ಕುಂದಾಪುರ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಇಲ್ಲಿನ ಸ್ಟೆಪ್ ಆಂಡ್ ಡೀಲ್ಸ್ ಸಂಸ್ಥೆ ಹಾಗೂ ಲಿಖಿತ್ ಕುಂದಾಪುರ ಸಹಯೋಗದಲ್ಲಿ ಜಟ್ಟಿ ರೆಸಾರ್ಟ್ನಲ್ಲಿ ನಡೆದ ಮಿಸ್- ಕುಂದಾಪುರ 2026 ಸೌಂದರ್ಯ ಸ್ಪರ್ಧೆಯಲ್ಲಿ ಪೂರ್ವಿ ಕುಲಾಲ್ ವಿಜೇತರಾಗಿದ್ದಾರೆ.
ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ ‘ಮಿಸ್ಟರ್ ಆಂಡ್ ಮಿಸ್ ಟೀನ್ ಕುಂದಾಪುರ’ ಸ್ಪರ್ಧೆಯನ್ನು ಉದ್ಘಾಟಿಸಿದರು. ಉದ್ಯಮಿ ಸುಧೀರ್ ಕೆ.ಎಸ್., ಶರಧ್ ಶಿಂದೆ, ಇಂಡಿಯಾ ಮಿಸ್ಸಿನ್ ವರ್ಲ್ಡ್ ವೈಡ್ ವಿನ್ನರ್ ಲಿಖಿತ್ ಕುಂದಾಪುರ, ಕಾಂತಾರ ನಟರಾದ ಪ್ರದೀಪ್ ಶೆಟ್ಟಿ, ರಕ್ಷಿತ್ ರಾಮಚಂದ್ರ, ಸಾಯಿ ಲೀಲಾ, ಜಾದೂಗಾರ ಸತೀಶ್ ಹೆಮ್ಮಾಡಿ ಜಾದೂಗಾರ, ಸ್ಟೆಪ್ ಆನ್ ಡೀಲ್ ಸನಿಫ್ ಸೋನು, ಗಣೇಶ್ ಪೂಜಾರಿ ಉಪಸ್ಥಿತರಿದ್ದರು. ವಿಜೇತರಾದ ಪೂರ್ವಿ ಕುಲಾಲ್ ಅವರು ಹಿರಿಯಡ್ಕದ ‘ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್’ನ ೯ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾರೆ. ಇವರು ಪೆರ್ಡೂರಿನ ಏಕನಾಥ ಕುಲಾಲ್ ಮತ್ತು ಗಾಯತ್ರಿ ಕುಲಾಲ್ ದಂಪತಿಯ ಪುತ್ರಿಯಾಗಿದ್ದಾರೆ. ಪೂರ್ವಿ ಅವರ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

