ಮಂಗಳೂರು(ಮಾ.೨೯, ಕುಲಾಲ್ ವರ್ಲ್ಡ್ ನ್ಯೂಸ್): ಕುಲಾಲ ಸಮುದಾಯದ ಇಬ್ಬರು ಯುವ ನಿರ್ಮಾಪಕರು ಹಾಗೂ ಯುವ ನಾಯಕ ನಟನನ್ನೊಳಗೊಂಡ ಜಿ.ವಿ ಕ್ರೀಯೇಶನ್ಸ್ ನಿರ್ಮಾಣದ `ಇಂಚನೆ ಲೈಫ್ ಮಾರ್ರೆ’ ಟೆಲಿ ಚಿತ್ರವು ಮಾರ್ಚ್ 24ರಂದು ಮಂಗಳೂರು ಬಂಟ್ಸ್ ಹಾಸ್ಟೆಲ್ ಸುಜೀರು ಸಿ.ವಿ ನಾಯಕ್ ಹಾಲ್ ನಲ್ಲಿ ಬಿಡುಗಡೆಗೊಂಡಿತು.
ಯುವ ನಿರ್ದೇಶಕ ಪವನ್ ಕುಮಾರ್ ನಿರ್ದೇಶನದಲ್ಲಿ ಹಾಗೂ ಉದಯಶಂಕರ್ ಕುಲಾಲ್, ಗೌರಿಶಂಕರ್ ಕುಲಾಲ್, ಸುಶಾಂತ್ ಪೂಜಾರಿ ಮತ್ತು ಮುಸ್ತಾಫ ಪೆರ್ಲಾಪು ಇವರ ನಿರ್ಮಾಣದಲ್ಲಿ ನಿರ್ಮಾಣವಾಗಿರುವ ಇಂಚೆನೆ ಲೈಫ್ ಮಾರ್ರೆ ತುಳು ಟೆಲಿ ಫಿಲ್ಮ್ ಚಿತ್ರದ ಮೂಲಕ ಹಲವಾರು ಹೊಸ ಕಲೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಹಾಗೂ ಯುವ ಜನತೆಗೆ ಒಂದು ಸಂದೇಶವನ್ನು ನೀಡುವ ಉದ್ದೇಶ ನಮ್ಮದೆಂದು ಚಿತ್ರ ತಂಡ ತಿಳಿಸಿದೆ.
ಚಿತ್ರದ ನಾಯಕ ನಟನಾಗಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಭರವಸೆಯ ಪ್ರತಿಭಾನ್ವಿತ ನಟ ಚಂದ್ರೋದಯ ಕುಲಾಲ್ ನಟಿಸಿದ್ದಾರೆ.“ಇಂಚನೆ ಲೈಫ್ ಮಾರ್ರೆ”ಎಂಬ ತುಳು ಕಿರು ಚಿತ್ರ ಬಿಡುಗಡೆ ಸಮಾರಂಭದಲ್ಲಿ ಸಚಿವ ಶ್ರೀ.ಬಿ ರಮಾನಾಥ ರೈ ಭಾಗವಹಿಸಿದರು.
ನಂತರ ಮಾತನಾಡಿದ ಸಚಿವ ರೈ ತುಳು ಭಾಷೆಯ ಮೇಲೆ ಅಭಿಮಾನವಿರುವ ನಾವು ತುಳು ಸಿನಿಮಾಗಳನ್ನು ರಚಿಸುತ್ತಿದ್ದೇವೆ. ಈ ಸಿನಿಮಾ ಯಶಸ್ವಿಯಾಗಲಿ.ತುಳು ಸಿನಿಮಾ ವೀಕ್ಷಿಸುವವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅದನ್ನು ಬೆಳೆಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ,ರಾಜ್ಯ ಗೇರು ಅಭಿವೃದ್ಧಿ ನಿಗಮದ ಅದ್ಯಕ್ಷ ಬಿ.ಎಚ್ ಖಾದರ್ ಉಪಸ್ಥಿತರಿದ್ದರು.