ಛತ್ತೀಸ್ ಗಡ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ
ಬೆಳ್ತಂಗಡಿ(ಕುಲಾಲ ವರ್ಲ್ಡ್ ಡಾಟ್ ಕಾಮ್): ಹಿಂದಿನ ಕಾಲದಲ್ಲಿ ಕೆಲವು ಆಟಗಳು ಗಂಡುಮಕ್ಕಳಿಗೆ ಮಾತ್ರ ಸೀಮಿತವಾಗಿತ್ತು ಆದರೆ ಇಂದು ಹುಡುಗಿಯರು ಗಂಡುಮಕ್ಕಳಿಗೆ ಸರಿಸಮನಾಗಿ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಇಂತಹ ಹಾದಿಯಲ್ಲಿ ಪುರುಷರ ಆಟವೆಂಬ ಖ್ಯಾತಿಗಳಿಸಿದ ಕಬಡ್ಡಿ ಆಟದಲ್ಲಿ ಸಾಕಷ್ಟು ಹುಡುಗಿಯರು ಸಾಧನೆಯ ಹಾದಿಯಲ್ಲಿ ಮಿಂಚುತ್ತಿದ್ದಾರೆ. ಹೀಗೆ ಚಿಕ್ಕ ವಯಸ್ಸಿಗೇ ಈ ಆಟದಲ್ಲಿ ಗಮನಸೆಳೆದು ರಾಷ್ಟಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿನಿಯರಲ್ಲಿ ಶ್ರಾವ್ಯ ಕುಲಾಲ್ ಕೂಡಾ ಒಬ್ಬಳು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮ ಬಳ್ಳಮಂಜ ಊರಿನ ವಾಸು ಕುಲಾಲ್ ಹಾಗೂ ಸುಜಾತ ಕುಲಾಲ್ ದಂಪತಿ ಗಳ ಎರಡನೇ ಪುತ್ರಿ ಶ್ರಾವ್ಯ ಕುಲಾಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಗ್ಗ ಇಲ್ಲಿನ 7ನೇ ತರಗತಿ ವಿದ್ಯಾರ್ಥಿನಿ. 2018-19ರ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಕಬಡ್ಡಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಗ್ಗ ತಂಡದ ನಾಯಕಿಯಾಗಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಕಬಡ್ಡಿ ಕ್ಷೇತ್ರಕ್ಕೆ ಪಾದಾರ್ಪಣೆ ಗೈದ ಪ್ರಾಥಮಿಕ ಹಂತದಲ್ಲೆ ವಲಯ ಮಟ್ಟದಿಂದ ಹಿಡಿದು ರಾಜ್ಯಮಟ್ಟವರೆಗೆ ಏರಿ ವೈಯಕ್ತಿಕ ಚಾಂಪಿಯನ್ ಮುಡಿಗೇರಿಸಿಕೊಂಡಿದ್ದಾಳೆ.
ಕರಾವಳಿಯ ಕಬಡ್ಡಿರಂಗದ ದ್ರೋಣಾಚಾರ್ಯ ಎಂದೇ ಹೆಸರುವಾಸಿಯಾದ ಅದೇಷ್ಟೋ ಯುವ ಪ್ರತಿಭೆಗಳನ್ನು ರಾಷ್ಟ್ರಮಟ್ಟಕ್ಕೆ ಏರಿಸಿದ ದೈಹಿಕ ಶಿಕ್ಷಕರಾದ ಆಸೀದ್ ಪಡಂಗಡಿಯವರ ಗರಡಿಯಲ್ಲಿ ಪಳಗಿ ತಂಡದ ನಾಯಕಿಯಾಗಿ ಅತ್ಯುತ್ತಮ ಆಟದೊಂದಿಗೆ ತಂಡವನ್ನು ಮುನ್ನಡೆಸುತ್ತ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಛತ್ತೀಸ್ ಗಡ್ ನಲ್ಲಿ ನಡೆಯುವ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಈ ಎಳೆ ಪ್ರತಿಭೆಗೆ ಇನ್ನಷು ಸಹಕಾರ ಬೆಂಬಲಗಳ ಅಗತ್ಯ ಇದೆ. ಶ್ರಾವ್ಯ ಳ ಶ್ಲಾಘನೀಯ ಈ ಸಾಧನೆಗೆ ಸಂಘ ಸಂಸ್ಥೆಗಳ ಶ್ಲಾಘನೆ, ಸಹಕಾರ, ಸನ್ಮಾನಗಳು ಇನ್ನಷ್ಟು ಹರಿದು ಬರಲಿ ..ಕಬಡ್ಡಿ ಕ್ಷೇತ್ರದಲ್ಲಿ ಇನ್ನಷ್ಟು ಮಿಂಚಲಿ..ಮತ್ತಷ್ಟು ಅವಕಾಶಗಳು ದೊರಕಲಿ ಎಂಬ ಹಾರೈಕೆ ನಮ್ಮದು.