
ಮೂಡುಬಿದಿರೆ(ಕುಲಾಲ್ ವರ್ಲ್ಡ್ ಡಾಟ್ ಕಾಂ) : ಒಂಟಿಕಟ್ಟೆಯ ನಿವಾಸಿಯಾದ ತಿಲಕ್ ಕುಲಾಲ್ ರವರು ಮೊಳೆಯಲ್ಲಿ ಮಹಾಗಣಪತಿಯ ಕಲಾಕೃತಿಯನ್ನು ರಚಿಸಿ ವಿಶ್ವ ದಾಖಲೆಯನ್ನು ಮಾಡಿದ್ದಾರೆ.
ತಿಲಕ್ ಕುಲಾಲ್ ಅವರು ತಮ್ಮ ಜೊತೆಗಾರ ಅಕ್ಷಿತ್ ಅವರೊಂದಿಗೆ ಸೇರಿಕೊಂಡು ಸತತವಾಗಿ ಐದು ಗಂಟೆಯಲ್ಲಿ ಕಬ್ಬಿಣದ ಎಂಟು ಇಂಚಿನ 6,666 ಮೊಳೆಗಳನ್ನು ಉಪಯೋಗಿಸಿ ಹಲಗೆಯಲ್ಲಿ ಮಹಾಗಣಪತಿಯ ಕಲಾಕೃತಿಯನ್ನು ರಚಿಸಿದ್ದಾರೆ. ಈ ಸಾಧನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ , ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಇಂಡಿಯಾ ಮಾನ್ಯತೆ ನೀಡಿದೆ. ತಿಲಕ್ ಕುಲಾಲ್ ಅವರು ಲೀಫ್ ಆರ್ಟ್ ಮತ್ತು ಚಾರ್ ಕೋಲ್ ಆರ್ಟ್ ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಅವರು ಒಂಟಿಕಟ್ಟೆಯ ನಾಗೇಶ್ ಮತ್ತು ಪದ್ಮಿನಿ ಕುಲಾಲ್ ದಂಪತಿಯ ಸುಪುತ್ರ.