ ಕಾನೂನು ವಿಷಯದಲ್ಲಿ ಪದವಿಯನ್ನು ಪಡೆದುಕೊಂಡರು.
ರತ್ನಪ್ಪ ಕುಂಬಾರ ಅವರು ಯುವಕನಾಗಿದ್ದಾಗ ರಾಜಕೀಯ ಮತ್ತು ಸಾಮಾಜಿಕ ಕೆಲಸ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದರು ಅಲ್ಲದೆ ಸಕ್ರಿಯವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಬ್ರಿಟಿಷರ ವಿರುದ್ಧ ಹೊರಾಡಿ ಸುಮಾರು 6 ವರ್ಷಗಳ ಕಾಲ ಭೂಗತವಾಗಿದ್ದರು, ಪ್ರಜಾ – ಪರಿಷತ್ ಬ್ಯಾನರ್ ಅಡಿಯಲ್ಲಿ ಸಂಘಟನೆಯನ್ನು ಕಟ್ಟಿಕೊಂಡು ಸ್ಥಳೀಯ ಬ್ರಿಟಿಷ್ ಅಧಿಪಥ್ಯದ ರಾಜಾಡಳಿತದ ಮತ್ತು ರಾಜ ಸಂಸ್ಥಾನ ವಿರುದ್ಧ ರಾಜ ಸಂಸ್ಥಾನ ವಿಸರ್ಜನೆ ಮಾಡುವವರೆಗೂ ಚಳುವಳಿಯನ್ನು ಮಾಡಿದರು.
ಭಾರತ ಸ್ವಾತಂತ್ರ್ಯ ನಂತರ ರತ್ನಪ್ಪ ಕುಂಬಾರ ಅವರು ಭಾರತೀಯ ಸಂವಿಧಾನದ ಕರಡು ಸಮಿತಿಯಲ್ಲಿ ಸದಸ್ಯರಾಗಿ ಡಾ. ಬಿ. ಆರ್ .ಅಂಬೇಡ್ಕರ್ ಅವರೊಂದಿಗೆ ಸಕ್ರಿಯವಾಗಿ ಪಾಲ್ಗೊಂಡ ಸಂವಿಧಾನವನ್ನು ರಚಿಸುವುದಲ್ಲದೆ ಅಂತಿಮ ಕರಡು ಪ್ರತಿಗೆ ಅಂಬೇಡ್ಕರ ಅವರೊಂದಿಗೆ ತಮ್ಮ ಹಾಸ್ತಕ್ಷಾರವನ್ನು ಮೂಡಿಸಿದ್ದರು. ಮುಂದೆ 1952ರಲ್ಲಿಸಂಸತ್ ಸದಸ್ಯರಾಗಿ ಆಯ್ಕೆಯಾದರು, ನಂತರ 1962–1982 ಮತ್ತು 1990ರಲ್ಲಿ ಶೀರೊಲಿ ವಿಧಾನಸಭ ಕ್ಷೆತ್ರದ ವಿಧಾನಸಭ ಸದಸ್ಯರಾಗಿ ಆಯ್ಕೆಗೊಂಡಿದ್ದರು. 1974–1978ರ ಮಹಾರಾಷ್ಟ್ರ ಸರ್ಕಾರದ ವಸತಿ ಮತ್ತು ನಾಗರಿಕ ಸರಬರಾಜು ಖಾತೆಯ ಮಂತ್ರಿಯಾಗಿ ಸೇವೆ ಸಲ್ಲಿಸಿ ಅನೇಕ ಜನಪರ ಕೆಲಸಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನಮನ್ನಣೆಯನ್ನು ಗಳಿಸಿಗೊಂಡಿದ್ದರು. 1995 ರಲ್ಲಿ ಮಹಾರಾಷ್ಟ್ರ ರಾಜ್ಯ ವಿಧಾನ ಸಭೆಯ ಸ್ಪೀಕರ್ ಹುದ್ದೆಯನ್ನು ಅಲಂಕರಿಸಿದ್ದರು.
