ಮಂಗಳೂರು (ಕುಲಾಲ್ ವರ್ಲ್ಡ್ ಡಾಟ್ ಕಾಮ್): ಬೆಂಗಳೂರಿನಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯ ಕಲಾವಿದರ ರಕ್ಷಣಾವೇದಿಕೆ ವತಿಯಿಂದ ನಡೆದ ರಾಷ್ಟ್ರೀಯ ಭರತನಾಟ್ಯ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಭುವಿ ಕುಲಾಲ್ ಇವರು “ಕರ್ನಾಟಕ ಯುವ ನಾಟ್ಯ ರಾಣಿ ಶಾಂತಲೆ” ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.
ಸುರತ್ಕಲ್ ಕಾಟಿಪಳ್ಳ ಪೆಡ್ಯಂಗಡಿ ನಿವಾಸಿಗಳಾದ ಲೋಕೇಶ್ ಹಾಗೂ ಸುರೇಖಾ ದಂಪತಿಯ ಸುಪುತ್ರಿಯಾದ ಭುವಿ ಅವರು ಡೆಲ್ಲಿ ಪಬ್ಲಿಕ್ ಸ್ಕೂಲ್ ನ ಹತ್ತನೇ ತರಗತಿ ವಿದ್ಯಾರ್ಥಿನಿ. ನೃತ್ಯ, ಭಾಷಣ, ನಾಟಕ, ಮೋನೋ ಆಕ್ಟ್ ಮುಂತಾದ ಹಲವು ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸ್ಪರ್ಧೆಗಳಲ್ಲಿ ಭಾಗ ವಹಿಸಿ ಬಹುಮಾನ ಗೆದ್ದಿರುವ ಭುವಿ ಕುಲಾಲ್ ಉತ್ತರಪ್ರದೇಶದಲ್ಲಿ ನಡೆದಿದ್ದ ರಾಷ್ಟ್ರೀಯ ಜನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದಿದ್ದರು. ಇವರು ತಮ್ಮ ಭರತನಾಟ್ಯ ಅಭ್ಯಾಸವನ್ನು ಶಿಕ್ಷಕರಾದ ಪ್ರತಿಮಾ ಶ್ರೀಧರ್, ಶ್ರೀಧರ್ ಹೊಳ್ಳ, ಪ್ರಕ್ಷಿಲ ಜೈನ್ ಅವರ ಬಳಿ ಪಡೆಯುತ್ತಿದ್ದಾರೆ.