ಪುತ್ತೂರು:(ಜೂ.೦೪, ಕುಲಾಲ್ ವರ್ಲ್ಡ್ ನ್ಯೂಸ್): ಪ್ರತಿಭೆ ಎಂಬುವುದು ನಮ್ಮ ರಕ್ತದಿಂದ ಬಂದಿರುವಂತದ್ದು, ಅದನ್ನು ಮುಂದುವರಿಸಿಕೊಂಡು ಹೋದಲ್ಲಿ ಮಾತ್ರ ಅದಕ್ಕೊಂದು ಹಾದಿ ಸಿಗಬಹುದು. ಅದೇಷ್ಟೋ ಪ್ರತಿಭೆಗಳಿಗೆ ಇಂದಿಗೂ ಸರಿಯಾದ ಮಾರ್ಗದರ್ಶನ ಸಿಗುತ್ತಿಲ್ಲ . ಅವರು ನಾಲ್ಕು ಗೋಡೆಯ ಮಧ್ಯೆಯೇ ತಮ್ಮ ಕೌಶಲ್ಯವನ್ನು ಪ್ರದರ್ಶಿಸುತ್ತಿರುತ್ತಾರೆ. ಇಲ್ಲಿ ಪರಿಚಯ ಮಾಡಿಕೊಡುತ್ತಿರುವ ಪ್ರತಿಭೆ ಬದಿಯಡ್ಕ ಗ್ರಾಮದ ಬೆಳಿಂಜ ನಿವಾಸಿಗಳಾದ ಕೊರಗಪ್ಪ ಮೂಲ್ಯ ಹಾಗೂ ಪುಷ್ಪಲತ ದಂಪತಿಗಳ ಸುಪುತ್ರ ಸಂದೀಪ್ ಕುಲಾಲ್.
ಚಿತ್ರಕಲಾ ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಚಿತ್ರ ಬಿಡಿಸುವ ಸಂದೀಪ್ ತನ್ನ ಪ್ರಾಥಮಿಕ ಶಿಕ್ಷಣವನ್ನು ಬೆಳಿಂಜ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ಎಡನೀರು ಮತ್ತು ಉನ್ನತ ಶಿಕ್ಷಣವನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪೂರೈಸಿರುತ್ತಾರೆ. ಬಾಲ್ಯದಿಂದಲ್ಲೆ ಚಿತ್ರ ಕಲೆಯ ಮೇಲಿನ ಆಸಕ್ತಿಯು ಇಂದಿಗೂ ಕೈ ಬಿಡದೆ ಮುಂದುವರಿಸಿಕೊಂಡು ಸಾಗುತ್ತಿದ್ದಾರೆ. ಜೊತೆಗೆ ಯಕ್ಷಗಾನ, ವೃದಂಗ ಹವ್ಯಾಸಿಯಾಗಿರುವ ಇವರು, ತನ್ನ ಪಿ.ಯು. ಸಿ ಶಿಕ್ಷಣದ ಸಮಯದಲ್ಲಿ ಚಿತ್ರಕಲಾ ಸ್ವರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ “ಎ” ಗ್ರೇಡ್ ಪಡೆದುಕೊಂಡಿದ್ದಾರೆ.
ಗುರುವಿಲ್ಲದೆ , ಏಕಲವ್ಯನಂತೆ ಸತತ ಸ್ವ ಪರಿಶ್ರಮದಿಂದಲೆ ಕಲಿತ ಕಲೆಯು, ಇಂದು ಮೈಗಟ್ಟಿಕೊಂಡಿದ್ದು ಎಲ್ಲಾ ರೀತಿಯ ಚಿತ್ರಗಳನ್ನು ಅದ್ಭುತ ರೀತಿಯಲ್ಲೀ ಬಿಡಿಸುತ್ತಾರೆ. ಆಯಿಲ್ ಪೈಟಿಂಗ್, ಮುಂತಾದ ಅನೇಕ ಬಗೆಯ ಪೈಟಿಂಗ್ ಗಳನ್ನೂ ಬಿಡಿಸುವ ಸಂದೀಪ್ ಕುಲಾಲ್ ರವರಿಗೆ ಸೂಕ್ತ ವೇದಿಕೆಗಳು ಸಿಗಲಿ ಎಂಬುವುದೇ ನಮ್ಮ ಆಶಯ.
ಬರಹ: ಶೇಖರ್ ಬೆಳಾಲ್