ಹಾಡಿಗೆ ಭಾವ ಸಂಗೀತವೇ ಜೀವ !
ಸರಿಗಮಪ ಸೀಸನ್ 14 ಕಾರ್ಯಕ್ರಮದಲ್ಲಿ ಎಕ್ಸ್ ಪ್ರೆಶನ್ ಕ್ವೀನ್ ಎಂದು ಕರೆಸಿಕೊಂಡಿದ್ದ ಕೀರ್ತನ ಫೈನಲ್ ವೇದಿಕೆ ಏರಿದ್ದಾರೆ. ಎಲ್ಲ ನಿರೀಕ್ಷೆಯಂತೆ ತನ್ನ ಹಾಡಿನ ಮೂಲಕ ಈ ಹುಡುಗಿ ಫೈನಲ್ ಹಂತ ತಲುಪಿದ್ದಾಳೆ. ಸದ್ಯ ಸರಿಗಮಪ ಫೈನಲ್ ಗೆ ಐದು ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ವಿಶೇಷ ಅಂದರೆ ಈ ಪೈಕಿ ಆಯ್ಕೆ ಆದ ಏಕೈಕ ಹುಡುಗಿ ಕೀರ್ತನಾ ಆಗಿದ್ದಾರೆ. ಸೆಮಿ ಫೈನಲ್ ನಲ್ಲಿ ಅಮೋಘವಾಗಿ ಹಾಡಿದ ಕೀರ್ತನ ಅವರನ್ನು ಮಹಾಗುರು ಹಂಸಲೇಖ ನೇರವಾಗಿ ಫೈನಲ್ ಗೆ ಕಳುಹಿಸಿದರು.
(ಕುಲಾಲ್ ವರ್ಲ್ಡ್ ಡಾಟ್ ಕಾಮ್ -೨೨-೦೫-೨೦೧೮)
ಮನೆಯ ವಾತಾವರಣದಲ್ಲಿಯೇ ಸಂಗೀತವಿದ್ದಾಗ ಹಾಡು ಕಂಠಕ್ಕೆ ದೂರವಾದೀತೇ ? ಸರಿಗಮಪ ಲಿಟ್ಲ್ ಚಾಂಪ್ಸ್ ಸೀಸನ್-೧೪ರ ಸ್ಟ್ರಾಂಗ್ ಪಾರ್ಟಿಸಿಪೆಂಟ್ಸ್ ಗಳ ಪೈಕಿ ಒಬ್ಬಳು ಈ ಕೀರ್ತನ. ಭಾವ ತುಂಬಿ ಉಲಿಯುವ ಈ ಬಾಲೆ ಬೆಂಗಳೂರಿನ ಡಾಲ್ಪಿನ್ ಹೈಸ್ಕೂಲ್ ನಲ್ಲಿ ಈಗ ಎಂಟನೇ ತರಗತಿ ಮುಗಿಸುತ್ತಿದ್ದಾಳೆ. ಆದರೆ ಆಕೆಯ ಕಂಠಸಿರಿ ಕರ್ನಾಟಕದಲ್ಲಿ ಮನೆ ಮಾತಾಗಿದೆ. ವಿಚಿತ್ರ ಎಂದರೆ ಈ ಮಗುವಿನ ತಂದೆ ಚಂದ್ರು (ಕುಂಬಾರ) ಪೊಲೀಸ್ ಇಲಾಖೆಯಲ್ಲಿದ್ದಾರೆ. ಅವರಿಗೆ ಸಂಗೀತದ ಗಂಧ ಗಾಳಿಯೂ ತಿಳಿಯದು.
