ಪೆರ್ಡೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಪೆರ್ಡೂರು ಬುಕ್ಕಿಗುಡ್ಡೆ ಕುಲಾಲ ಸಂಘ (ರಿ.) ಇದರ ನೂತನ ಅಧ್ಯಕ್ಷರಾಗಿ ಕಾಳು ಕುಲಾಲ್ ಪೆರ್ಡೂರು ಹಾಗೂ ಪ್ರಧಾನ ಕಾರ್ಯದರ್ಶಿ ಗಣೇಶ್ ಕುಲಾಲ್ ಪಕ್ಕಾಲು ಅವರು ಆಯ್ಕೆಯಾಗಿದ್ದಾರೆ.
ಪೆರ್ಡೂರು ಬುಕ್ಕಿಗುಡ್ಡೆ ಕುಲಾಲ ಸಂಘದ ಸಭಾಭವನದಲ್ಲಿ ಸೆ.19 ರಂದು ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.
ಗೌರವಾಧ್ಯಕ್ಷರಾಗಿ ರಾಮ ಕುಲಾಲ್ ಪಕ್ಕಾಲು, ಐತು ಕುಲಾಲ್ ಕನ್ಯಾನ, ಗೌರವ ಸಲಹೆಗಾರರಾಗಿ ಕೃಷ್ಣಪ್ಪ ಕುಲಾಲ್ ಹಿರಿಯಡ್ಕ ಅವರು ನೇಮಕಗೊಂಡಿದ್ದಾರೆ.
ಉಪಾಧ್ಯಕ್ಷರಾಗಿ ಯೋಗೀಶ್ ಕುಲಾಲ್ ಬೋಳುಗುಡ್ಡೆ, ಜೊತೆ ಕಾರ್ಯದರ್ಶಿಯಾಗಿ ಅಶೋಕ್ ಕುಲಾಲ್ ವಾಂಟ್ಯಾಳ, ಕೋಶಾಧಿಕಾರಿಯಾಗಿ ಹರೀಶ್ ಕುಲಾಲ್ ಹಂದಿಬೆಟ್ಟು, ಸಂಘಟನಾ ಕಾರ್ಯದರ್ಶಿಯಾಗಿ ಕೃಷ್ಣ ಕುಲಾಲ್ ಕುಂಟಾಲ್ ಕಟ್ಟೆ, ಜೊತೆ ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷ್ ಕುಲಾಲ್ ಕುಕ್ಕೆಹಳ್ಳಿ ಅವರು ಆಯ್ಕೆಯಾಗಿದ್ದಾರೆ.
ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಂಕರ್ ಕುಲಾಲ್ ಪೆರಂಪಳ್ಳಿ, ರಾಜೇಶ್ ಕುಲಾಲ್ ಅಂಬಾಗಿಲು, ಸುಧಾಕರ್ ಕುಲಾಲ್ ಪಟ್ಲ, ಅಶೋಕ್ ಕುಲಾಲ್ ಕಂಚಿಗುಂಡಿ, ದಿನೇಶ್ ಕುಲಾಲ್ ಪೊಲ್ಯದೊಟ್ಟು, ದಿನೇಶ್ ಕುಲಾಲ್ ಪಟ್ಲ ಅವರನ್ನು ನೇಮಿಸಲಾಗಿದೆ.
ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದಿನೇಶ್ ಕುಲಾಲ್ ಪಟ್ಲ, ಕ್ರೀಡಾ ಕಾರ್ಯದರ್ಶಿಯಾಗಿ ಸಂತೋಷ್ ಕುಲಾಲ್ ಪಕ್ಕಾಲು, ಮಾಧ್ಯಮ ಕಾರ್ಯದರ್ಶಿಯಾಗಿ ಮಹಿಳಾ ಘಟಕದ ಅಧ್ಯಕ್ಷೆ ರತ್ನ ಕುಲಾಲ್ ಕುಕ್ಕೆಹಳ್ಳಿ, ಸಭಾಭವನದ ವ್ಯವಸ್ಥಾಪಕರಾಗಿ ಸುರೇಶ್ ಕುಲಾಲ್ ಗುಂಡ್ಯಡ್ಕ, ಆಂತರಿಕ ಲೆಕ್ಕ ಮೇಲ್ವಿಚಾರಕರಾಗಿ ಲಿಂಗಪ್ಪ ಕುಲಾಲ್ ಕುಕ್ಕಿಕಟ್ಟೆ ಆಯ್ಕೆಯಾಗಿದ್ದಾರೆ.