ರತ್ನಪ್ಪ ಕುಂಬಾರ ಕೊಲ್ಹಾಪುರದ ಶೀರೊಲ್ ಮತ್ತು ಹತ್ತನ್ನಾಂಗಳೆ ತೆಹಶೀಲ್ನ ಕೈಗಾರಿಕೆ ಮತ್ತು ವ್ಯವಸಾಯ ಕ್ಷೇತ್ರದಲ್ಲಿ ಸಮಗ್ರವಾದ ಅಭಿವೃದ್ಧಿಯನ್ನು ಮಾಡಿದ್ದರು ಮತ್ತು ಕೊಲ್ಹಾಪುರದಲ್ಲಿ ಸಹಕಾರ ಚಳವಳಿಯನ್ನು ಮಾಡುವುದರ ಮೂಲಕ ಸಹಕಾರ ಅಭಿವೃದ್ಧಿಯಲ್ಲಿ ಗಣಿನೀಯವಾದ ಬದಲಾವಣೆಯನ್ನು ತಂದು ಸಹಕಾರ ಅಭಿವೃದ್ಧಿಯ ಹರಿಕಾರ ಎಂದು ಜನರಿಂದ ಮನ್ನಣೆಯನ್ನು ಪಡೆದುಕೊಂಡಿದ್ದರು. ಈಚಲಕಾರಂಜಿ ಗಂಗಾನಗರ್ನಲ್ಲಿ ಪಂಚಗಂಗ ಸಹಕಾರಿ ಸಕ್ಕರೆ ಕಾರ್ಖಾನೆ ಅಭಿವೃದ್ಧಿ ಸಂಘ, ಪೀಪಲ್ಸ್ ಸಹಕಾರ ಬ್ಯಾಂಕ್ ಲಿಮಿಟೆಡ್, ಕೊಲ್ಹಾಪುರ ಜಿಲ್ಲಾ ಸಹಾಕಾರಿ ಗಿರಣಿ ಲಿಮಿಟೆಡ್, ಜನತಾ ಕೇಂದ್ರ ಸಹಕಾರ ಗ್ರಾಹಕ ಅಂಗಡಿಗಳು ಲಿಮಿಟೆಡ್ ಮುಂತಾದ ಅನೇಕ ಸಹಕಾರಿ ಸಂಘಗಳನ್ನ ಸ್ಥಾಪಿಸಿದ್ದರು. ಅಲ್ಲದೆ ಅನೇಕ ಶಾಲಾ, ಕಾಲೇಜ್ಗಳನ್ನು ಸಹಾ ಸ್ಥಾಪಿಸಿದರು.
ತಂದೆ ಬರಮಪ್ಪ ಕುಂಬಾರ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರ ದೇಶ ಭಕ್ತಿ, ನಿಸ್ವಾರ್ಥ ಸೇವ ಮನೋಭಾವ, ಸಹಾನುಭೂತಿ ಮತ್ತು ಭಕ್ತಿಯ ಮನೋಭಾವನೆಯಿಂದ ಪ್ರೇರಣೆಕೊಂಡು ರತ್ನಪ್ಪ ಕುಂಬಾರ ಅವರೂ ಸಹ ಅನೇಕ ಜನಪರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು ಇವರ ಸಾಮಾಜಿಕ ಮತ್ತು ರಾಜಕೀಯ ಕೊಡುಗೆಯನ್ನು ಮೆಚ್ಚಿ ಪುಣೆ ವಿಶ್ವವಿದ್ಯಾಲಯ D.Lit ಮದವಿಯನ್ನು ನೀಡಿ ಗೌರವಿಸಿದೆ. ಹಾಗೂ ಸ್ವತಂತ್ರ ಹೊರಾಟದಲ್ಲಿ ಸಂಕ್ರಿಯವಾಗಿ ಪಾಲ್ಗೊಂಡು ಸ್ವಾತಂತ್ರ್ಯ ಹೊರಾಟಕ್ಕೆ ತನ್ನದೆಯಾದ ಕೊಡಗೆಯನ್ನು ನೀಡಿದ್ದನ್ನು ಮತ್ತು ಅನೇಕ ಸಾಮಾಜಿಕ ಮತ್ತು ರಾಜಕೀಯ ಕೊಡುಗೆಯನ್ನು ಮನಗಂಡು ಕೇಂದ್ರ ಸರರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಮಹಾರಾಷ್ಟ್ರದಲ್ಲಿ ಇವರಿಗೆ ದೇಶಬಂಧು ರತ್ನಪ್ಪ ಕುಂಬಾರ ಎಂದು ಗೌರವ ಸೂಚಕವಾಗಿ ಕೆರೆಯಲಾಗುತ್ತದೆ. ದೇಶಬಂಧು ರತ್ನಪ್ಪ ಕುಂಬಾರ ಅವರು ತಮ್ಮ 89ನೇ ವಯಸ್ಸಿನಲ್ಲಿ ,ಡಿಸೆಂಬರ್ 23 1998 ರ ಬೆಳಿಗ್ಗೆ ಇಹಲೋಕವನ್ನು ತ್ಯೆಜಿಸಿದರು. ಮಹಾರಾಷ್ಟ್ರ ಸರ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯ ಸಂಸ್ಕಾರವನ್ನು ಮಾಡಿತು.
ಬರಹ : ಕುಬೇರ ಕುಂಬಾರ
(ವಿವಿಧ ಮೂಲಗಳಿಂದ)





