ಪುತ್ತೂರು : ಬೆಳ್ಳಾರೆ ಕುಲಾಲ ಸುಧಾರಕ ಸೇವಾ ಸಂಘದ ವತಿಯಿಂದ ಫೆ.೭ರಂದು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಬೆಳ್ಳಾರೆ ಶಾಖೆಯಲ್ಲಿ ಸಂಘದ ಅಧ್ಯಕ್ಷ ರಾಧಾಕೃಷ್ಣ ಕುಲಾಲ್ ಅದ್ಯಕ್ಷತೆಯಲ್ಲಿ ಮಾಸಿಕ ಸಭೆ ನಡೆಯಿತು. ಈ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಬಾಬು ಮೂಲ್ಯ ಮುಡುಂಗಾರು, ಯಮುನಾ ನೆಟ್ಟಾರು, ಬಾಬು ಮೂಲ್ಯ ನಿಡುಬೆಯವರಿಗೆ ಸಹಾಯಧನ ಸುಮಾರು ೭,೫೦೦ ರೂ. ನೀಡಲಾಯಿತು.
ಮಾರ್ಚ್ ಆರರಂದು ಕುಲಾಲ ಸುಧಾರಕ ಸೇವಾ ಸಂಘದ ವತಿಯಿಂದ ಪೆರುವಾಜೆ ಶ್ರೀ ಜಲದುರ್ಗಾ ದೇವಿ ಸನ್ನಿಧಾನದಲ್ಲಿ ಶ್ರಮದಾನ ಮಾಡುವುದೆಂದು ತೀರ್ಮಾನಿಸಲಾಯಿತು. ಸಭೆಯಲ್ಲಿ ಸಂಘದ ಕಾರ್ಯದರ್ಶಿ ಮೀನಾಕ್ಷಿ ಪಿ ವೈ ಮೂಲ್ಯ, ಖಜಾಂಜಿ ಉಮೇಶ್ ಕುಲಾಲ್ ಪಂಜಿಗಾರು, ಸದಸ್ಯರಾದ ದೀಕ್ಷಿತ್ ಕುಲಾಲ್ , ಪುರಂದರ ಕುಲಾಲ್ ತಡಗಜೆ, ನಾಗೇಶ್ ಕುಲಾಲ್ , ಶಶಿಧರ ಕುಲಾಲ್ , ಕೊರಗಪ್ಪ ಕಲ್ಮಡ್ಕ, ಭಾರತಿ ಮಣಿಮಜಲು, ಕೊರಗಪ್ಪ ಕುಲಾಲ್ ಕಳಂಜ, ರಾಮಣ್ಣ ಕುಲಾಲ್ ನೆಟ್ಟಾರು ಉಪಸ್ಥಿತರಿದ್ದರು.