ಉಡುಪಿ(ಜೂ.೦೫, ಕುಲಾಲ್ ವರ್ಲ್ಡ್ ನ್ಯೂಸ್): ಯಕ್ಷ ಗುರು ಐರೋಡಿ ಮಂಜುನಾಥ್ ಕುಲಾಲ್ ಸಾರಥ್ಯದ ಗಜಮುಖ ಹರಿಹರ ಯಕ್ಷಗಾನ ಕಲಾವೇದಿಕೆ ಯಡ್ತಾಡಿ ಇದರ ಪ್ರಥಮ ವರ್ಷದ ವಾರ್ಷಿಕೋತ್ಸವ ಇದೇ ಜುಲೈ 9 ಬಾನುವಾರ ಮಧ್ಯಾಹ್ನ 2 ಗಂಟೆಯಿಂದ ಬಾರಕೂರು ನ್ಯಾಷನಲ್ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜರುಗಲಿದೆ.
ನಿವೃತ್ತ ಪ್ರಾಂಶುಪಾಲ ಸೀತರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವಿಶ್ರಾಂತ ಪ್ರಾಂಶುಪಾಲ ಸಾಹಿತಿ ಬಿ. ಎಮ್ ಸೋಮಯಾಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಯಕ್ಷಗಾನ ಬಯಲಾಟ ಅಕೆಡಮಿ ಸದಸ್ಯರಾದ ಕಿಶನ್ ಹೆಗ್ಡೆ ಪಳ್ಳಿ, ಯಕ್ಷ ವಿಮರ್ಶಕ ಉದಯ್ ಕುಮಾರ್ ಶೆಟ್ಟಿ, ಅಂಕಣಕಾರ ಆರ್ ಎನ್ ನಾಯಕ್, ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಐರೋಡಿ ಗೋವಿಂದಪ್ಪ ಇನ್ನಿತರ ಪ್ರಮುಖ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ಹರಿಹರ ಯಕ್ಷಗಾನ ಕಲಾವೇದಿಕೆಯ ವಿದ್ಯಾರ್ಥಿಗಳಿಂದ ಪೂರ್ವರಂಗ ಯಕ್ಷ ಪ್ರದರ್ಶನ ನೆಡೆಯಲಿದೆ. ನಂತರ ಕಲಾವೇದಿಕೆಯ ಸುಮಾರು ನಲವತ್ತಕ್ಕೂ ಅಧಿಕ ವಿದ್ಯಾರ್ಥಿಗಳಿಂದ ವೈಷ್ಣವ ಸಂಪನ್ನ, ಕರ್ಣ ನಂದನ, ವರಾನ್ವೇಷಣಾ ಯಕ್ಷಗಾನ ಅಖ್ಯಾನ ಪ್ರದರ್ಶನಗೊಳ್ಳಲಿದೆ. ಸಮಸ್ತ ಯಕ್ಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಲಾವೇದಿಕೆಯ ನಿರ್ದೇಶಕರು ಯಕ್ಷಗುರು ಐರೋಡಿ ಮಂಜುನಾಥ್ ಕುಲಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.