ಬೆಳ್ತಂಗಡಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಬಂದಾರಿನ ಬಹುಮುಖ ಪ್ರತಿಭೆ ವಿಜೇತ್ ಕುಂಬಾರ ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಕುಂಬಾರ ಸಮುದಾಯಲ್ಲಿ ಅರಳಿದ ಈ ಹಳ್ಳಿ ಪ್ರತಿಭೆಯ ಸಾಮರ್ಥ್ಯ ದೆಹಲಿಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರದರ್ಶನಗೊಳ್ಳಲಿದೆ.
ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟ ದೆಹಲಿಯಲ್ಲಿ ನಡೆಯಲಿದ್ದು, ಬಲಿಷ್ಟ ಸ್ಮಾಶರ್ ಆಗಿರುವ ವಿಜೇತ್ ಕುಂಬಾರ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಭಾವಂತ ಆಟಗಾರರಾಗಿದ್ದಾರೆ. ಪ್ರಸ್ತುತ ಬೆಳ್ತಂಗಡಿಯ ವಾಣಿ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿರುವ ವಿಜೇತ್ ಅವರುತ್ರೋಬಾಲ್ ಮಾತ್ರವಲ್ಲದೆ ವಾಲಿಬಾಲ್, ಕಬಡ್ಡಿ, ಭಜನೆ, ನಾಸಿಕ್ ಬ್ಯಾಂಡ್ ಹಾಗೂ ಇತರ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಬಹುಮುಖ ಪ್ರತಿಭೆಯ ವ್ಯಕ್ತಿತ್ವದವರು. ಇವರು ಬಂದಾರು ಶೀನಪ್ಪ ಕುಂಬಾರ ಮತ್ತು ರೇವತಿ ದಂಪತಿಯರ ಪುತ್ರ.