ಬೆಳ್ತಂಗಡಿ (ಕುಲಾಲ್ ವರ್ಲ್ಡ್ ಡಾಟ್ ಕಾಮ್) :ಅಂಧ್ರಪ್ರದೇಶದಲ್ಲಿ ನಡೆಯುವ ವಾಲಿಬಾಲ್ ಪಂದ್ಯಾಟದಲ್ಲಿ ಅಶ್ವಿನಿ.ಕೆ ಕುಂಬಾರ ಅವರು 14ರ ವಯೋಮಾನ ವಿಭಾಗದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಆಡಲಿದ್ದಾರೆ.
ಬೆಳ್ತಂಗಡಿ ಸಮೀಪದ ಬಂದಾರು ಸರಕಾರಿ ಶಾಲೆಯ ವಿದ್ಯಾರ್ಥಿನಿಯಾಗಿರುವ ಅಶ್ವಿನಿ ಅವರು ಸತತ ಎರಡನೇ ಬಾರಿಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಶಿವಮೊಗ್ಗದ ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಬಾಲಿಕೆಯರ ವಾಲಿಬಾಲ್ ಪಂದ್ಯಾಟದಲ್ಲಿ ಉತ್ಕೃಷ್ಟವಾದ ಆಟದ ಪ್ರದರ್ಶನ ನೀಡಿರುವ ಅವರು, ಉತ್ತಮ ಹೊಡೆತಗಾರ್ತಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಶಿಕ್ಷಕ ಪ್ರಶಾಂತ್ ಅವರಿಂದ ತರಬೇತಿ ಪಡೆಯುತ್ತಿರುವ ಅಶ್ವಿನಿ ಅವರು ಬಂದರು ನಿವಾಸಿ ಡೊಂಬಯ್ಯ ಕುಂಬಾರ ಮತ್ತು ಸುಮಿತ್ರ ದಂಪತಿಯ ಸುಪುತ್ರಿ .