ಮಂಗಳೂರು(ಜುಲೈ. ೩೦): `ಕುಲಾಲ್ ವರ್ಲ್ಡ್’ ಎಂಬ ಸಮಾನಮನಸ್ಕ ಯುವಕರನ್ನು ಹೊಂದಿರುವ ವಾಟ್ಸಪ್ ಗ್ರೂಪಿನ ಸದಸ್ಯರು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಕಾಸರಗೋಡು ತಾಲೂಕು ಮೀಯಪದವು ಬೆಣ್ಣೆಮನೆ ನಿವಾಸಿ ಜಯರಾಜ್ ಮೂಲ್ಯರಿಗೆ ಅವರಿಗೆ ಒಟ್ಟು 59 ಸಾವಿರ ರೂ.ಸಂಗ್ರಹಿಸಿ ನೀಡುವ ಮೂಲಕ ಅವರ ನೋವಿಗೆ ಆಸರೆಯಾಗಿದ್ದಾರೆ. ಆ ಮೂಲಕ ನಮ್ಮಲ್ಲಿ ಮಾನವೀಯತೆ ಇನ್ನೂ ಜೀವಂತವಿದೆ ಎಂದು ತೋರಿಸಿಕೊಟ್ಟಿದ್ದಾರೆ.
`ಕುಲಾಲ್ ವರ್ಲ್ಡ್’ ವಾಟ್ಸಪ್ ಗ್ರೂಪಿನ ನಿರ್ವಾಹಕರಾದ ರಂಜಿತ್ ಕುಮಾರ್ ಮೂಡಬಿದ್ರೆ ಹಾಗೂ ಹೇಮಂತ್ ಕುಮಾರ್ ಕಿನ್ನಿಗೋಳಿ ಮುಂತಾದವರ ನೇತೃತ್ವದಲ್ಲಿ ಜಯರಾಜ್ ಅವರ ಚಿಕಿತ್ಸೆಗೆ ಹಣ ಸಂಗ್ರಹ ನಡೆಸಲಾಗಿತ್ತು. ಇದಕ್ಕೆ ನೂರಾರು ಊರ-ಪರವೂರ ಹೃದಯವಂತ ದಾನಿಗಳು ಸ್ಪಂದಿಸಿದ್ದರು. ಸಂಗ್ರಹವಾದ ಹಣವನ್ನು ಜುಲೈ ೩೦ರಂದು ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಜಯರಾಜ್ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ವೆಬ್ ಸೈಟ್ ಸಂಪಾದಕ ದಿನೇಶ್ ಬಂಗೇರ ಇರ್ವತ್ತೂರು, `ಕುಲಾಲ್ ವರ್ಲ್ಡ್’ ವಾಟ್ಸಪ್ ಗ್ರೂಪಿನ ನಿರ್ವಾಹಕರಾದ ಹೇಮಂತ್ ಕುಮಾರ್ ಕಿನ್ನಿಗೋಳಿ, ರಂಜಿತ್ ಕುಮಾರ್ ಮೂಡಬಿದ್ರೆ , ಸದಸ್ಯರಾದ ರಮೇಶ್ ಕುಮಾರ್ ವಗ್ಗ, ಅರುಣ್ ಕುಲಾಲ್ ಮೂಳೂರು, ನಿಶಾಂತ್ ಕುಲಾಲ್ ಮೂಳೂರು, ರಿತೇಶ್ ಕುಲಾಲ್ ಒಮಾನ್, ರತೀಶ್ ಕುಲಾಲ್ ಮಿತ್ತಬೈಲ್, ರಾಜೇಶ್ ಮುಗುಳಿ ಮುಂತಾದವರು ಉಪಸ್ಥಿತರಿದ್ದರು.
ಕಾಸರಗೋಡು ತಾಲೂಕು ಮೀಯಪದವು ಬೆಣ್ಣೆಮನೆ ನಿವಾಸಿ ದಿ. ಗೋಪಾಲ ಮೂಲ್ಯ- ಗಿರಿಜಾ ದಂಪತಿಯ ಪುತ್ರ ಜಯರಾಜ್ ಅವರ ದಯನೀಯ ಸ್ಥಿತಿ ಕುರಿತು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಮಗನ ಎರಡೂ ಕಿಡ್ನಿ ವೈಫಲ್ಯ : ಸಹಾಯಕ್ಕಾಗಿ ತಾಯಿಯ ಮೊರೆ’ ಎಂಬ ಶಿರೋನಾಮೆಯಲ್ಲಿ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿರುವ ಅನೇಕ ದಾನಿಗಳು ಹಣ ಸಹಾಯ ನೀಡಿದ್ದು, ಜಯರಾಜ್ ಅವರ ಬ್ಯಾಂಕ್ ಖಾತೆಗೆ ನೇರವಾಗಿ ದೋಹಾ ಕತಾರ್ ಕುಲಾಲ ಮಿತ್ರರು 25 ಸಾವಿರ ರೂ. ಹಾಗು ಇತರ ಕೆಲ ದಾನಿಗಳು ೯ ಸಾವಿರ ಹಣ ಕಳಿಸಿದ್ದರು. ಅಲ್ಲದೆ ಇತರ ವಾಟ್ಸಾಪ್ ಬಳಗದ ಸದಸ್ಯರೂ ಧನ ಸಹಾಯವನ್ನು ನೀಡಿದ್ದಾರೆ ಎಂದು ಜಯರಾಜ್ ಅವರು ತಿಳಿಸಿದ್ದಾರೆ.
ಜಯರಾಜ್ ಅವರ ಕಿಡ್ನಿ ಪ್ಲಾಂಟೇಷನ್ ಗಾಗಿ O+ (ಓ ಪಾಸಿಟಿವ್) ರಕ್ತದ ಗುಂಪಿನ ಕಿಡ್ನಿಯ ಅವಶ್ಯಕತೆ ಇದೆ. ಹೀಗಾಗಿ ಸಾರ್ವಜನಿಕರ ನೆರವು ಯಾಚಿಸುತ್ತಿದ್ದಾರೆ. ಅವರ ಚಿಕಿತ್ಸೆಗೆ ಧನ ಸಹಾಯದ ಅಗತ್ಯವಿದೆ. ಸಹಕರಿಸುವ ದಾನಿಗಳು ಮಂಜೇಶ್ವರದ ಕೆಳಗಿನ ಬ್ಯಾಂಕ್ ಖಾತೆಗೆ ಹಣ ಕಳಿಸಿ ಸಹಕರಿಸಬಹುದು.
Jayaraj B,
Syndicate Bank Manjeshwar Branch,
Kasaragod Dist.
S.B A/c No: 42122250001645, IFSC Code: SYNB0004212
Mobile : 8943444045