ತಾಯಿ ಶೋಭಾರಿಗೂ ಸಂಗೀತಕ್ಕೂ ಮಾರುದೂರ. ಹಾಗಾದರೆ ನಿನಗೆ ಸಂಗೀತ ಒಲಿದಿದ್ದಾದರೂ ಹೇಗೆ ಎಂದು ಕೇಳಿದರೆ ಕೀರ್ತನಾ “ನನ್ನ ತಾತ ಹನುಮಂತಯ್ಯ ನಾಟಕದ ಸಂಗೀತ ಮಾಸ್ಟರ್ ಆಗಿದ್ದರು. ನಮ್ಮ ದೊಡ್ಡಮ್ಮ ರಾಜೇಶ್ವರಿ ಅವರು ಹರಿಕಥೆ ಹೇಳುವುದರಲ್ಲಿ ಎತ್ತಿದ ಕೈ. ಅವರುಗಳ ಪ್ರಭಾವವೇ ನನ್ನ ಮೇಲೆ ಆಗಿದೆ. ನನಗೆ ಸಂಗೀತದ ಮೊದಲ ಗುರುವೇ ನನ್ನ ತಾತ. ಎದುರಿಗೆ ಕೂರಿಸಿಕೊಂಡು ಸಂಗೀತವನ್ನು ಧಾರೆ ಎರೆದ ಅವರೇ ನನಗೆ ದಾರಿದೀಪ.” ನಂತರದ ದಿನಗಳಲ್ಲಿ ಹಲವಾರು ಮಾಸ್ತರುಗಳು ಈಕೆಯ ಕಂಠವನ್ನು ತಿದ್ದಿ ತೀಡಿದ್ದಾರೆ. ಹಾಗಾಗಿ ಕೀಟನಾಗೆ ಕೀರ್ತನೆ ಕರಗತವಾಗಿದೆ.
ಲಿಟ್ಲ್ ಚಾಂಪ್ಸ್ ಸೀಸನ್ ೯ರಲ್ಲಿ ಈಕೆ ಸ್ಟ್ರಾಂಗ್ ಆಗಿ ಮುನ್ನುಗಿದ್ದರೂ ವಿನ್ನರ್ ಆಗದೇ ಎರಡನೇ ರನ್ನರ್ ಅಪ್ ಆಗಿ ಮುಗುಳ್ನಕ್ಕಿದ್ದಳು. ಆ ಬಗ್ಗೆ ಆಕೆಗೆ ಯಾವುದೇ ಪರಿತಾಪವಿಲ್ಲ. “ನನಗೆ ಆಗಿನ್ನೂ ಕಲಿಯುವ ಆಸಕ್ತಿ ಪ್ರಾರಂಭವಾಗಿತ್ತು. ಆದರೆ ಈಗ ಸಂಗೀತ ಕಲಿತು ಭಾಗವಹಿಸುತ್ತಿದ್ದೇನೆ. ತುಂಬಾ ಅದ್ಭುತವಾದ ಹಾಡುಗಾರರು ಕಾಂಪೀಟ್ ಮಾಡುತ್ತಿದ್ದಾರೆ. ಅದನ್ನು ಅರಿತೇ ಮನೆಯಲ್ಲಿಯೂ ಪ್ರಾಕ್ಟೀಸ್ ಮಾಡುತ್ತಿದ್ದೇನೆ. ನನಗೆ ವಿನ್ನರ್ ಆಗಬೇಕು ಎನ್ನುವುದಕ್ಕಿಂತ ಸ್ಪರ್ಧೆಯಲ್ಲಿ ಇರಬೇಕು ಎನ್ನುವ ಛಲ ಇದೆ. ಉಳಿದದ್ದು ನಮ್ಮ ಕೈಲಿಲ್ಲ” ಎಂದು ಮುಗ್ಧವಾಗಿ ಮುಗುಳ್ನಗುತ್ತಾಳೆ ಕೀರ್ತನಾ.
