ಕುಂದಾಪುರ : ಇಲ್ಲಿನ ಕುಂದಪ್ರಭ ಟ್ರಸ್ಟ್, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಆಶ್ರಯದಲ್ಲಿ ಪ್ರತಿವರ್ಷ ನೀಡುತ್ತಿರುವ ಪುಟ್ಟಣ್ಣ ಕುಲಾಲ್ ಯುವಕವಿ ಪ್ರಶಸ್ತಿ ಪ್ರದಾನ ಹಾಗೂ 4ನೇ ವರ್ಷದ ಉಡುಪಿ ಜಿಲ್ಲಾ ಯುವಕವಿ ಸಮ್ಮಿಲನ ಸಮಾರಂಭ ನವೆಂಬರ್ ೪ರಂದು ನಡೆಯಲಿದೆ.
ಕುಂದಾಪುರದ ಸ ಪೂ ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ನಡೆಯಲಿರುವ ಸಮಾರಂಭದ ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಪುಂಡಲೀಕ ಮರಾಟೆ ನಡೆಸಲಿದ್ದಾರೆ. ಇತರ ಅತಿಥಿಗಳಾಗಿ ಸುಬ್ರಹ್ಮಣ್ಯ ಜೋಷಿ, ವಸಂತ ಕುಮಾರ್ ಪೆರ್ಲ, ಡಾ. ಭವಾನಿ ಆರ್ ರಾವ್, ಕೋ ಶಿವಾನಂದ್ ಕಾರಂತ, ವಿಶ್ವನಾಥ ಕರಬ ಭಾಗವಹಿಸಲಿದ್ದಾರೆ ಎಂದು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಅಣ್ಣಯ್ಯ ಕುಲಾಲ್ ಹಾಗೂ ಕುಂದಪ್ರಭ ಪತ್ರಿಕೆಯ ಯು ಎಸ್ ಶೆಣೈ ತಿಳಿಸಿದ್ದಾರೆ.