ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : `ಸೋಲು-ಗೆಲುವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಒಮ್ಮೆ ಸೋತರೆ ಮತ್ತೊಮ್ಮೆ ಗೆಲ್ಲಲೂ ಬಹುದು. ಸೋತೆ ಎಂಬ ಕೊರಗು ಕ್ರೀಡಾಪಟುಗಳಲ್ಲಿ ಇರಬಾರದು. ಕ್ರೀಡಾಕೂಟದಿಂದ ನಾಯಕತ್ವ ಮತ್ತು ಆತ್ಮವಿಶ್ವಾಸ ದೊರೆಯಲು ಕ್ರೀಡಾಪಟುಗಳಿಗೆ ಸಹಕಾರಿಯಾಗುತ್ತದೆ’ ಎಂದು ಸಮಾಜ ಸೇವಾ ಸಹಕಾರಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಭೋಜ ಸರಳಪಾದೆ ತಿಳಿಸಿದರು.
ಅವರು ಬಿ.ಸಿ.ರೋಡು ಪೊಸಳ್ಳಿಯ ಕುಲಾಲ ಭವನದಲ್ಲಿ ನಡೆದ ಕುಲಾಲ ಬಾಂಧವರ ತಾಲೂಕು ಮಟ್ಟದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, `ದೇವರು ನಮಗೆ ಮನುಷ್ಯ ಜೀವನವನ್ನು ನೀಡಿರುತ್ತಾರೆ. ಅದನ್ನು ನಾವು ಸದುಪಯೋಗ ಪಡಿಸಿಕೊಳ್ಳಬೇಕು. ಆರೋಗ್ಯಪೂರ್ಣ ಜೀವನಕ್ಕೆ ಕ್ರೀಡೆಯೂ ಅವಶ್ಯಕ. ಇಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ತಾಲೂಕು, ಜಿಲ್ಲಾ, ರಾಜ್ಯ ಹೀಗೆ ಉನ್ನತ ಮಟ್ಟಕ್ಕೆ ಏರಲಿ’ ಎಂದು ಆಶಿಸಿದರು.
ಮುಖ್ಯ ಅತಿಥಿಗಳಾಗಿ ಉಪನ್ಯಾಸಕಿ ನಳಿನಿ ಚಂದ್ರಹಾಸ, ಕೃಷಿ ಇಲಾಖೆ ಸಿಬ್ಬಂದಿ ರಾಹುಲ್ರಾಜ್ ಪ್ರಕಾಶ್ ಭಾಗವಹಿಸಿದ್ದರು. ಬಂಟ್ವಾಳ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಡಿ. ಎಂ. ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಗೌರವಾಧ್ಯಕ್ಷ ಲಿಂಗಪ್ಪ ಮಾಸ್ಟರ್, ಮಹಿಳಾ ಘಟಕದ ಅಧ್ಯಕ್ಷೆ ನಮಿತಾ ಉಮೇಶ್, ಪ್ರಧಾನ ಕಾರ್ಯದರ್ಶಿ ಜಯಂತಿ ಗಂಗಾಧರ್, ಯುವವೇದಿಕೆ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ಸೇಸಪ್ಪ ಪೊಸಳ್ಳಿ ಉಪಸ್ಥಿತರಿದ್ದರು. ಕ್ರೀಡಾಕಾರ್ಯದರ್ಶಿ ಜಯರಾಜ್ ಎಸ್. ಬಂಗೇರ ಸ್ವಾಗತಿಸಿದರು. ಕೇಶವ ಮಾಸ್ತರ್ ಮಾರ್ನಬೈಲು ಕಾರ್ಯಕ್ರಮ ನಿರ್ವಹಿಸಿದರು. ದಳಪತಿ ಹರಿಪ್ರಸಾದ್ ಧನ್ಯವಾದ ನೀಡಿದರು.
ಉಪಾಧ್ಯಕ್ಷ ಕೃಷ್ಣಶ್ಯಾಮ್, ಕೋಶಾಧಿಕಾರಿ ನಾರಾಯಣ ಸಿ. ಪೆರ್ನೆ, ಪದ್ಮನಾಭ ಅಲೆತ್ತೂರು, ರಮೇಶ್ ಸಾಲಿಯಾನ್, ಮಚ್ಚೇಂದ್ರ ಸಾಲಿಯಾನ್, ಜಲಜಾಕ್ಷಿ ಚೆನ್ನಪ್ಪ, ಕಾರ್ಯಕ್ರಮಕ್ಕೆ ಸಹಕರಿಸಿದ್ದರು.