ಮುಂಬಯಿ : ಕುಡ್ಲದ ಸಿನಿಮಾ ಅಂಗಳದಲ್ಲಿ ಬೆಳೆದು ಬಂದವರಿಗೆ ಬೇಗನೆ ಇತರ ಸಿನಿಮಾ ರಂಗದವರು ಕರೆದು ಅವಕಾಶ ಕೊಡುತ್ತಾರೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಇದಕ್ಕೆ ಸದ್ಯದ ಉದಾಹರಣೆ ಅಮಿತಾ ಸದಾಶಿವ್ ಕುಲಾಲ್. ಶಾರ್ಟ್ ಆಂಡ್ ಸ್ವೀಟ್ ಆಗಿ ಹೇಳುವುದಾದರೆ ಯ್ಯಾಮಿ. ಇವರು ಪಕ್ಕಾ ಕುಡ್ಲದ ಹುಡುಗಿ. ಇಲ್ಲಿಯೇ ಬಾಲ್ಯ ಕಳೆಯುತ್ತಾ ನಂತರ ಬಣ್ಣದ ಬದುಕು ಅರಸಿಕೊಂಡು ಏಕ್ ದಂ ಮುಂಬಯಿಗೆ ಹಾರಿದ ಚಿಗರೆ. ಈಗ ಬಾಲಿವುಡ್ ಅಂಗಳದಲ್ಲಿ ಅನೇಕ ವೀಡಿಯೋ ಆಲ್ಬಮ್ ನಲ್ಲಿ ಅಮಿತಾ ಕಾಣಿಸಿಕೊಂಡರೆ ಮತ್ತೊಂದೆಡೆ ಕನ್ನಡದಲ್ಲೂ ಹ್ಯಾಪಿ ಜರ್ನಿಗೆ ಬುಕ್ ಆಗುವ ಮೂಲಕ ಖಾತೆ ತೆರೆದಿದ್ದಾರೆ.
ಕುಡ್ಲದ ಹುಡುಗಿ
ಮಂಗಳೂರಿನ ಅಮಿತಾ ಕುಲಾಲ್ ಆರಂಭದ ಶಿಕ್ಷಣವನ್ನು ಅಲ್ಲಿಯೇ ಮುಗಿಸಿದ್ದಾರೆ. ಬಣ್ಣದ ಬದುಕಿನ ಕುರಿತು ವಿಶೇಷ ವ್ಯಾಮೋಹ ಇಟ್ಟುಕೊಂಡ ಅಮಿತಾಗೆ ಮುಂಬಯಿ ಕಡೆ ಒಲವು ಬೆಳೆಯಿತು. ಮುಂಬಯಿಯಲ್ಲಿ ಬಣ್ಣದ ಬದುಕಿನ ಜೊತೆಗೆ ರ್ಯಾಂಪ್ ವಾಕ್, ಮಾಡೆಲಿಂಗ್ ದುನಿಯಾದಲ್ಲಿ ಸಂಪೂರ್ಣವಾಗಿ ಕಳೆದುಹೋಗಿದ್ದವರು. ಈಗ ಕರಾವಳಿಗೂ ಭೇಟಿ ಕೊಡುತ್ತಾ ಬಣ್ಣದ ಬದುಕಿನ ಜೊತೆಗೆ ಆಕರ್ಷಣೆ ಬೆಳೆಸಿಕೊಂಡಿದ್ದಾರೆ. ಕನ್ನಡದ ನಿರ್ದೇಶಕ ಶ್ಯಾಮ್ ಮಾಡುತ್ತಿರುವ ಸಿನಿಮಾದಲ್ಲಿ ಅಮಿತಾ ಲೀಡ್ ರೋಲಿನಲ್ಲಿದ್ದಾರೆ. ಇದರಲ್ಲಿ ನಾಯಕನಾಗಿ ಸೃಜನ್ ಲೋಕೇಶ್ ಕಾಣಿಸಿಕೊಂಡಿದ್ದಾರೆ.
ಆಲ್ಬಂನಲ್ಲಿ ಸಕತ್ ಹಾಟ್ !
ಅಮಿತಾಳ ಬಣ್ಣದ ಬದುಕಿನ ಮುನ್ನುಡಿ ಆರಂಭವಾಗಿರುವುದು ಹಿಂದಿ ಆಲ್ಬಮ್ ಗಳ ಮೂಲಕ ಎನ್ನುವುದು ವಿಶೇಷ. ಹಿಂದಿಯಲ್ಲಿ ಬಂಡ `ಝಂಕಾರ್’ ಎನ್ನುವ ವೀಡಿಯೋ ಆಲ್ಬಮ್ ಅಮಿತಾಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿದೆ. ಇದರ ಶ್ರೇಯಸ್ಸು ಬಾಲಿವುಡ್ ನ ಅರುಣ್ ಪ್ರಸಾದ್ ಹಾಗೂ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಅವರಿಗೆ ಸಲ್ಲುತ್ತದೆ ಎನ್ನುವುದು ಅಮಿತಾಳ ಮಾತು. ಈ ಹಾಡು ಅರೇಬಿಕ್ ಶೈಲಿಯಲ್ಲಿ ಇರುವುದರಿಂದ ಅಮಿತಾ ಸಖತ್ ಹಾಟ್ ಆಗಿ ಕುಣಿದಿದ್ದಾರೆ. ಆ ಬಳಿಕ ರಾಜೇಶ್ ಕಪೂರ್ ಅವರ ಆಲ್ಬಮ್ ನಲ್ಲೂ ಕಾಣಿಸಿಕೊಂಡಿರುವ ಅವರು ತಮ್ಮ ನಟನಾ ಕೌಶಲ್ಯ ಮೆರೆದಿದ್ದಾರೆ. ತುಳು ಸಿನಿಮಾದಲ್ಲಿ ಅವಕಾಶ ಸಿಕ್ಕರೆ ಖಂಡಿತವಾಗಿಯೂ ನಟಿಸುವ ಇಚ್ಛೆಇರುವ ಅಮಿತಾ, ಬಿ ಟೌನ್ ನಲ್ಲಿಯೇ ಸಾಕಷ್ಟು ಹೆಸರು ಗಳಿಸಿಕೊಲ್ಲುತ್ತಿದ್ದಾರೆ ಎನ್ನುವುದು ಕುಡ್ಲದ ಸಿನಿಮಾ ಪ್ರೇಮಿಗಳಿಗೆ ಅಭಿಮಾನದ ವಿಷಯವಾಗಿದೆ.