ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : `ಯುವ ಮೂಲ್ಯೆರ್’ ಮಂಗಳೂರು ಇದರ ವತಿಯಿಂದ ಕ್ರೀಡಾಲೋಕದಲ್ಲಿ ಹೊಸ ಸಂಚಲನ ಮೂಡಿಸಲು ಕುಲಾಲ ಸಮುದಾಯದ ಯುವ ಪ್ರತಿಭೆಗಳಿಗಾಗಿ ‘ಕುಲಾಲ್ಸ್ ಬ್ಯಾಡ್ಮಿಂಟನ್ ಲೀಗ್’ (KBL) ಸೀಸನ್ -೧’ ರ ರೋಮಾಂಚಕಾರಿ ಕ್ರೀಡಾಕೂಟವು ಅತ್ಯಂತ ಅದ್ಧೂರಿಯಾಗಿ ಆಯೋಜಿಸಲ್ಪಟ್ಟಿದೆ.
ಕ್ರೀಡಾಸಕ್ತರು ತಮ್ಮ ಬ್ಯಾಡ್ಮಿಂಟನ್ ಕೌಶಲ್ಯವನ್ನು ಪ್ರದರ್ಶಿಸಲು ಮತ್ತು ಕಣದಲ್ಲಿ ಗೆಲುವಿನ ನಗೆ ಬೀರಲು ಇದೊಂದು ಸುವರ್ಣಾವಕಾಶವಾಗಿದ್ದು, ಆದಿತ್ಯವಾರ, ಡಿಸೆಂಬರ್ 13. 2026ರಂದು ಉರ್ವಾ ಒಳಾಂಗಣ ಕ್ರೀಡಾಂಗಣದಲ್ಲಿ ಈ ಮಹತ್ವದ ಪಂದ್ಯಾವಳಿಯು ಜರುಗಲಿದೆ. ಕುಲಾಲ ಸಮುದಾಯದ ಕ್ರೀಡಾಪಟುಗಳು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದ್ದು, ಆಸಕ್ತರು ಸಿದ್ದಾರ್ಥ್ ಮೂಲ್ಯ (8951795968 ) ಅಥವಾ ಕಿರಣ್ ಅಟ್ಲೂರ್ ( 8277558458) ಅವರನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಸಮಸ್ತ ಕ್ರೀಡಾಭಿಮಾನಿಗಳು ಈ ಐತಿಹಾಸಿಕ ಕ್ರೀಡಾಕೂಟಕ್ಕೆ ಸಾಕ್ಷಿಯಾಗುವ ಮೂಲಕ ಯಶಸ್ವಿಗೊಳಿಸಬೇಕಾಗಿ ಸಂಘಟಕರು ವಿನಂತಿ ಮಾಡಿದ್ದಾರೆ.

