ಕಾರ್ಕಳ : ಕಾರ್ಕಳ ತಾಲೂಕು ಕೌಡೂರು ಗ್ರಾಮದ ರಂಗನಪಲ್ಕೆ ನಿವಾಸಿ ಸಂತೋಷ ಮೂಲ್ಯ ಮತ್ತು ಪ್ರಫುಲ್ಲ ದಂಪತಿಗಳ ನವಜಾತ ಹೆಣ್ಣು ಮಗು ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದು, ಈ ಕುಟುಂಬವು ಕಡು ಬಡವರಾಗಿದ್ದು, ಇದೀಗ ಮಗುವಿನ ಚಿಕಿತ್ಸೆ ಮುಂದುವರಿಯಲು ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಸಂತೋಷ ಮೂಲ್ಯ ಅವರ ಪತ್ನಿ ಪ್ರಫುಲ್ಲ ಅವರು ಜನವರಿ 27ರಂದು ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಹುಟ್ಟುವಾಗಲೇ ಶ್ವಾಸನಾಳದ ತೊಂದರೆಯಿಂದ ಬಳಲುತ್ತಿರುವುದು ಪರೀಕ್ಷೆಯಿಂದ ಕಂಡು ಬಂದಿದೆ. ಇದೀಗ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಅಲ್ಲಿಯ ವೈದ್ಯರು ಚಿಕಿತ್ಸೆಗಾಗಿ ಸುಮಾರು 1,25,000 ರೂಪಾಯಿ ವೆಚ್ಚ ತಗುಲಬಹುದು ಎಂದು ಅಂದಾಜಿಸಿದ್ದಾರೆ.
ಕೂಲಿ ಕೆಲಸ ಮಾಡಿ ಜೀವಿಸುತ್ತಿರುವ ಸಂತೋಷ ಮೂಲ್ಯ ಕುಟುಂಬ ಇಷ್ಟೊಂದು ದೊಡ್ಡ ಮೊತ್ತವನ್ನು ನೀಡಲು ಅನಮರ್ಥರಾಗಿದ್ದಾರೆ. ಹೀಗಾಗಿ ಸಹೃದಯ ದಾನಿಗಳ ನೆರವು ಯಾಚಿಸಿದ್ದಾರೆ. ಮಾನವೀಯ ನೆಲೆಯಲ್ಲಿ ಸ್ಪಂದಿಸಿ, ಸಹಾಯ ಮಾಡಲಿಚ್ಛಿಸುವವರು ಸಂತೋಷ ಮೂಲ್ಯ ಅವರ ಸಿಂಡಿಕೇಟ್ ಬ್ಯಾಂಕ್ ನ ಬೈಲೂರು ಶಾಖೆಯ ಉಳಿತಾಯ ಖಾತೆ ಸಂಖ್ಯೆ : 01212250009615 IFSC CODE : SYNB0000121 ಗೆ ಹಣ ಕಳಿಸಿಕೊಡಲು ವಿನಂತಿಸಲಾಗಿದೆ. ಸಂತೋಷ ಮೂಲ್ಯ ಅವರ ಮೊಬೈಲ್ ಸಂಖ್ಯೆ : 9164341629.
ಮಗುವಿನ ಚಿಕಿತ್ಸೆಗಾಗಿ ಕುಲಾಲ್ ವರ್ಲ್ಡ್ ಡಾಟ್ ಕಾಂ ನ ವಾಟ್ಸ್ ಆಪ್ ಗ್ರೂಪ್ ನ ವತಿಯಿಂದ ಹಣ ಸಂಗ್ರಹಿಸಿ ಕೊಡಲು ತೀರ್ಮಾನಿಸಲಾಗಿದೆ. `ಕುಲಾಲ್ ವರ್ಲ್ಡ್’ ವಾಟ್ಸ್ ಆಪ್ ಗ್ರೂಪಿನ ಸದಸ್ಯ ಹೇಮಂತ್ ಕುಮಾರ್ ಇವರ ಕೆಳಗಿನ ಖಾತೆಗೆ ಹಣ ಸಂದಾಯ ಮಾಡಿ ಸಹಕರಿಸಬೇಕಾಗಿ ವಿನಂತಿ. ಹಣ ಸಂದಾಯ ಮಾಡಿದ ಪ್ರತಿಯೊಬ್ಬರ ವಿವರವನ್ನು ನೀಡಲಾಗುವುದು.
Hemanth Kumar
Bank : State Bank of India
Branch: Kinnigoli
Account No : 20026035037
IFSC Code : SBIN 0007903
ಹೇಮಂತ್ ಅವರ ಮೊಬೈಲ್ ಸಂಖ್ಯೆ : 9480922412