(ಕುಲಾಲ್ ವರ್ಲ್ಡ್ ಡಾಟ್ ಕಾಮ್)
ನಮ್ಮ ಟಿ.ವಿಯಲ್ಲಿ ವಿಜೆಯಾಗಿ, ರೆಡ್ಎಫ್ಎಂನಲ್ಲಿ ಆರ್ಜೆಯಾಗಿ ಕಾಣಿಸಿಕೊಂಡಿದ್ದ ಕುಲಾಲ ಸಮುದಾಯದ ಅನುರಾಗ್ ಬಂಗೇರ ಸದ್ಯ ಕೋಸ್ಟಲ್ವುಡ್ನಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಪ್ರತಿಭೆ. ಅವರು ಕೋಸ್ಟಲ್ವುಡ್ ಪಯಣ, ಮುಂದಿನ ಜೀವನ ಕುರಿತು ವೆಬ್ ಪೋರ್ಟಲ್ ಜೊತೆ ಮನದಾಳದ ಮಾತುಗಳನ್ನು ಹಂಚಿಕೊಂಡದ್ದು ಹೀಗೆ..
ಅವಕಾಶ ಮುಂಗಾರು ಆಗಿ `ಬರ್ಸ’ : ನಾನು ಸಿನಿಮಾಗಳಿಂದ ಮೊದಲಿನಿಂದಲೂ ಪ್ರಭಾವಿತನಾಗಿದೆ. ನಮ್ಮ ಟಿ.ವಿಯಲ್ಲಿ ಮಾಡುತ್ತಿದ್ದ ನಿರೂಪಣೆ ನನಗೆ ಸಿನಿಮಾ ರಂಗ ಪ್ರವೇಶಿಸಲು ದಾರಿ ಮಾಡಿ ಕೊಟ್ಟಿತು. ಕೋಸ್ಟಲ್ವುಡ್ನ ಜನರೊಂದಿಗೆ ಸಂಪರ್ಕ ಬೆಳೆಸುವಲ್ಲಿಯೂ ಇದು ಸಹಕಾರಿಯಾಯಿತು. ದೇವದಾಸ್ ಕಾಪಿಕಾಡ್ ಅವರ ಬರ್ಸ ಸಿನಿಮಾದಲ್ಲಿ ನೆಗೆಟಿವ್ ಪಾತ್ರ ಮಾಡಲು ಮೊದಲು ಅವಕಾಶ ಸಿಕ್ಕಿ, ಈ ಅವಕಾಶ ಕೋಸ್ಟಲ್ವುಡ್ನಲ್ಲಿ ನೆಲೆಯೂರುವಂತೆ ಮಾಡಿತು.
ಅರ್ಜುನ್-ಅಮೃತಾ ಪ್ರೀತಿಗೆ ಸಾಥ್: ಈ ಸಿನಿಮಾದಲ್ಲಿ ನಾಯಕ ಅನೂಪ್ ಸಾಗರ್ ಹಾಗೂ ನಾಯಕಿ ಆರಾಧ್ಯಾ ಶೆಟ್ಟಿಯವರ ಸ್ನೇಹಿತನಾಗಿ ಅಭಿನಯಿಸಿದ್ದೇನೆ. ನಾಯಕ ಹಾಗೂ ನಾಯಕಿಯರಲ್ಲಿ ಪ್ರೇಮಾಂಕುರವಾಗಲು ನಾನು ಪ್ರಮುಖ ಪಾತ್ರವಹಿಸುತ್ತೇನೆ. ಈ ಸಿನಿಮಾದಲ್ಲಿ ನನ್ನದೊಂದು ಇಂಟರೆಸ್ಟಿಂಗ್ ಪಾತ್ರ.
ಕಾಪಿಕಾಡ್ ತಂಡದೊಂದಿಗೆ `ಅರೆಮರ್ಲೆ’ ಸಿನಿಮಾ:
ನಾನು ಬಾಲ್ಯದಿಂದಲೂ ದೇವದಾಸ ಕಾಪಿಕಾಡ್ ಅವರ ಅಭಿಮಾನಿ. ಅರ್ಜುನ್ ಕಾಪಿಕಾಡ್ ಅವರು ಉತ್ತಮ ವ್ಯಕ್ತಿ. ತಂದೆ-ಮಗನ ಕಾಂಬಿನೇಷನ್ನಲ್ಲಿ ಮತ್ತೊಮ್ಮೆ ನಟಿಸುತ್ತಿರುವುದು ನನಗೆ ಸಂತಸತಂದಿದೆ. ಕಾಪಿಕಾಡ್ ಅವರ ಅರೆ ಮರ್ಲೆ ಸಿನಿಮಾದಲ್ಲಿ ಎರಡನೇ ಪ್ರಮುಖ ಪಾತ್ರವನ್ನು ನಾನು ನಿಭಾಯಿಸಿದ್ದೇನೆ.
ನಾಯಕ ನಟನಾಗಿ ಅನುರಾಗ್: ಈ ಕುರಿತು ಮಾತುಕತೆ ನಡೆಯುತ್ತಿದೆ. ವರ್ಷಾಂತ್ಯದಲ್ಲಿ ತುಳುನಾಯಕನಾಗುವ ಕುರಿತು ತಿಳಿಸುತ್ತೇನೆ.
ಕಷ್ಟವಾದರೂ ಇಷ್ಟವಾಗುವ ನಿರ್ದೇಶನ:
ನಿರ್ದೇಶಕ ಎನ್ನುವುದು ಸಮಗ್ರ ನಾಯಕತ್ವ. ಇದು ಅತ್ಯಂತ ಕಷ್ಟಕರವಾದ ಕೆಲಸ. ಆದರೂ ನಿರ್ದೇಶಕನಾಗುವ ಹಂಬಲವಿದೆ. ಆದರೆ ಶೀಘ್ರದಲ್ಲಿ ಈ ಕುರಿತು ನಾನು ನಟನೆಯಲ್ಲಿ ಮತ್ತಷ್ಟು ಪಳಗಬೇಕು. ಇಲ್ಲಿ ಪಡೆಯುವ ಅಗಾಧ ಅನುಭವ ಹಾಗೂ ಪ್ರಚಾರ ನಿರ್ದೇಶನಕ್ಕೆ ಸುಗಮ ಹಾದಿಯನ್ನು ಕಲ್ಪಿಸಬಹುದು. ವಿಸ್ಮಯ ವಿನಾಯಕ್ ನನಗೆ ಕೋಸ್ಟಲ್ವುಡ್ ಗುರು. ಸೂರಜ್ ಕೂಡ ನಟನೆಗೆ ಸಹಕರಿಸಿದ್ದಾರೆ.
(news courtesy : seeandsay.com)