ಯಾವುದೇ ಒಂದು ಸಂಘ-ಸಂಸ್ಥೆ ಸರಾಗವಾಗಿ ನಡೆಯಲು ಒಬ್ಬಿಬ್ಬರ ಸಹಕಾರದಿಂದ ಸಾಧ್ಯವಿಲ್ಲ. ಇದಕ್ಕೆ ಸಮಾಜದ ಎಲ್ಲರ ಸಹಕಾರದ ಜೊತೆಗೆ ನಿಸ್ವಾರ್ಥ ಮನೋಭಾವ, ಸಾಮಾಜಿಕ ಕಳಕಳಿ, ಜವಾಬ್ದಾರಿ ಅವಶ್ಯ. ಇಂಥ ಸನ್ನಿವೇಶದಲ್ಲಿ ನಾವು ಕಂಡುಕೊಂಡಿದ್ದು ಒಗ್ಗಟ್ಟು, ಸಂಘಟನೆ. ಅಭಿವೃದ್ಧಿ ಹೊಂದುತ್ತಿರುವ ಈ ವ್ಯವಸ್ಥೆಯಲ್ಲಿ ನಮ್ಮನ್ನು ನಾವು ಗುರುತಿಸಿ ಕೊಳ್ಳುವುದು ಹೇಗೆ …? ನಮ್ಮ ಕೂಗು ಅಧಿಕಾರಿ ವರ್ಗದ ಕಿವುಡು ಜನಕ್ಕೆ ತಲುಪಿಸುವುದು ಹೇಗೆ ? ಅದು ನಾವು ಸಾಮೂಹಿಕವಾಗಿ ಹೋರಾಟ ನಡೆಸಿದಾಗ ಮಾತ್ರ ಸಾಧ್ಯ. ಇದೇ ಕಾರಣದಿಂದ ಸಂಘ ಸಂಸ್ಥೆಗಳು, ಸಂಘಟನೆಗಳು,ಯುವಕಮಂಡಲಗಳು, ಜಾತಿ ಸಂಘಗಳು ಹುಟ್ಟಿಕೊಂಡವು ಎನ್ನಬಹುದು.
ಇನ್ನು ನಮ್ಮ ಸಮುದಾಯದ ವಿಚಾರಕ್ಕೆ ಬಂದಾಗ ನಮ್ಮಲ್ಲೂ ಅನೇಕ ಸಂಘಗಳನ್ನು ಕಾಣಬಹುದು. ಅಂತೆಯೇ ಕಾರ್ಕಳ ತಾಲೂಕಿನ ಜೋಡುರಸ್ತೆ ಎಂಬಲ್ಲಿ ಒಂದು ತಾಲೂಕು ಸಂಘವಿದೆ. ಅದುವೇ ಕುಲಾಲ ಸುಧಾರಕ ಸಂಘ ಕಾರ್ಕಳ. ದಿವಂಗತ ಯು.ಸಿ ಮೂಲ್ಯರು ಇದರ ಸ್ಥಾಪಕ ಅಧ್ಯಕ್ಷರು. ಅವರ ಮುಂದಾಳುತ್ವದಲ್ಲಿ ಕಟ್ಟಿ ಬೆಳೆಸಿದ ಈ ಸಂಘ ಇಂದು 2 ದಶಕಗಳನ್ನು ಪೂರೈಸಿದೆ. ಸಂಘಕ್ಕೊಂದು ಶಾಶ್ವತ ಕಟ್ಟಡದ ಅವಶ್ಯಕತೆಯನ್ನು ಮನಗಂಡು ಸಂಘವು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನು ಇಟ್ಟಿರುವುದು ಹೆಮ್ಮೆಯೆನಿಸುತ್ತಿದೆ.
ದುಃಖದ ವಿಚಾರವೆಂದರೆ ಕಟ್ಟಡದ ಕಾಮಗಾರಿ ಆರಂಭಿಸಿ ವರ್ಷಗಳೇ ಕಳೆದರೂ ಅದು ಹಣಕಾಸಿನ ಕೊರತೆಯಿಂದ ಪೂರ್ಣಗೊಂಡಿಲ್ಲ. ಹಣಕಾಸಿನ ನೆರವಿಗೆ ಖಾಸಗಿ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು, ದಾನಿಗಳು, ಹಾಗೂ ಶಾಸಕ-ಸಚಿವರ ಕಚೇರಿ ಕದಗಳನ್ನು ತಟ್ಟುವ ಕಾರ್ಯ ನಡೆಯುತ್ತಲೇ ಇದೆ. ಕಾಮಗಾರಿ ಹಣಕಾಸಿನ ಮುಗ್ಗಟ್ಟಿನಿಂದ ಕುಂಟುತ್ತಾ ಸಾಗಿದೆ. ಈ ಕಟ್ಟಡ ಸಮುದಾಯದ ಪ್ರತಿಯೊಬ್ಬರ ಸ್ವತ್ತಾಗಿದ್ದು, ಸಮುದಾಯದ ಎಲ್ಲರೂ ಸಂಘಕ್ಕೆ ನೆರವು ನೀಡುವ ಮೂಲಕ ಸಹಕರಿಸಬೇಕಾಗಿದೆ.
ಸಮಾಜದ ಬಂಧುಗಳೇ ನೆರವು ಅಂತ ಬಂದಾಗ ಜನ ಜಾತಿ ಮರೀತಾರೆ. ಇತರ ಸಮುದಾಯದವರೂ ಸಹಾಯ ಮಾಡುತ್ತಾರೆ. ಅಂತಹುದರಲ್ಲಿ ನಮ್ಮವರು ಎಲ್ಲೇ ಇರಲಿ ಜಾತಿ ಅಭಿಮಾನದ ವಿಷಯ ಬಂದಾಗ ವ್ಯಾಪ್ತಿ, ಪ್ರದೇಶ, ಜಿಲ್ಲೆ, ತಾಲೂಕು ಯಾವುದೇ ಇರಲಿ ಎಲ್ಲವನ್ನೂ ಮರೆತು ಸಹಾಯ ಹಸ್ತ ನೀಡುತ್ತಾರೆ ಎಂಬ ನಂಬಿಕೆ ನಮ್ಮದು.
ಸಹಾಯ ನೀಡುವವರು ಕೆಳಗಿನ ಖಾತೆಗೆ ಹಣ ಜಮಾ ಮಾಡಬೇಕಾಗಿ ವಿನಂತಿ.
ಕುಲಾಲ ಸುಧಾರಕ ಸಂಘ ಕಾರ್ಕಳ
ಕೆನರಾ ಬ್ಯಾಂಕ್ ಖಾತೆ ಸಂಖ್ಯೆ-0609101026492 IFC ಕೋಡ್ -CNRB00000609
MICR-575015041
ಹೆಚ್ಚಿನ ಮಾಹಿತಿಗೆ ಕರೆ ಮಾಡಿ: 9449487593– ಕೃಷ್ಣ ಮೂಲ್ಯ
ಬರಹ : ಸಂತೋಷ್ ಕುಲಾಲ್ , ಪದವು

