ಪುತ್ತೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಕುಲಾಲ ಸಮಾಜ ಸೇವಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಕುಲಾಲ ಬಾಂಧವರ ತಾಲೂಕು ಮಟ್ಟದ ವೈಯಕ್ತಿಕ ಸ್ಪರ್ಧೆಗಳು ಹಾಗೂ ಅಂತರ್ ತಾಲೂಕು ಮಟ್ಟದ ಗುಂಪು ಸ್ಪರ್ಧೆಗಳು ಮಾ.೧ರಂದು ನೆಹರುನಗರ ಸುದಾನ ವಸತಿ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.
ಕ್ರೀಡಾಕೂಟವನ್ನು ರಾಜ್ಯಗುಪ್ತಚರ ಇಲಾಖೆಯ ಮಂಗಳೂರು ಘಟಕದ ಪಿಎಸೈ ಯಶವಂತ ಪಿ.ವಿ ಉದ್ಘಾಟಿಸಿ ಮಾತನಾಡಿ, ಸಂಘಟನಾತ್ಮಕವಾಗಿ ತೊಡಗಿಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಲು ಸಂಘಟನೆಗಳು ಪೂರಕವಾಗಿದೆ.ಸಮಾಜದ ಎಲ್ಲರ ಶ್ರೇಯೋಭಿವೃದ್ದಿಗಾಗಿ ಎಲ್ಲರೂ ಕಂಕಣಬದ್ದರಾಗಿರಬೇಕು .ದೊರಕಿರುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗ ಯಶಸ್ವಿ ಸಾಧ್ಯ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೈಸೂರು ಯೋಜನಾಽಕಾರಿ ಗಾಯತ್ರಿ ಮಾತನಾಡಿ,ಕ್ರೀಡಾಕೂಟಗಳಿಂದ ಸೌಹಾರ್ಧಯುತ ವಾತಾವರಣ ಸೃಷ್ಟಿಯಾಗಲು ಸಾಧ್ಯ.ಸಮುದಾಯದ ಬಾಂಧವರು ಒಂದೆಡೆ ಸೇರಿಕೊಂಡು ಸಮಾಜಮುಖಿಯಾಗಿ ತೊಡಗಿಸಿಕೊಳ್ಳಲು ಸಮಾಜ ಸೇವಾ ಸಂಘ ವೇದಿಕೆಯಾಗುತ್ತದೆ ಎಂದರು. ಅಧ್ಯಕ್ಷತೆಯನ್ನು ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣಪ್ಪ. ಕೆ. ವಹಿಸಿದ್ದರು.
ಪುತ್ತೂರು ಬಾಲಕಿಯರ ಸ.ಪ.ಪೂ ಕಾಲೇಜಿನ ಉಪನ್ಯಾಸಕ ಸುರ್ ಕುಮಾರ್ ಎಂ,ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪುತ್ತೂರು ವಲಯದ ಅಧ್ಯಕ್ಷ ಶೀನಪ್ಪ ಕುಲಾಲ್ ಸೇಡಿಯಾಪು,ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮೋನಪ್ಪ ಕುಲಾಲ್ ಬೊಳ್ಳೊರೋಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕೃಷ್ಣ ಎಂ.ಅಳಿಕೆ,ಜತೆ ಕಾರ್ಯದರ್ಶಿ ಕೃಷ್ಣಪ್ಪ ಮಚ್ಚಿಮಲೆ,ಕೋಶಾಽಕಾರಿ ತುಕರಾಮ ಮುದಲಾಜೆ,ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ದಿನಕರ್, ಕಾರ್ಯದರ್ಶಿ ತ್ರಿವೇಣಿ ದಿನೇಶ್ ಉಪಸ್ಥಿತರಿದ್ದರು. ಸೀತಾರಾಮ ಆರ್ಯಾಪು,ಮುರಳಿ ಕುಲಾಲ್ ಉಪ್ಪಿನಂಗಡಿ,ಸುಕುಮಾರ್ ಪಡ್ನೂರು,ತುಕರಾಮ ಮುದಲಾಜೆ,ಆನಂದ ಪಡೀಲ್,ಚಿತ್ರಾ ಬಲ್ನಾಡು ಅತಿಥಿಗಳನ್ನು ಗೌರವಿಸಿದರು.
ಕಾರ್ಯಕ್ರಮದಲ್ಲಿ ಕುಂಬಾರರ ಗುಡಿ ಕೈಗಾರಿಕೆ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ಭಾಸ್ಕರ ಪೆರುವಾಯಿ,ದಾಮೋದರ ವಿ,ನಾರಾಯಣ ಕುಲಾಲ್ಮ,ಶುಭ ,ಜಯಶ್ರೀ,ಡಾ.ಆನಂದ ಭಂಜನ್,ಸಂಯೋಜಕರಾದ ಗಿರೀಶ್ ಪಡ್ನೂರು, ಯೋಗೀಶ್ ಬಲ್ನಾಡ್,ಲೋಕೇಶ್ ರಾಮಕುಂಜ,ವಸಂತ ಕುಲಾಲ್ ಕೌಡಿಚ್ಚಾರು,ಸತೀಶ್ ಕುಲಾಲ್ ಉಡ್ಡಂಗಳ,ಹರಿಣಾಕ್ಷಿ ಸೂತ್ರಬೆಟ್ಟು,ಸುಧಾಕರ ಕುಲಾಲ್ ನರಿಮೊಗರು,ಯೋಗೀಶ್ ಬಲ್ನಾಡು,ದೀಪಕ್ ಬಲ್ನಾಡು,ವಿನಯ ಚಂದ್ರ ಕಡೆಶಿವಾಲ್ಯ,ಮೋಕ್ಷಿತಾ ಕುಲಾಲ್,ದಿನೇಶ್ ಬೇರಿಕೆ,ಕುಲಾಲ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷರಾದ ದಿನೇಶ್ ಪಿ.ವಿ,ಅನಂತರಾಮ ಬಿ.ಕೆ,ವಸಂತ ಬಿ.ಕೆ,ಪಿ.ಧರ್ಣಪ್ಪ ಮೂಲ್ಯ ಸಿಟಿಗುಡ್ಡೆ,ವಸಂತ ನೆಹರುನಗರ,ತೀರ್ಥ ಸೂತ್ರಬೆಟು,ದಿನೇಶ್ ಮುದಲಾಜೆ,ದಾಮೋದರ ವೀರಮಂಗಲ,ಜನಾರ್ಧನ ಸಿಟಿಗುಡ್ಡೆ,ಧರ್ಣಪ್ಪ ಮೂಲ್ಯ ಕಜೆ,ಬಾಲಕೃಷ್ಣ ಕುಲಾಲ್ ಕೌಡಿಚ್ಚಾರು,ಚಂದ್ರಶೇಖರ ಕೆ,ಕೃಷ್ಣ ಮೂರ್ತಿ ಪಡ್ನೂರು ಮೊದಲಾದವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಕುಲಾಲ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಮಹೇಶ್ ಕೆ.ಸವಣೂರು ಸ್ವಾಗತಿಸಿ,ಕ್ರೀಡಾ ಕಾರ್ಯದರ್ಶಿ ನವೀನ್ ಕುಲಾಲ್ ವಂದಿಸಿದರು.ವೀರಮಂಗಲ ಹಿ.ಪ್ರಾ.ಶಾಲಾ ಶಿಕ್ಷಕಿ ಹರಿಣಾಕ್ಷಿ ವಸಂತ ಕಾರ್ಯಕ್ರಮ ನಿರೂಪಿಸಿದರು.