ಇದು ಸೈಕಲ್ ರಿಕ್ಷಾ ತುಳಿದು ಜೀವನ ನಡೆಸುವ ವ್ಯಕ್ತಿಯೊಬ್ಬರ ಪುತ್ರನ ಯಶೋಗಾಥೆ. ಈ ಹುಡುಗನ ಹೆಸರು ಲಕ್ಷ್ಮಣ ಕುಂಬಾರ. ವಯಸ್ಸು ೧೨ ವರ್ಷ. ಛತ್ತೀಸ್ ಗಢ ರಾಯಪುರದ ಸರಕಾರೀ ಶಾಲೆಯೊಂದರ ಒಂಭತ್ತನೇ ತರಗತಿ ವಿದ್ಯಾರ್ಥಿ. ಸೋನಿ ಟಿವಿಯಲ್ಲಿ ಪ್ರಸಾರವಾದ ಸೂಪರ್ ಡಾನ್ಸರ್ ಸೂಪರ್ ಹಿಟ್ ಕಾರ್ಯಕ್ರಮದಲ್ಲಿ ತನ್ನ ಅದ್ಭುತ ಡಾನ್ಸ್ ಕೌಶಲ್ಯ ಪ್ರದರ್ಶಿಸುವ ಮೂಲಕ ದೇಶ-ವಿದೇಶಗಳ ನೋಡುಗರನ್ನು ನಿಬ್ಬೆರಗಾಗಿಸಿದ ಹುಡುಗ ಲಕ್ಷ್ಮಣ್.
ಲಕ್ಷ್ಮಣ್ ತಂದೆ ಸೀತಾರಾಮ ಕುಂಬಾರ
ವಿಶೇಷವೆಂದರೆ ಕಡು ಬಡತನದಲ್ಲಿರುವ ಈತನ ಹೆತ್ತವರಿಗೆ ಈತನ ಪ್ರತಿಭೆ ಬಗ್ಗೆ ಗೊತ್ತೇ ಇರಲಿಲ್ಲ. ಮಾತ್ರವಲ್ಲ ದೇಶವೇ ಈತನ ಡಾನ್ಸ್ ಕುರಿತು ಮಾತನಾಡುತ್ತಿದ್ದರೆ, ಈತನ ಡಾನ್ಸನ್ನು ಟೀವಿಯಲ್ಲಿ ನೋಡಿರಲೇ ಇಲ್ಲವಂತೆ!
ತಳ್ಳು ರಿಕ್ಷಾ ಚಾಲಕ ಸೀತಾರಾಮ ಕುಂಬಾರ ಎಂಬವರ ಪುತ್ರನಾದ ಲಕ್ಷ್ಮಣ್ , ತನ್ನ ನೃತ್ಯ ಶಿಕ್ಷಕ ಸುನಿಲ್ ರಾವ್ ಅವರ ಪ್ರೋತ್ಸಾಹದೊಂದಿಗೆ ಸೋನಿ ಟೀವಿ ರಿಯಾಲಿಟಿ ಶೋಗೆ ಆಗಮಿಸಿ ತನ್ನ ಮೊದಲ ಆಡಿಷನ್ ನಲ್ಲೇ ಅದ್ಭುತ ಪರ್ಫಾರ್ಮೆನ್ಸ್ ಮೂಲಕ ಜಡ್ಜ್ ಗಳನ್ನು ದಂಗಾಗಿಸಿದ್ದ. ಆಗಮಿಸಿದ್ದ ಒಟ್ಟು ಸುಮಾರು ನಾಲ್ಕು ಲಕ್ಷ ಸ್ಪರ್ಧಿಗಳನ್ನು ಹಿಂದಿಕ್ಕೆ ಅಂತಿಮ ಸೂಪರ್ ಸಿಕ್ಸ್ ಹಂತಕ್ಕೆ ತಲುಪಿದ ಪೋರ.
ಕೊರಿಯೋಗ್ರಾಫರ್ ಸುನಿಲ್ ರಾವ್
“ಐದನೇ ವಯಸ್ಸಿನಲ್ಲೇ ಲಕ್ಷ್ಮಣ್ ತನ್ನ ವಿಶಿಷ್ಟ ಶೈಲಿ ಡಾನ್ಸ್ ಮೂಲಕ ನನ್ನನ್ನು ಆಕರ್ಷಿಸಿದ್ದ. ಆ ಬಳಿಕ ಈತನನ್ನು ನನ್ನ ಬಳಿಯೇ ಇರಿಸಿಕೊಂಡು ವಿಶೇಷ ತರಬೇತಿ ನೀಡಿದ್ದು, ಈತನ ನೃತ್ಯ ಶೈಲಿಯನ್ನು ಇತರ ಯಾರೂ ಮಾಡಲು ಸಾಧ್ಯ ಇಲ್ಲ. ಈಗ ಡಾನ್ಸ್ ನಲ್ಲಿ ನನಗೇ ತಿಳಿಸಿಕೊಡುವಷ್ಟರವರೆಗೆ ಬೆಳೆದಿದ್ದಾನೆ” ಎಂದು ಲಕ್ಷ್ಮಣ್ ಅವರ ಕೊರಿಯೋಗ್ರಾಫರ್ ಸುನಿಲ್ ಹೆಮ್ಮೆಯಿಂದ ಹೇಳುತ್ತಾರೆ.
kulalworld.com