ಉಡುಪಿ: ಪುಟ್ಟಣ್ಣ ಕುಲಾಲ್ ಯುವ ಕಥೆಗಾರ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಕಥೆಗಾರರಾಗಿರುವ ಮಂಜುನಾಥ್ ಕುಲಾಲ್ ಹಿಲಿಯಾಣ ಅವರು ಬರೆದ “ಅಣ್ಣು” ಎಂಬ ನೀಳ್ಗತೆಯನ್ನಾಧರಿಸಿ ರಚಿತಗೊಂಡಿರುವ ಕಲಾತ್ಮಕ ಚಿತ್ರ “ಅಣ್ಣು” ಇದರ ಚಿತ್ರಿಕರಣ ಮೂಹೂರ್ತ ಶಿರಿಯಾರ ಮೆಕ್ಕೆಕಟ್ಟುವಿನ ಪ್ರಸಾದ್ ಶೆಟ್ಟಿಯವರ ಒಡೆತನದ ಪ್ರಸಿದ್ಧ ಗುತ್ತಿನ ಮನೆಯಲ್ಲಿ ಶುಭಾರಂಭಗೊಂಡಿತು.
ರಾಘವೇಂದ್ರ ಕುಲಾಲ್ ಶಿರಿಯಾರ ಅವರು ಈ ಸಿನಿಮಾದ ನಿರ್ಮಾಪಕರಾಗಿದ್ದು ಉಡುಪಿಯ ಪ್ರಸಿದ್ದ ಹಿರಿಯ ರಂಗಕರ್ಮಿ ಬಾಸುಮ ಕೊಡಗು ಈ ‘ಅಣ್ಣು’ ಕಲಾತ್ಮಕ ಸಿನಿಮಾದ ನಿರ್ದೇಶಕರಾಗಿದ್ದಾರೆ. ಸುರೇಂದ್ರ ಪಣಿಯೂರ್ ಅವರು ಕ್ಯಾಮರ್ ಮೆನ್ ಆಗಿದ್ದು, ಲೋಕೇಶ್ ಐರ್ ಬೈಲು ಸಹ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ.
ಮಾರ್ಚ್ 20 ಭಾನುವಾರ ಬೆಳಗ್ಗೆ ನಿವೃತ್ತ ಉಪನ್ಯಾಸಕ ಸಾಹಿತಿ ಬಿ ಎಮ್ ಸೋಮಯಾಜಿ ಅವರು ಕ್ಯಾಮರ ಚಾಲನೆ ಮಾಡುವುದರೊಂದಿಗೆ ಚಿತ್ರಿಕರಣವನ್ನು ಉದ್ಘಾಟಿಸಿದರು.
ಕರಾವಳಿಯಲ್ಲಿ ಬದಲಾಗುತ್ತಿರುವ ಗುತ್ತಿನ ಮನೆ ಮತ್ತು ಮೂಲದಾಳುಗಳ ನಡುವಿನ ಸಂಬಂಧದ ಹರವು ಇರುವ ವಾಸ್ತವಿಕ ಸಂಗತಿಗಳನ್ನು ಈ ‘’ಅಣ್ಣು’’ ಸಿನಿಮಾ ಪ್ರತಿಬಿಂಬಿಸುತ್ತದೆ. ಸುಂದರವಾದ ಒಂದು ಹಾಡು ಈ ಸಿನಿಮಾದಲ್ಲಿದ್ದು ಸಂಭಾಷಣೆಗಳೆಲ್ಲವೂ ಕುಂದಾಪುರ ಕನ್ನಡದಲ್ಲೆ ಇರುವುದು ಈ ಕಲಾತ್ಮಕ ಸಿನಿಮಾದ ವಿಶೇಷತೆ.
ಹಿರಿಯ ರಂಗಭೂಮಿ ನಟ ದಿವಾಕರ ಕಟೀಲು “ಅಣ್ಣು” ಪಾತ್ರವನ್ನು ನಿರ್ವಹಿಸುತಿದ್ದು, ಹಿರಿಯ ನಟಿ ಗೀತಾ ಸುರತ್ಕಲ್ ಗುತ್ತಿನ ಮನೆಯ ಹೆಗ್ಗಡಿತಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಗುತ್ತಿನ ಮನೆಯ ಯಜಮಾನರಾಗಿ ಇನ್ನೋರ್ವ ಹಿರಿಯ ನಟ ‘ರಾಜಗೋಪಾಲ್ ಶೇಟ್’ ಅಭಿನಯಿಸುತ್ತಿದ್ದಾರೆ. ಇನ್ನುಳಿದಂತೆ ಪ್ರಭಾಕರ ಕುಂದರ್, ಶಿವಾನಂದ, ಯೋಗೀಶ್, ರಘು ಪಾಂಡೇಶ್ವರ ಇನ್ನಿತರರು ಅಭಿನಯಿಸುತ್ತಿದ್ದಾರೆ.
ಚಿತ್ರಿಕರಣ ಉದ್ಘಾಟನಾ ಸಮಾರಂಭದಲ್ಲಿ ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆಯ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಸತೀಶ್ ಕುಲಾಲ್ ನಡೂರು, ಬ್ರಹ್ಮಾವರ ಕುಲಾಲ ಸಂಘದ ಕಾರ್ಯದರ್ಶಿ ಬಸವರಾಜ್ ಕುಲಾಲ್ ಇನ್ನಿತ ಗಣ್ಯರು ಉಪಸ್ಥಿತರಿದ್ದರು.