ಲಿಟ್ಲ್ ಚಾಂಪಿಯನ್ ನಲ್ಲಿ ಇದುವರೆಗೂ ೨೩ಕ್ಕೂ ಹೆಚ್ಚು ಹಾಡುಗಳನ್ನು ನಿರರ್ಗಳವಾಗಿ ಹಾಡಿದ್ದಾಳೆ. ಅಪರೂಪದ ಹಾಡುಗಳನ್ನು ಆಯ್ದುಕೊಂಡು ತೀರ್ಪುಗಾರರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಹಂಸಲೇಖ ಅವರಿಂದ `ಎಕ್ಸ್ ಪ್ರೆಷನ್ ಕ್ವೀನ್’ ಎಂಬ ಬಿರುದು ಪಡೆದಿರುವ ಕೀರ್ತನಾಳ ಜವಾಬ್ದಾರಿಯನ್ನು ಹೆಚ್ಚಿಸಿದೆ. ಸರಿಗಮಪ ಸೀಸನ್ 14 ಕಾರ್ಯಕ್ರಮದಲ್ಲಿ ಎಕ್ಸ್ ಪ್ರೆಶನ್ ಕ್ವೀನ್ ಎಂದು ಕರೆಸಿಕೊಂಡಿದ್ದ ಕೀರ್ತನ ಫೈನಲ್ ವೇದಿಕೆ ಏರಿದ್ದಾರೆ. ಎಲ್ಲ ನಿರೀಕ್ಷೆಯಂತೆ ತನ್ನ ಹಾಡಿನ ಮೂಲಕ ಈ ಹುಡುಗಿ ಫೈನಲ್ ಹಂತ ತಲುಪಿದ್ದಾಳೆ. ಸದ್ಯ ಸರಿಗಮಪ ಫೈನಲ್ ಗೆ ಐದು ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ವಿಶೇಷ ಅಂದರೆ ಈ ಪೈಕಿ ಆಯ್ಕೆ ಆದ ಏಕೈಕ ಹುಡುಗಿ ಕೀರ್ತನ ಆಗಿದ್ದಾರೆ. ಸೆಮಿ ಫೈನಲ್ ನಲ್ಲಿ ಅಮೋಘವಾಗಿ ಹಾಡಿದ ಕೀರ್ತನ ಅವರನ್ನು ಮಹಾಗುರು ಹಂಸಲೇಖ ನೇರವಾಗಿ ಫೈನಲ್ ಗೆ ಕಳುಹಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಸಾಧಾರಣವಾಗಿ ಹಾಡು ಹೇಳುತ್ತಿದ್ದ ಕೀರ್ತನ ಪ್ರತಿ ವಾರದಿಂದ ವಾರಕ್ಕೆ ಪಳಗುತ್ತಾ ಬಂದರು. ತನ್ನ ಸಿಹಿಯಾದ ಧ್ವನಿಯ ಮೂಲಕ ಒಂದು ಹಾಡಿನ ಅಂದವನ್ನು ಈಕೆ ಇನ್ನಷ್ಟು ಹೆಚ್ಚಿಸುತ್ತಿದ್ದರು. ಇನ್ನು ಕೀರ್ತನ ಹಂಸಲೇಖರಿಂದ ಅದೆಷ್ಟೋ ಬಾರಿ ಗೋಲ್ಡನ್ ಬಝರ್ ಪಡೆದಿದ್ದಾರೆ. ಕೀರ್ತನಾಳ ಅಕ್ಕ ಕೂಡಾ ಒಳ್ಳೆಯ ಹಾಡುಗಾರ್ತಿಯೇ. ಪರಮೇಶ್ವರ ಹೆಗ್ಡೆ ಅವರ ಬಳಿ ಹಿಂದೂಸ್ತಾನಿ ಗಾಯನ ಅಭ್ಯಾಸ ಮಾಡುತ್ತಿರುವ ಕೀರ್ತನಾ ಖ್ಯಾತ ಚಲನಚಿತ್ರ ನಿರ್ದೇಶಕ ನಾಗೇಂದ್ರ ಅವರ ಬಳಿ ಫಿಲಂ ಸಾಂಗ್ ಗಳ ಟೆಕ್ನಿಕ್ ಕಲಿತುಕೊಳ್ಳುತ್ತಿದ್ದಾಳೆ. ಹೀಗಿರುವ ಕೀರ್ತನಾ ಸರಿಗಮಪ ಲಿಟ್ಲ್ ಚಾಂಪ್ಸ್ ಗೆದ್ದು ಬರಲಿ.. ಆ ಮೂಲಕ ಎಲ್ಲರ ಮನೆ ಮಾತಾಗಲಿ..ಆಕೆಯ ಭವಿಷ್ಯ ಉಜ್ವಲವಾಗಲಿ ಎಂದು ಹಾರಿಸೋಣ.
—————————————————————————————————————————————————–