ಮಂಗಳೂರು : ಕುಲಾಲ ಸಮುದಾಯದ ಉದಯೋನ್ಮುಖ ಪ್ರತಿಭೆ ರಂಜಿತ್ ಕುಲಾಲ್ ಬಜಾಲ್ ಮತ್ತೊಂದು ಹೊಸ ತುಳು ಕಿರುಚಿತ್ರ ಬಿಡುಗಡೆಯ ತಯಾರಿಯಲ್ಲಿದ್ದಾರೆ. ಚಿತ್ರದ ಹೆಸರು “ಕರ್ಮ”.
ಈ ಚಿತ್ರದಲ್ಲಿ ಒಂದು ಘಟನೆಯನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಲಾಗಿದೆ. ನಮ್ಮ ದೇಶದಲ್ಲಿ ಪ್ರತಿ ನಿಮಿಷಗೊಂದು ರಸ್ತೆ ಅಪಘಾತ ಗಳು ನಡೆದು ಹಲವು ಸಾವು ನೋವು ಸಂಭವಿಸುತ್ತದೆ. ಅಪಘಾತ ನಡೆಯುವ ಸ್ಥಳದಲ್ಲಿ ಜಮಾಗೊಂಡ ಸಾರ್ವಜನಿಕರು ಗಾಯಾಳುಗಳನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸಾಗಿಸಿ ಅವರ ಜೀವ ರಕ್ಷಿಸುವ ಬದಲಾಗಿ ಮೂಕ ಪ್ರೇಕ್ಷಕರಾಗಿ ನಿಂತು ತಮ್ಮ ಕರ್ತವ್ಯ ಪ್ರಜ್ಞೆ ಯನ್ನು ಮರೆಯುತ್ತಿರುವುದು ಇತ್ತೀಚಿನ ಬೆಳವಣಿಗೆ. ಹಾಗಂತ ಕರ್ತವ್ಯ ಪ್ರಜ್ಞೆ ಮರೆತರೆ ಪಶ್ಚಾತ್ತಾಪ ಅನ್ನುವ ರೋಗ ನಮ್ಮನ್ನು ಯಾವ ಹಂತಕ್ಕೆ ಕೊಂಡೊಯ್ಯಲಿದೆ ಅನ್ನೋದನ್ನ ನಿರ್ದೇಶಕ ರಂಜಿತ್ ಕುಲಾಲ್ `ಕರ್ಮ’ ಅನ್ನುವ ತುಳು ಕಿರುಚಿತ್ರದ ಮೂಲಕ ತೋರಿಸಲು ಪ್ರಯತ್ನಿಸಿದ್ದಾರೆ.
ಇದು ನಿರ್ದೇಶಕರ ಎರಡನೇ ಪ್ರಯೋಗದ ಚಿತ್ರ ಈ ಹಿಂದೆ `ಸೆಕಂಡ್ ಚಾನ್ಸ್’ ಅನ್ನುವ ಕಿರುಚಿತ್ರ ರಚಿಸಿ,ನಿರ್ದೇಶಿಸಿರುವುದನ್ನು ಇಲ್ಲಿ ನೆನಪಿಸಬಹುದು. ಇವರ ಈ ಹೊಸ ಪ್ರಯತ್ನ ಕ್ಕೆ ಗೆಳೆಯರುಗಳು ರಕ್ಷಿತ್ ಚಿನ್ನು, ಸಚಿನ್ ಶೆಟ್ಟಿ ಕುಂಪಲ, ಹರಿಪ್ರಸಾದ್ ಪೆರಿಂಜೆ ಸಾಥ್ ನೀಡಿದ್ದಾರೆ. ಮುಖ್ಯ ಪಾತ್ರದಲ್ಲಿ ಹೊಸ ಕಲಾವಿದ ಹರಿ ಪ್ರಸಾದ್ ಪೇರಿಂಜೆ ನಟಿಸಲಿದ್ದಾರೆ. ಈ ಚಿತ್ರದ ಯಶಸ್ವಿಗೆ ಕಲಾಭಿಮಾನಿಗಳ ಪ್ರೋತ್ಸಾಹವನ್ನು ನಿರ್ದೇಶಕ ರಂಜಿತ್ ಕುಲಾಲ್ ಮತ್ತು ತಂಡ ಯಾಚಿಸಿದ್ದಾರೆ. ಈ ಕಿರುಚಿತ್ರದಿಂದ ಬಂದ ಸಂಪೂರ್ಣ ಗಳಿಕೆಯನ್ನು ಅನಾಥ ವ್ರದ್ದಾಶ್ರಮಕ್ಕೆ ದೇಣಿಗೆಯಾಗಿ ನೀಡುವ ಉದ್ದೇಶವನ್ನಿಟ್ಟುಕೊಂಡಿರುವ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ.
ಬರಹ : ಸಂತೋಷ್ ಬಜಾಲ್