
ಮೂಡಬಿದ್ರೆ(ಕುಲಾಲ್ ವರ್ಲ್ಡ್ ಡಾಟ್ ಕಾಂ): ಎಕ್ಸಿಸ್ ಬ್ಯಾಂಕ್ ಮತ್ತು ಮ್ಯಾಕ್ಸ್ ಲೈಫ್ ಇನ್ಸೂರೆನಸ್ ಸಂಸ್ಥೆ ಮಂಗಳೂರು ಇವರು ಕೊಡಮಾಡುವ ಶಿಕ್ಷಾ ರತ್ನ ಪ್ರಶಸ್ತಿಯನ್ನು ಮೂಡಬಿದ್ರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಾದ ಮೋಹನ್ ಕುಲಾಲ್ ಹೊಸ್ಮಾರ್ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿಕ್ಷಣದ ಜೊತೆಗೆ ಇವರ ಕಲಾ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಯಿತು. ಮೋಹನ್ ಅವರು ಹೊಸ್ಮಾರು ನೆಲ್ಲಿಗುಡ್ಡೆ ಮನೆಯ ರಾಮಕೃಷ್ಣ ಮೂಲ್ಯ ಮತ್ತು ರುಕ್ಮಿಣಿ ದಂಪತಿಯ ಸುಪುತ್ರರಾಗಿದ್ದಾರೆ.
